೨೬ ನೇ ಬೆಳಕಿನೆಡೆಗೆ ಕಾರ್ಯಕ್ರಮ

ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದಲ್ಲಿ ಪ್ರತಿ ಅಮವಾಸ್ಯೆಯ ದಿನದಂದು ಜರುಗುವ ಬೆಳಕಿನೆಡೆಗೆ ೨೬ ನೇ ಮಾಸಿಕ ಕಾರ್ಯಕ್ರಮ ಹಾಗೂ ನೂತನ ಹರಕೆ ತೇರಿನ ಉದ್ಘಾಟನಾ ಕಾರ್ಯಕ್ರಮವು ದಿನಾಂಕ ೨೪-೧೨-೨೦೧೧ ರಂದು ಶನಿವಾರ, ಶ್ರೀಮಠದ ಕೆರೆಯ ದಡದಲ್ಲಿ ಸಂಜೆ ೬.೩೦ಕ್ಕೆ ಜರುಗುವದು.  ಕೃಷ್ಣ ಕುಲಕರ್ಣಿ ಕುಕನೂರು ಅವರಿಂದ ಪ್ರವಚನವಿದೆ. ಕನಕಗಿರಿಯ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ   ಶಂಕರ ಬಿನ್ನಾಳ ಅವರಿಂದ ಸಂಗೀತ ಕಾರ್ಯಕ್ರಮವಿರುತ್ತದೆ. ಈ ಭಕ್ತಿಸೇವೆಯನ್ನು ಶ್ರೀಮತಿ ಉಮಾದೇವಿ ಕೆ. ಶಿವರೆಡ್ಡಿ ಕಾರಟಗಿ ವಹಿಸಿದ್ದಾರೆ. ಸದ್ಭಕ್ತರು ಈ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಶ್ರೀಮಠದ ಪ್ರಕಠಣೆ ತಿಳಿಸಿದೆ. 
Please follow and like us:
error