ಫೆ. ೧೬ ರಿಂದ ಭಾರತೀಯ ವಾಯುಪಡೆಯಲ್ಲಿ ಗ್ರೂಪ್ ವೈ ಟೆಕ್ನಿಕಲ್ ಹುದ್ದೆಗೆ ನೇಮಕಾತಿ ರ್‍ಯಾಲಿ.

ಕೊಪ್ಪಳ ಫೆ. ೦೫ (ಕರ್ನಾಟಕ ವಾರ್ತೆ) ಭಾರತೀಯ ವಾಯುಪಡೆಯಲ್ಲಿ ಏರ್‌ಮೆನ್
ಗ್ರೂಪ್ ‘ವೈ’ ಟೆಕ್ನಿಕಲ್ (ಆಟೋಮೊಬೈಲ್ ಟೆಕ್ನಿಷಿಯನ್, ಗ್ರೌಂಡ್ ಟ್ರೇನಿಂಗ್
ಇನ್ಸ್‌ಟ್ರಕ್ಟರ್,ಐ.ಎ.ಎಫ್ (ಪೊಲೀಸ್) ಮತ್ತು ಮೆಡಿಕಲ್ ಅಸಿಸ್ಟೆಂಟ್) ಹುದ್ದೆಗಳ
ಭರ್ತಿಗಾಗಿ ಫೆ. ೧೭ ರಂದು ಚಾಮುಂಡಿ ವಿಹಾರ್ ಕ್ರೀಡಾಂಗಣ, ನಜರಬಾದ್, ಮೈಸೂರು ಇಲ್ಲಿ
ನೇರ ನೇಮಕಕ್ಕಾಗಿ ರ್‍ಯಾಲಿ ಆಯೋಜಿಸಲಾಗಿದೆ.ಕರ್ನಾಟಕ ರಾಜ್ಯದ ಅವಿವಾಹಿತ ಪುರುಷ
ಅಭ್ಯರ್ಥಿಗಳು ಮಾತ್ರ ರ್‍ಯಾಲಿಯಲ್ಲಿ ಭಾಗವಹಿಸಲು ಅರ್ಹರು.  ಅಭ್ಯರ್ಥಿಗಳು ದಿನಾಂಕ:
೧-೮-೧೯೯೬ ರಿಂದ ೩೦-೧೧-೧೯೯೯ ರ ಅವಧಿಯಲ್ಲಿ ಜನಿಸಿದವರಾಗಿರಬೇಕು.ವಿದ್ಯಾರ್ಹತೆ: 
‘ವೈ’  ಗುಂಪಿನ ಆಟೋಮೊಬೈಲ್ ಟೆಕ್ನಿಷಿಯನ್, ಗ್ರೌಂಡ್ ಟ್ರೇನಿಂಗ್ ಇನ್ಸ್‌ಟ್ರಕ್ಟರ್,
ಐ.ಐ.ಎಫ್ (ಪೊಲೀಸ್) ಹುದ್ದೆಗಳಿಗೆ ಯಾವುದೇ ವಿಷಯಗಳಲ್ಲಿ ೧೦ + ೨ ಅಥವಾ ದ್ವಿತೀಯ
ಪಿ.ಯು.ಸಿ. ಕಲೆ, ವಿಜ್ಞಾನ ಅಥವಾ ವಾಣಿಜ್ಯ ವಿಷಯಗಳಲ್ಲಿ ಸರಾಸರಿ ಕನಿಷ್ಟ ಶೇ  ೫೦ ಅಂಕ
ಪಡೆದು ತೇರ್ಗಡೆ ಹೊಂದಿರಬೇಕು ಮತ್ತು ಆಂಗ್ಲ ಭಾಷೆಯಲ್ಲಿ ಶೇ ೫೦ ಅಂಕ ಪಡೆದಿರಬೇಕು.
