ಗುರುಸ್ಮರಣೋತ್ಸವದ ನಿಮಿತ್ಯ ಪಾದಯಾತ್ರೆ : ಉದ್ಘಾಟನೆಗಳು

ಕೊಪ್ಪಳ: ಸಂಸ್ಥಾನ ಶ್ರೀಗವಿಮಠದಲ್ಲಿ ದಿನಾಂಕ ೦೨-೦೪-೨೦೧೬  ರಂದು ಶನಿವಾರ  ಶ್ರೀ ಮ.ನಿ.ಪ್ರ.ಜ.ಲಿಂ. ಶ್ರೀಶಿವಶಾಂತವೀರ ಮಹಾಶಿವಯೋಗಿಗಳ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮವು ಜರುಗಲಿದೆ. ಈ ನಿಮಿತ್ಯವಾಗಿ ಪ್ರತಿ ವರ್ಷದ ಪದ್ಧತಿಯಂತೆ ಈ ಸಾರೆಯೂ ಬೆಳಿಗ್ಗೆ  ೬ ಗಂಟೆಗೆ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಶ್ರೀಮಳೆಮಲ್ಲೇಶ್ವರ ದೇವಸ್ಥಾದಿಂದ ಶ್ರೀಗವಿಮಠದವರೆಗೆ ಪಾದಯಾತ್ರೆ ಜರುಗುವದು. ಈ ಪಾದಯಾತ್ರೆಯಲ್ಲಿ ಕೆಲ ನಾಡಿನ ಹರಗುರುಚರ ಮೂರ್ತಿಗಳು ಹಾಗೂ ಅಸಂಖ್ಯಾತ ಭಕ್ತಾಧಿಗಳು ಭಾಗವಹಿಸುವರು. 
ಉದ್ಘಾಟನೆಗಳು
ಸಂಸ್ಥಾನ ಶ್ರೀಗವಿಮಠದಲ್ಲಿ ಜರುಗಲಿರುವ ಶ್ರೀ ಮ.ನಿ.ಪ್ರ.ಜ.ಲಿಂ. ಶ್ರೀಶಿವಶಾಂತವೀರ ಮಹಾಶಿವಯೋಗಿಗಳ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ಅಂಗವಾಗಿ ದಿನಾಂಕ ೦೨-೦೪-೨೦೧೬ ರಂದು ಶನಿವಾರ ಬೆಳಿಗ್ಗೆ ೧೦ ಕ್ಕೆ ಶ್ರೀಗವಿಮಠದ ಆವರಣದಲ್ಲಿ ದಿ.ಶ್ರೀ ನೆಕ್ಕಂಟಿ ರಾಮರಾವ್ ಸಾ.ಗಂಗಾವತಿ ಇವರ ಸ್ಮರಣಾರ್ಥವಾಗಿ ನಿರ್ಮಿಸಿದ ನೂತನ ಮಹಾದಾಸೋಹ ಭವನ ಕಟ್ಟಡವು ಕಲಬುರ್ಗಿಯ ಶರಣಬಸವ ಸಂಸ್ಥಾನದ ಪೀಠಾಧಿಪತಿಗಳಾದ ಡಾ.ಶರಣಬಸಪ್ಪ ಅಪ್ಪ ಇವರ ಅಮೃತ ಹಸ್ತದಿಂದ ಉದ್ಘಾಟನೆಯಾಗಲಿದೆ.
ಅಂದು ಸಂಜೆ ೫.೩೦ ಕ್ಕೆ ಶ್ರೀಗವಿಸಿದ್ದೇಶ್ವರ ಮಹಾವಿದ್ಯಾಲಯದ ಆವರಣದಲ್ಲಿರುವ ವಿದ್ಯಾರ್ಥಿನಿಯರ ನೂತನ ವಸತಿ ನಿಲಯ ಕಟ್ಟಡವನ್ನು ಮಾಜಿ ಸಚಿವೆ ಶ್ರೀಮತಿ ರಾಣಿ ಸತೀಶ  ಹಾಗೂ ನೂತನ ಒಳ ಕ್ರೀಡಾಂಗಣ ಕಟ್ಟಡದ ಉದ್ಘಾಟನೆಯನ್ನು ಬಳ್ಳಾರಿ ವಿಜಯ ನಗರ ಶ್ರೀಕೃಷ್ಣ ದೇವರಾಯ ವಿಶ್ವ ವಿದ್ಯಾಲಯದ ಕುಲಪತಿ ಡಾ. ಎಂ.ಎಸ್. ಸುಭಾಷ ಉದ್ಘಾಟಿಸಲಿದ್ದಾರೆ. 
