You are here
Home > Koppal News > ಯುವ ವಿಜ್ಞಾನಿ ಪ್ರಶಸ್ತಿ

ಯುವ ವಿಜ್ಞಾನಿ ಪ್ರಶಸ್ತಿ

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ೨೦೧೪-೨೦೧೫ನೇ ಸಾಲಿನ ಯುವವಿಜ್ಞಾನಿ ಪ್ರಶಸ್ತಿಗಾಗಿ ೯ ರಿಂದ ೧೨ನೇ ವರ್ಗದಲ್ಲಿ ಓದುತ್ತಿರುವ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಈ ಪ್ರಶಸ್ತಿಯನ್ನು  ಕರ್ನಾಟಕ  ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಾಯೋಜಕತ್ವದಲ್ಲಿ  ಸ್ಥಾಪಿಸಲಾಗಿದ್ದು, ವೈಜ್ಞಾನಿಕ ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ತೋರಿದ ವಿದ್ಯಾರ್ಥಿಗಳನ್ನು ಆಯ್ದು, ಪ್ರಶಸ್ತಿಪತ್ರ ಹಾಗೂ ನಗದು ಬಹುಮಾನಗಳನ್ನು ಗೌರವಿಸಲಾಗುತ್ತಿದೆ.
ವಿಜ್ಞಾನ ಶಿಕ್ಷಣ ಮತ್ತು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನವನ್ನು ಸಮಾಜದ ಅಭಿವೃದ್ದಿಗೆ  ಬೆಸೆಯುವ ಒಂದು ಅಭೂತಪೂರ್ವ ಪ್ರಯತ್ನವಾಗಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಈ ಯೋಜನೆಯನ್ನು ಕೈಗೊಂಡಿದೆ.
ಎಳೆಯ ವಯಸ್ಸಿನಲ್ಲೇ ’ವೈಜ್ಞಾನಿಕ ವಿಧಾನ’ದ ಮನವರಿಕೆ ಮಾಡುವದು, ಭವಿಷ್ಯದ ವಿಜ್ಞಾನಿಗಳನ್ನಾಗಿ ರೂಪಿಸುವದು ರಾಜ್ಯದ / ರಾಷ್ಟ್ರದ ವೈಜ್ಞಾನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು  ಅವಕಾಶ ನೀಡುವದು, ಮೂಲ ವಿಜ್ಞಾನ ವಿಷಯಗಳಲ್ಲಿ ಆಸಕ್ತಿ ಹಾಗೂ ಕೌಶಲ್ಯವನ್ನು ವರ್ಧಿಸಬೇಕೆಂದು ಕರಾವಿಪದ ಉದ್ದೇಶ.
ಈ ಯೋಜನೆಯಲ್ಲಿ ಭಾಗವಹಿಸಲು ಇಚ್ಛಿಸುವ ವಿದ್ಯಾರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖೆ ಅಥವಾ ಕರಾವಿಪ ವೆಬ್‌ಸೈಟ್ (www.krvp.org)¤ನಿಂದ ಅರ್ಜಿ ಮಾಹಿತಿಯನ್ನು ಪಡೆಯಬಹುದು. ಸೂಕ್ತ ದಾಖಲೆಗಳೊಂದಿಗೆ  ಭರ್ತಿಮಾಡಿದ ಅರ್ಜಿಯನ್ನು ಡಿಸೆಂಬರ್ ೩೧ ೨೦೧೪ರೊಳಗಾಗಿ ತಮ್ಮ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ  ಕಛೇರಿಗೆ ಸಲ್ಲಿಸುವದು ಜಿಲ್ಲಾ ಮಟ್ಟದ ಸ್ಪರ್ಧೆಯನ್ನು ದಿನಾಂಕ ೧೭-೦೧-೨೦೧೫ ರಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಏಕಕಾಲದಲ್ಲಿ ಆಯೋಜಿಸಲಾಗುವದು. ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಯುವವಿಜ್ಞಾನಿ  ಜನವರಿ ಕೊನೆಯ ವಾರದಲ್ಲಿ  ರಾಜ್ಯಮಟ್ಟದ  ಸ್ಪರ್ಧೆಯಲ್ಲಿ  ಭಾಗವಹಿಸಲು ಅರ್ಹತೆ ಪಡೆಯುತ್ತಾನೆ.
ಆಸಕ್ತ ವುದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ೦೮೦-೨೬೭೧೮೯೩೯ ಅಥವಾ ಕರಾವಿಪ ವೆಬ್‌ಸಯಟ್ ತಿತಿತಿ.ಞಡಿvಠಿ.oಡಿg www.krvp.org    ಸಂಪರ್ಕಿಸುವದು.

Leave a Reply

Top