ಉಪನ್ಯಾಸ ಕಾರ್ಯಕ್ರಮ.

ಕೊಪ್ಪಳ-23- ನಗರದ ಶ್ರೀಗವಿಸಿದ್ಧೇಶ್ವರ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನ ವಿಜ್ಞಾನ ಸಂಘದ ವತಿಯಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಶ್ರೀ ಗವಿಸಿದ್ಧೇಶ್ವರ ಮಹಾವಿದ್ಯಾಲಯದ ಸಭಾಂಗಣದಲ್ಲಿ, ೨೨ರಂದು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಮಂಜುನಾಥ ಚೆಟ್ಟಿ, ಐ
    ಕಾರ್ಯಕ್ರಮದ ಸ್ವಾಗತವನ್ನು ಪ್ರೊ. ಪ್ರತಾಪ್ ಬಾಬುರಾವ್ ಇವರು ನೆರವೇರಿಸಿದರು ಮತ್ತು    ಡಾ|| ಆರ್. ಮರೆಗೌಡ ಇವರು ಅತಿಥಿ ಪರಿಚಯ ಮಾಡಿದರು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಶ್ರೀ ಮಂಜುನಾಥ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕೊನೆಯದಾಗಿ ಜಹಿರಾ ಮೇಡಂ ಇವರು ಕಾರ್ಯಕ್ರಮದಲ್ಲಿ ವಂದನೆಯನ್ನು ಸಲ್ಲಿಸಿದರು.

.ಐ.ಎಸ್.ಇ.ಆರ್, ಕೋಲ್ಕತ್ತಾ ಇವರು ಆಗಮಿಸಿದ್ದರು. ಇವರು ವಿಜ್ಞಾನ ಮತ್ತು ಸಂಶೋಧನೆ ಕ್ಷೇತ್ರದಲ್ಲಿ ಇರುವ ಉದ್ಯೋಗದ ಅವಕಾಶಗಳು ಮತ್ತು ಸಂಶೋಧನ ಕ್ಷೇತ್ರದಲ್ಲಿ ಪದವಿ & ಪದವಿ ಪೂರ್ವ ವಿದ್ಯಾರ್ಥಿಗಳಿಗೆ ಇರುವ ಅವಕಾಶಗಳ ಬಗ್ಗೆ ಮತ್ತು ಮೂಲ ವಿಜ್ಞಾನ ಕ್ಷೇತ್ರದ ಅವಶ್ಯಕತೆ ಹಾಗೂ ಇದರಲ್ಲಿ ಇರುವ ಉದ್ಯೋಗ ಉಪಯುಕ್ತಗಳು ಮತ್ತು ಅವಕಾಶಗಳ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿಗಳಾದ ಡಾ|| ಆರ್. ಮರೆಗೌಡ್, ಪ್ರಾಂಶುಪಾಲರಾದ ಶ್ರೀ ಎಂ.ಎಸ್.ದಾದ್ಮಿ, ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

Please follow and like us:
error