ವಿದ್ಯಾರ್ಥಿಗಳ ಜೀವನ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅಮೂಲ್ಯವಾದದ್ದು-ಯಾಳಗಿ.


ಕೊಪ್ಪಳ- ಸೆ.೦೫, ಸಮಾಜದಲ್ಲಿ ಜನಿಸುವ ಪ್ರತಿಯೊಬ್ಬ ಮಾನವ ಜೀವಿಗೂ ಬುದ್ದಿವಂತರನ್ನಾಗಿ ಬೆಳೆಸುವಲ್ಲಿ ಪ್ರತಿಯೊಂದು ಹಂತದಲ್ಲಿ ಶಿಕ್ಷಕರ ಪಾತ್ರವು ಅತ್ಯಂತ ಅಮೂಲ್ಯವಾದದ್ದು ಎಂದು ಬನ್ನಿಕಟ್ಟಿ ಸರ್ಕಾರಿ ಪ್ರೌಢಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಪರಮಾನಂದ ಯಾಳಗಿ ಹೇಳಿದರು.
ಅವರು ನಗರದ ಬನ್ನಿಕಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ಯ ಡಾ|| ಸರ್ವಪಲ್ಲಿ ರಾಧಕೃಷ್ಣನವರ ಭಾವಚಿತ್ರಕ್ಕೆ ವಿದ್ಯಾರ್ಥಿಗಳೊಂದಿಗೆ ಕೇಕ್ ಕತ್ತರಿಸುವ ಮೂಲಕ ೧೨೮ನೇ ಜನ್ಮದಿನಾಚರಣೆಯನ್ನು ಆಚರಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ಕೆಳಹಂತದ ವಿದ್ಯಾಕೇಂದ್ರಗಳಿಂದ ಪ್ರಾರಂಭಗೊಂಡು ವಿಶ್ವವಿದ್ಯಾಲಯದ ಮಟ್ಟದವರೆಗೂ ಪ್ರತಿಯೊಬ್ಬರನ್ನು ಒಳ್ಳೆಯ ವಿದ್ಯಾವಂತರನ್ನಾಗಿ ಮಾಡುವವರೇ ಶಿಕ್ಷಕರು. ಸಮಾಜ ಹಾಗೂ ದೇಶಕ್ಕೆ ಒಳ್ಳೆಯ ನಾಗರೀಕರನ್ನು ಸೃಷ್ಠಿಗೊಳಿಸಿ ಕೊಡುವ ಶಿಲ್ಪಿಗಳೇ ಶಿಕ್ಷಕರು ಎನ್ನುವುದನ್ನು ಅರಿತಿದ್ದ ಡಾ|| ಸರ್ವಪಲ್ಲಿ ರಾಧಕೃಷ್ಣನವರು ಭಾರತದಲ್ಲಿ ತಮ್ಮ ಜನ್ಮ ದಿನಾಚರಣೆ ಬದಲಾಗಿ ಶಿಕ್ಷಕರ ದಿನಾಚರಣೆಯನ್ನಾಗಿ ಆಚರಿಸಲು ದೇಶಕ್ಕೆ ಕೇಳಿಕೊಂಡರು, ಅವರ ಈ ಮಾನವ ಕಲ್ಯಾಣದ ದೂರದರ್ಶಿತ್ವದ ವಿಚಾರದಶಿಕ್ಷಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿ ದೇಶದ ಏಳ್ಗಿಗೆಗಾಗಿ ನಾವೆಲ್ಲರೂ ಪ್ರಯತ್ನಿಸೋಣ ಎಂದರು.
