ರಾಜ್ಯ ಸರಕಾರ ಸಾಹಿತಿಗಳಿಗೆ ಗುಂಡೆಟು ಭಾಗ್ಯ ಕಲ್ಪಿಸಿದೆ ನಿವೃತ್ತ ನ್ಯಾ.ಮಿಟ್ಟಲಕೋಡ್.

ಯಲಬುರ್ಗಾ-12- ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ಜನತೆಗೆ ನಾನಾ ಭಾಗ್ಯ ಯೋಜನೆ ನೀಡಿದೆ. ಆದರಂತೆ ಸಾಹಿತ್ಯಗಳಿಗೆ ಗುಂಡೆಟು ಬಲಿ ಭಾಗ್ಯ ಒದಗಿಸಿದೆ. ಎಂದು ಧಾರವಾಡ ನಿವೃತ್ತ ಜಿಲ್ಲಾ ನ್ಯಾಯಧೀಶ ಎಸ್.ಎಚ್. ಮಿಟ್ಟಲಕೋಡ್ ಹೇಳಿದರು.
     ಪಟ್ಟಣದ ಎಸ್.ಎ ನಿಂಗೋಜಿ ಬಿಇಡಿ ಕಾಲೇಜಿನ ಆವರಣದಲ್ಲಿ ಜಿಲ್ಲಾ ಕಸಾಪ ವತಿಯಿಂದ ಭಾನುವಾರ ಸಂಜೆ ಏರ್ಪಡಿಸಿದ್ದ  ಶತಮಾನೋತ್ಸವದ ಕನ್ನಡ ವರ್ಷಾಚರಣೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ರಾಜ್ಯದಲ್ಲಿ ಕಳೆದ ಎರಡುವರೆ ವರ್ಷ ಗಳಿಂದ ಆಡಳಿತ ನಡೆಸುವ ಸರ್ಕಾರವೂ ನಾನಾ ಭಾಗ್ಯ ಕರುಣಿಸಿದ ಕೀರ್ತಿ ಸರ್ಕಾರಕ್ಕೆ ಸಲ್ಲುತ್ತದೆ.ಆದರೆ ಇತ್ತೀಚೆಗೆ  ಹಿರಿಯ ಸಾಹಿತಿ ದಿ. ಎಂ.ಎಂ. ಕಲಬುರಗಿ ಅವರನ್ನು ಹಾಡುಗಲೇ ಗುಂಡಿನ ಮೂಲಕ ಕೊಲೆ ಮಾಡಿದ್ದಾರೆ. ಆದರೂ ಹಂತಕರನ್ನು ಬಂಧಿಸದೇ ಇರವುದು ನಾಚಿಗೇಡಿತನ ಸರ್ಕಾರವಾಗಿದೆ ಎಂದು ಕಿಡಿಕಾರಿದರು.ಸಾಹಿತಿಗಳಿಗೆ ಸೂಕ್ತವಾದ ರಕ್ಷಣೆ ನೀಡುವಲ್ಲಿ ಸರಕಾರವೂ ಸಂಪೂರ್ಣ ವಿಫಲಗೊಂಡಿದೆ. ಸದಾ ಕಾಲ ಕನ್ನಡಕ್ಕಾಗಿ ಸೇವೆ ಸಲ್ಲಿಸುತ್ತಿರುವ ಈ ರೀತಿ ಕಗ್ಗೋಲೆ ಯಾಗುತ್ತಿರವುದು ವಿಷಾದನೀಯ ಎಂದು ಹೇಳಿದರು.
      ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಮಾತನಾಡಿ, ಪ್ರತಿಯೊಬ್ಬ ಕನ್ನಡಿಗ ನೆಲ, ಜಲ, ಭಾಷೆಯ ಸಂರಕ್ಷಣೆಗೆ ಶ್ರಮಿಸುವ ದಿಟ್ಟತನ ಬೆಳೆಸಿಕೊಳ್ಳಬೇಕು. ಕನ್ನಡದ ರಕ್ಷಣೆಗೆ ಎಲ್ಲಾರು ಬದ್ಧರಾಗಿ ನಡೆಯಬೇಕಿದೆ.ರಾಜ್ಯ ಸರಕಾರಕ್ಕೆ ೩೦೦ ಕ್ಕೂ ಹೆಚ್ಚು ಸಲ ಕನ್ನಡದ ಸಮರ್ಪಕವಾಗಿ ಆಡಳಿತ ಭಾಷೆಗೆ ಆದ್ಯತೆ ನೀಡುತ್ತಾ ಮನವಿ ಸಲ್ಲಿಸುತ್ತಾ ಬಂದಿದ್ದರೂ ಆಡಳಿತ ನಡೆಸದೇ ಯಾವುದೇ ಸರಕಾರವು ಸರಿಯಾಗಿ ಸ್ಪಂದಿಸದೇ ಇರವುದು ದುಖ:ಕರ ಸಂಗಾತಿ  ಎಂದರು. ನಮ್ಮ ಸಾಹಿತಿಗಳಿಗೆ ರಕ್ಷಣಯಿಲ್ಲದೆಕ್ಕಾಗಿ ಗುಂಡಿಗೆ ಬಲಿಯಾಗುತ್ತಿದ್ದರೆ. ಇಂತಹ ಸ್ಥಿತಿಯಲ್ಲಿ ಸರ್ಕಾರ ಭದ್ರತೆ ನೀಡದೇ ನಿರ್ಕಕ್ಷ್ಯ ವಹಿಸಿವದು ಘೋರ ದುರಂತವಾಗಿದೆ ಎಂದರು.  