ಉಚಿತ ಶ್ರವಣಯಂತ್ರ ವಿತರಣೆ , ಹೃದಯ ರೋಗ,  ಕ್ಯಾನ್ಸರ್ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರ
ಸಂಸ್ಥಾನ ಶ್ರೀಗವಿಮಠದಲ್ಲಿ ಜರುಗಲಿರುವ ಶ್ರೀ ಮ.ನಿ.ಪ್ರ.ಜ.ಲಿಂ. ಶ್ರೀಶಿವಶಾಂತವೀರ ಮಹಾಶಿವಯೋಗಿಗಳ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ಅಂಗವಾಗಿ ಇತ್ತೀಚಿಗೆ  ದಿನಾಂಕ: ೨೦.೦೩.೨೦೧೬ ಶ್ರವಣದೋಷ (ಕಿವುಡುತನ) ವಿರುವ ಸುಮಾರು ೫೦೦ ರೋಗಿಗಳ ತಪಾಸಣಾ ಶಿಬಿರವು ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ನಡೆದಿತ್ತು. ಈ ಶಿಬಿರದಲ್ಲಿ ಕೊಪ್ಪಳ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಶ್ರವಣದೋಷ (ಕಿವುಡುತನ) ವಿರುವ ಸುಮಾರು ೫೦೦ ರೋಗಿಗಳು ಭಾಗವಹಿಸಿದ್ದರು. ಈ ಶಿಬಿರದಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ದಿನಾಂಕ ೦೨/೦೪/೨೦೧೬ ಶನಿವಾರ ಬೆಳಿಗ್ಗೆ ೧೦ ರಿಂದ ೪ ಗಂಟೆಯವರೆಗೆ ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ಉಚಿತ ಶ್ರವಣ ಯಂತ್ರವನ್ನು ವಿತರಿಸಲಾಗುವದು.  ಇದಲ್ಲದೇ ಅಂದು ಹೃದಯರೋಗ ಹಾಗೂ ಕ್ಯಾನ್ಸರ್ ತಪಾಸಣಾ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವು ಸಹ ಜರುಗಲಿದೆ .
ಸಾಯಂಕಾಲ ಗುರುಸ್ಮರಣೋತ್ಸವ ಕಾರ್ಯಕ್ರಮ : 
ಕೊಪ್ಪಳ: ಸಂಸ್ಥಾನ ಶ್ರೀಗವಿಮಠದಲ್ಲಿ ಜರುಗಲಿರುವ ಶ್ರೀ ಮ.ನಿ.ಪ್ರ.ಜ.ಲಿಂ. ಶ್ರೀಶಿವಶಾಂತವೀರ ಮಹಾಶಿವಯೋಗಿಗಳ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ಅಂಗವಾಗಿ ದಿನಾಂಕ ೦೨-೦೪-೨೦೧೬ ರಂದು ಶನಿವಾರಸಾಯಂಕಾಲ ೬.೩೦ ಕ್ಕೆ ಶ್ರೀಗವಿಮಠದ ಕೆರೆಯ ದಡದಲ್ಲಿ  ಗುರುಸ್ಮರಣೋತ್ಸವ ಕಾರ್ಯಕ್ರಮ ಜರುಗುವದು. ಇದರಲ್ಲಿ ಷ.ಬ್ರ ಶ್ರೀಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಡೋಣುರು ಚಾನುಕೋಟಿ ಮಠ, ಕೊಟ್ಟುರು,ಡಾ.ಶರಣಬಸಪ್ಪ ಅಪ್ಪ, ಪ.ಪೂಜ್ಯ ಸದ್ಗುರು ಅದ್ವೈತಾನಂದ ಭಾರತಿ ಸ್ವಾಮಿಗಳು ಚಿಕ್ಕುರು,ಶ್ರೀಮತಿ ರಾಣಿ ಸತೀಶ ಹಾಗೂ ಡಾ.ಎಂ.ಎಸ್ ಸುಭಾಷ  ಭಾಗವಹಿಸಲಿದ್ದಾರೆ. ಇದೇ ವೇದಿಕೆಯಲ್ಲಿ ಶ್ರೀಶಿವರುದ್ರಯ್ಯ ಗವಾಯಿಗಳು ಗಡಿಗಾಂವ್, ಕಲಬುರ್ಗಿ ಇವರಿಂದ ಸಂಗೀತ ಸೇವೆಯಿದೆ.  
Please follow and like us:
error