    ಹಿರಿಯ ಶಿಕ್ಷಕಿಯಾದ ಪ್ರೇಮಾವತಿ ಪಾಟೀಲ ಮಾತನಾಡಿ ಈ ದಿನದಂದು ಎಲ್ಲಾ ವಿದ್ಯಾರ್ಥಿಗಳು ಒಂದಡೆ ಕುಳ್ಳಿರಿಸಿ ಅವರ ಜೀವನದಲ್ಲಿ ವಿದ್ಯೆಯ ಮಹತ್ವ, ವಿದ್ಯೆ ಕಲಿಸುವ ಪ್ರತಿಯೊಬ್ಬ ಗುರುವಿನ ಮಹತ್ವ ವಿದ್ಯಾರ್ಜನೆ ಮಾಡುವ ವಿದ್ಯಾರ್ಥಿಗಳಲ್ಲಿ ಅವಶ್ಯಕವಾಗಿ ಇರಲೇಬೇಕಾದಂತ ಒಳ್ಳೆಯ ಸನ್ನಡತೆ ಗುರುಹಿರಿಯರಲ್ಲಿ ವಿದೇಯಕ ಮುಂತಾದ ಉದ್ದೇಶವೇ ಅವರ ಜನ್ಮದಿನಾಚರಣೆಯ ಮಹತ್ವವೆಂದು ಹೇಳಿದರು.
    ಶಾಲೆಯ ಮುಖ್ಯೋಪಾದ್ಯಾಯರಾದ ಕರಿಬಸಪ್ಪ ಪಲ್ಲೇದ ಮಾತನಾಡಿ ಇತ್ತೀಚಿನ ದಿನಗ
    ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರಾದ ರಾಮರಡ್ಡೆಪ್ಪ ರಡ್ಡೇರ ತಾಹೇರಾಬೇಗಂ, ವೀರಯ್ಯ ಒಂಟಿಗೋಡಿಮಠ, ಮಂಜುಳಾ ನಾಲ್ವಾಡ, ಶೈಲಜಾ ಎಚ್. ಸೇರಿದಂತೆ ವಿದ್ಯಾರ್ಥಿಗಳು ಮಾತನಾಡಿದರು.
    ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಮಂಜುಳಾ ನಾಲ್ವಾಡ ಶೋಭಾ ಗಡಾದ, ಮಂಜುಳಾ ಎಂ, ಶಾರದಮ್ಮ ತಳಕಲ್ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಳಲ್ಲಿ ಉತ್ತಮ ಗುಣಗಳ್ಳುಳ್ಳ ವ್ಯಕ್ತಿಗಳನ್ನು ಆಕರ್ಷಿಸುವುದು ಕಷ್ಟದ ಕೆಲಸವಾಗಿದೆ. ಹಲವಾರು ಅನೇಕ ಕಾರಣಗಳಿಂದ ಶಿಕ್ಷಕ ವೃತ್ತಿಗೆ ಬರುತ್ತಾರೆ, ಅರೆ ಮನಸ್ಸಿನಿಂದ ವೃತ್ತಿ ಮುಂದುವರಿಸುತ್ತಾರೆ. ಇಂತಹ ಜನರಿಂದ ಉತ್ತಮ ಗುಣಮಟ್ಟದ ಶಿಕ್ಷಣ ನಿರಿಕ್ಷಿಸುವುದು ಕಷ್ಟದ ಕೆಲಸ. ಆದರೆ ಒಮ್ಮೆ ಶಿಕ್ಷಕನಾಗಿ ನೇಮಕಗೊಂಡ ನಂತರವಾದರೂ ಶಿಕ್ಷಕರು ತಮ್ಮ ನೈತಿಕ ಜವಾಬ್ದಾರಿಯನ್ನು ಅರಿತು ಉತ್ತಮ ಭೋದನೆ ಮಗುವಿನ ವ್ಯಕ್ತಿತ್ವ ವಿಕಾಸದ ಚಟುವಟಿಕೆಗಳ ಮೂಲಕ ಒಂದು ಉತ್ತಮ ಪರಂಪರೆಯನ್ನು ನಿರ್ಮಾಣ ಮಾಡಬೇಕೆಂಬ ಸಾಮಾಜಿಕ ಕಳಕಳಿಯಿದ್ದರೆ ನಾವು ಆಚರಿಸುವ ಶಿಕ್ಷಕರ ದಿನಾಚರಣೆ ಸಾರ್ಥಕವಾಗುತ್ತದೆ ಎಂದು ಹೇಳಿದರು.

Please follow and like us:
error