ಸಾಹಿತಿಗಳಾದ ರವಿತೇಜ ಅಬ್ಬಿಗೇರಿ, ಮಾತನಾಡಿ ಶತಮಾನಗಳ ಕಾಲ ಕಸಾಪ ಕನ್ನಡದ ಸದಾ  ಐಕ್ಯತೆಗೆ ಶ್ರಮಿಸಿದೆ. ಅನೇಕ ಸಾಹಿತಿಗಳನ್ನು ಸಮ್ಮೇಳನಾಧ್ಯಕ್ಷರನ್ನ ಮಾಡುವ ಗುರುತಿಸಿ ಗೌರವಿಸುವ ಕೆಲಸ ಕಸಾಪ ಮಾಡಿದೆ. ಒಂದೇ ವೇದಿಕೆಯ ಮೂಲಕ  ಕನ್ನಡದ ಕಂಪನ್ನು ಕಿಚ್ಚು ಹಚ್ಚಿಸುವ ಕಾರ್ಯ ಶ್ಲಾಘನೀಯವಾಗಿದ್ದು, ಜಿಲ್ಲೆಯಲ್ಲಿ ಕ್ರಿಯಾಶೀಲತೆಯಿಂದ ಜಿಲ್ಲಾ ಕಸಾಪ ಅಧ್ಯಕ್ಷ ವೀರಣ್ಣ ನಿಂಗೋಜಿ ಅವರು ಉತ್ತಮವಾದ ಕಾರ್ಯ ನಿರ್ವಹಿಸಿದ್ದಾರೆ. ತಮ್ಮ ವೈಯಕ್ತಿಕ ವಿಚಾರಕ್ಕಿಂತ ಹೆಚ್ಚು ಸಮಯ ಸಾಹಿತ್ಯಕ್ಕೆ ಮೀಸಲುಟ್ಟು ಸಾಹಿತ್ಯವನ್ನು ಜಿಲ್ಲೆಯಲ್ಲಿ ಹೆಮ್ಮರವಾಗಿ ಬೆಳಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು. ಜಿಲ್ಲಾಧ್ಯಕ್ಷ ವೀರಣ್ಣ ನಿಂಗೋಜಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನನ್ನ ಅವಧಿಯಲ್ಲಿ ಎಲ್ಲಾ ವರ್ಗದವರಿಗೆ ಸಮ್ಮೇಳನ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಮೂರು ವರ್ಷಗಳ ಕಾಲ ಕಸಾಪಕ್ಕೆ ಸೇವೆ ಸಲ್ಲಿಸಿರವುದು.ನನಗೆ ತೃಪ್ತಿ ತಂದಿದೆ. ಸದಾ ಕಾಲ ಕನ್ನಡ ಸೇವೆ ಸಲ್ಲಿಸವುದೇ ನನ್ನ ಮುಖ್ಯ ಉ
      ಪಟ್ಟಣದ ಶ್ರೀಧರ ಮುರಡಿ ಹಿರೇಮಠ ಶ್ರೀ ಬಸವಲಿಂಗೇಶ್ವರ ಶಿವಾಚಾರ್ಯರು ದಿವ್ಯ ಸಾನ್ನಿಧ್ಯವಹಿಸಿದ್ದರು. ಸಾಹಿತಿಗಳಾದ ಕೆ.ಬಿ.ಬ್ಯಾಳಿ, ಎಸ್.ವಿ. ಪಾಟೀಲ್,ಶಿ.ಕಾ.ಬಡಿಗೇರ್ ಡಾ. ಬಸವರಾಜ ಸಬರದ ಚಂದಪ್ಪ ಹಕ್ಕಿ, ಆರ್.ಎಸ್. ಸರಗಣಚಾರ್. ಅಕ್ಬರ್ ಕಾಲಿಮಿರ್ಚಿ ಶಿವಾನಂದ ಮೇಟಿ, ಮಾರೇಶ ಮುಷ್ಟೂರು, ಎಸ್. ಎ. ನಿಂಗೋಜಿ,  ನಿವೃತ್ತ ಪಾಚಾರ್ಯ ಜಿ.ಎಂ. ನಿಂಗೋಜಿ, ಶರಣಬಸಪ್ಪ ದಾನಕೈ,ಮಹಾಂತೇಶ ಛಲವಾದಿ ಸೇರಿದಂತೆ ಇತರರು ಇದ್ದರು.

ದ್ದೇಶವಾಗಿದೆ. ಜಿಲ್ಲೆಯಲ್ಲಿ ೧೩ ಸಮ್ಮೇಳನ ನಡೆಯಲು ಸಹಕರಿಸಿದ ಎಲ್ಲಾ ಸಾಹಿತಿ ಹಾಗೂ ಕನ್ನಡ ಪರ ಹೋರಾಟಗಾರರು ಅವರಿಗೆ ಚಿರಋಣಿಯಾಗಿರುತ್ತೇನೆ ಎಂದು ಹೇಳಿದರು. 

Please follow and like us:
error