ಮಂಜುನಾಥ ಗೆ ಡಾ ಎಚ್ಚೆನ್ ದತ್ತಿ ಪ್ರದಾನ.

ಕೊಪ್ಪಳ-08- ಮಂಜುನಾಥ ಡಿ ಡೊಳ್ಳಿನ ಅವರ ಲೇಖನಗಳ ಸಂಗ್ರಹ ‘ಕಳವಳ ಕಳಕಳಿ’ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತು ವೈಚಾರಿಕ ಕೃತಿಗಳಿಗಾಗಿ ನೀಡುವ ಡಾ.ಎಚ್ಚೆನ್ ದತ್ತಿ ಪ್ರಶಸ್ತಿಯನ್ನು ಇತ್ತೀಚೆಗೆ ನೀಡಿ ಗೌರವಿಸಿತು. ಬೆಂಗಳೂರಿನ ಕ.ಸಾ.ಪ ದ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ, ಹಿರಿಯ ದಲಿತ ಕವಿ ಡಾ ಸಿದ್ಧಲಿಂಗಯ್ಯ ಪ್ರಶಸ್ತಿ ಪ್ರದಾನ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತಾಧಿಕಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಕೆ.ಎ.ದಯಾನಂದ, ಗೌರವ ಸಲಹೆಗಾರ ಪಿ, ಮಲ್ಲಿಕಾರ್ಜುನಪ್ಪ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರಶಸ್ತಿಯು ನಗದು, ಸ್ಮರಣಿಕೆ ಒಳಗೊಂಡಿದೆ.
Please follow and like us:
error