You are here
Home > Koppal News > ಆಯ್.ಎಮ್.ಸಿ ಕೋಟಾದಡಿ ಐ.ಟಿ.ಐ ಪ್ರವೇಶಾತಿ ಅರ್ಜಿ ಆಹ್ವಾನ.

ಆಯ್.ಎಮ್.ಸಿ ಕೋಟಾದಡಿ ಐ.ಟಿ.ಐ ಪ್ರವೇಶಾತಿ ಅರ್ಜಿ ಆಹ್ವಾನ.

ಕೊಪ್ಪಳ, ಜು.೦೨ – ಉದ್ಯೋಗ ಮತ್ತು ತರಬೇತಿ ಇಲಾಖೆ ವತಿಯಿಂದ ಕೊಪ್ಪಳದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಯ್.ಎಮ್.ಸಿ ಕೋಟಾದಡಿ ಐ.ಟಿ.ಐ ಪ್ರವೇಶಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಸಂಸ್ಥೆಯಲ್ಲಿ ಆಯ್.ಎಮ್.ಸಿ ಕೋಟಾದಡಿ ಫಿಟ್ಟರ್ (ಎನ್‌ಸಿವಿಟಿ)-೦೫ ಮತ್ತು ಎಲೆಕ್ಟ್ರಿಷಿಯನ್ (ಎನ್‌ಸಿವಿಟಿ)-೦೫ ಸೀಟುಗಳಿಗೆ ಪ್ರವೇಶ ಪ್ರಕ್ರಿಯೆ ನಡೆಯಲಿದೆ. ಎಸ್.ಎಸ್.ಎಲ್.ಸಿ ಪಾಸಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಅರ್ಜಿ ನಮೂನೆಯನ್ನು ಕೊಪ್ಪಳದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪಡೆಯಬಹುದಾಗಿದ್ದು, ಜುಲೈ.೧೦ ಅರ್ಜಿ ಸಲ್ಲಿಸಲು ಕೊನೆ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಪ್ರಾಚಾರ್ಯರು ದೂರವಾಣಿ ಸಂಖ್ಯೆ : ೦೮೫೩೯-೨೨೧೩೬೭ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದೆ.

Leave a Reply

Top