You are here
Home > Koppal News > ಸ್ವಾಮಿ ವಿವೇಕಾನಂದರ ೧೫೧ನೇ ಜಯಂತಿ

ಸ್ವಾಮಿ ವಿವೇಕಾನಂದರ ೧೫೧ನೇ ಜಯಂತಿ

       ಕೊಪ್ಪಳ.ಜ.೨೮:- ಸ್ವಾಮಿ ವಿವೇಕಾನಂದರ ೧೫೧ನೇ ಜಯಂತಿ ಕೊಪ್ಪಳ ತಾಲೂಕಿನ ಬಿಸರಹಳ್ಳಿ ಗ್ರಾಮದ ಶ್ರೀಗವಿಸಿದ್ಧೇಶ್ವರ ದೇವಾಸ್ಥಾನದ ಆವರಣದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮೊದಲು ಯುವಕರೆಲ್ಲರೂ ಗ್ರಾಮದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಶರಣಪ್ಪ ಹದ್ಲಿ ಇವರ ನೆತೃತ್ವದಲ್ಲಿ ಸೇರಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರವನ್ನು ಮೆರವಣಿಗೆ ಮಾಡುವುದರ ಜೊತೆಗೆ ಶೋಭಾಯಾತ್ರೆಯನ್ನು ಮಾಡಿದರು. ನಂತರ ಸ್ವಾಮಿ ವಿವೇಕಾನಂದರ ಜಯಂತಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು, ಕಾರ್ಯಕ್ರಮದ ಅಧ್ಯಕ್ಷತಯನ್ನು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಶರಣಪ್ಪ ಹದ್ಲಿಯವರು ವಹಿಸಿದ್ದರು,
 ಮುಖ್ಯ ವಕ್ತಾರರಾಗಿ ವಸಂತ ಪೂಜಾರ ಆರ್.ಎಸ್.ಎಸ್. ಜಿಲ್ಲಾ ವ್ಯವಸ್ಥ ಪ್ರಮುಖರು ಆಗಮಿಸಿದ್ದರು, ಪ್ರಾಸ್ತಾವಿಕವಾಗಿ ಮಲ್ಲಿಕಾರ್ಜುನ ಕಾಟಿ ಎ.ಬಿ.ವಿ.ಪಿ. ನಗರ ಸಹಕಾರ್ಯದರ್ಶಿ ಮಾತನಾಡಿದರು, ಮೌನೇಶ ಕಮ್ಮಾರ ಎ.ಬಿ.ವಿ.ಪಿ. ಜಿಲ್ಲಾ ಸಂಚಾಲಕ ಸ್ವಾಗತ ಮತ್ತು ಪರಿಚಯವನ್ನು ಮಾಡಿದರು, ನಿರೂಪಣೆಯನ್ನು ಪರುಶುರಾಮ ಡಂಬಳ, ಹಾಗೂ ವಂದನಾರ್ಪಣೆಯನ್ನು ಚನ್ನಬಸವ ವಿ ಕೊನಸಾಗರ ಮಾಡಿದರು. ಹಾಗೂ ಕಾರ್ಯಕ್ರಮದಲ್ಲಿ ಕೊಪ್ಪಳ ಎ.ಬಿ.ವಿ.ಪಿ. ಕಾರ್ಯಕರ್ತರು, ಗ್ರಾಮದ ಯುವಕರು, ಕಾಲೇಜು ಮತ್ತು ಶಾಲಾ ವಿದ್ಯಾರ್ಥಿಗಳು, ಇತರರು ಪಾಲ್ಗೊಂಡಿದ್ದರು.  

Leave a Reply

Top