ಹನುಮಂತಪ್ಪ ಅಂಡಗಿಯವರಿಗೆ ರಾಜ್ಯಮಟ್ಟದ ಕನಕ ಗೌರವ ಪ್ರಶಸ್ತಿ ಪ್ರದಾನ

 ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ. ಪಾಟೀಲ ಪುಟ್ಟಪ್ಪ ಸಭಾ ಭವನದಲ್ಲಿ ಕರ್ನಾಟಕ ಸರಕಾರದ ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ ರಾಜ್ ಸಚಿವರಾದ ಹೆಚ್.ಕೆ ಪಾಟೀಲರವರು ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಅರ್ಥಶಾಸ್ರ್ತ ಉಪನ್ಯಾಸಕರಾದ ಹನುಮಂತಪ್ಪ ಅಂಡಗಿ ಚಿಲವಾಡಗಿಯವರಿಗೆ  ರಾಜ್ಯಮಟ್ಟದ ಕನಕ ಗೌರವ ಪ್ರಶಸ್ತಿ ಪ್ರದಾನ ಮಾಡಿದರು. 
ಧಾರವಾಡದ ರೇವಣಸಿದ್ದೇಶ್ವರ ಮನಸೂರ ಮಠದ ಪೀಠಾಧಿಪತಿಗಳಾದ ಬಸವರಾಜ ದೇವರು, ನಾಡೋಜ ಡಾ. ಪಾಟೀಲ ಪುಟ್ಟಪ್ಪ, ಸಮಾಜವಾದಿ ಪಕ್ಷದ ಅಧ್ಯಕ್ಷರಾದ ಬಾಬಾಗೌಡ ಪಾಟೀಲ, ಮಾಜಿ ಸಂಸದರಾದ ಅಮರಸಿಂಹ ಪಾಟೀಲ,ಮಾಜಿ ಸಚಿವರು ಹಾಗೂ ವಿಧಾನ ಪರಿಷತ್ತಿನ ಸದಸ್ಯರಾದ ಬಸವರಾಜ ಹೊರಟ್ಟಿ, ಧಾರವಾಡ ಶಾಸಕರಾದ ವಿನಯ ಕುಲಕರ್ಣಿ, ಕುಂದಗೋಳ ಶಾಸಕರಾದ ಸಿ.ಎಸ್.ಶಿವಳ್ಳಿ, ಸಾಹಿತಿಗಳಾದ ಡಾ. ಶ್ರೀರಾಮ ಇಟ್ಟಣ್ಣನವರ, ಮೋಹನ ನಾಗಮ್ಮನವರ, ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯದ ಕುಲಪತಿಗಳಾದ ಡಾ. ಹೆಚ್.ಬಿ.ವಾಲಿಕಾರ, ಬಳ್ಳಾರಿಯ ಲೋಹಿಯಾ ಪ್ರಕಾಶನದ ಸಿ.ಚನ್ನಬಸವಣ್ಣ, ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 
Please follow and like us:
error