ಅಥವಾ ಸಿ.ಬಿ.ಎಸ್.ಇ/ರಾಜ್ಯ ಶಿಕ್ಷಣ ಮಂಡಳಿ /ಪರಿಷತ್‌ನಿಂದ ಅಂಗೀಕೃತವಾದ ಹಾಗೂ
ಅಸೋಸಿಯೇಷನ್ ಆಫ್ ಇಂಡಿಯನ್ ಯುನಿವರ್ಸಿಟೀಸ್‌ನಿಂದ ೧೦+೨ ಕ್ಕೆ ತತ್ಸಮಾನ ಎಂದು
ಪರಿಗಣಿಸಲ್ಪಟ್ಟಿರುವ ಎರಡು ವರ್ಷಗಳ ವೃತ್ತಿಪರ ಶಿಕ್ಷಣದಲ್ಲಿ ಸರಾಸರಿ ಶೇ ೫೦ ಅಂಕಗಳಿಸಿ
ತೇರ್ಗಡೆ ಹೊಂದಿರಬೇಕು ಮತ್ತು ಆಂಗ್ಲ ಭಾಷೆಯಲ್ಲಿ ಶೇ ೫೦ ಅಂಕ ಗಳಿಸಿರಬೇಕು. 
ವೃತ್ತಿಪರ ಶಿಕ್ಷಣದಲ್ಲಿ ಇಂಗ್ಲೀಷ್ ಭಾಷೆ ಇಲ್ಲದಿದ್ದಲ್ಲಿ ಇಂಡರ್‌ಮೀಡಿಯೆಟ್/
ಮೆಟ್ರಿಕುಲೇಷನ್‌ನ ಇಂಗ್ಲೀಷ್ ವಿಷಯದಲ್ಲಿ ಶೇ ೫೦ ಅಂಕ ಗಳಿಸಿರಬೇಕು.’ವೈ’ ಗುಂಪಿನ
ಮೆಡಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ ೧೦+೨ ಅಥವಾ ದ್ವಿತೀಯ ಪಿ.ಯು.ಸಿ. ಯಲ್ಲಿ
ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ ಮತ್ತು ಆಂಗ್ಲ ಭಾಷೆ ವಿಷಯಗಳನ್ನು
ಹೊಂದಿದ್ದು, ಸರಾಸರಿ ಶೇ ೫೦ ಅಂಕ ಪಡೆದು ತೇರ್ಗಡೆ ಹೊಂದಿರಬೇಕು ಮತ್ತು ಆಂಗ್ಲ
ಭಾಷೆಯಲ್ಲಿ ಶೇ ೫೦ ಅಂಕ ಪಡೆದಿರಬೇಕು.ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು
ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಯ ಮೂಲ ಅಂಕ ಪಟ್ಟಿಗಳು, ಎಲ್ಲಾ ದಾಖಲೆಗಳ ಸ್ವಯಂ
ದೃಢೀಕೃತ ೪ ಸೆಟ್ ಜೆರಾಕ್ಸ್ ಪ್ರತಿಗಳು ಹಾಗೂ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ೭
ಭಾವಚಿತ್ರಗಳೊಂದಿಗೆ ದಿನಾಂಕ: ೧೭-೨-೨೦೧೬ ರಂದು ಬೆಳಿಗ್ಗೆ ಚಾಮುಂಡಿ ವಿಹಾರ
ಕ್ರೀಡಾಂಗಣ, ನಜಿರಬಾದ್, ಮೈಸೂರು ಇಲ್ಲಿ ಹಾಜರಾಗುವುದು.  ಅರ್ಹತಾ ನಿಬಂಧನೆಗಳು,
ವೈದ್ಯಕೀಯ ವಾಯುದಳದ ವೆಬ್‌ಸೈಟ್ ತಿತಿತಿ.ಚಿiಡಿmeಟಿseಟeಛಿಣioಟಿ.gov.iಟಿ ಗೆ ಭೇಟಿ
ನೀಡಿ ಅಥವಾ, ೭ ಏರ್‌ಮೆನ್ ಸೆಲೆಕ್ಷನ್ ಸೆಂಟರ್, ನಂ. ೦೧, ಕಬ್ಬನ್ ರಸ್ತೆ,
ಬೆಂಗಳೂರು-೦೧  ಈ ಕಚೇರಿಯನ್ನು ದೂರವಾಣಿ ಸಂಖ್ಯೆ ೦೮೦-೨೫೫೯೨೧೯೯, ಇ-ಮೇಲ್ ವಿಳಾಸ ಮೂಲಕ
ಸಂಪರ್ಕಿಸಿ ಅಭ್ಯರ್ಥಿಗಳು ಹತ್ತಿರದ ಉದ್ಯೋಗ ವಿನಿಯಮ ಕೇಂದ್ರವನ್ನು ಸಹ ಸಂಪರ್ಕಿಸಿ
ವಿವರಗಳನ್ನು ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.ಕುಷ್ಟಗಿಯ ಮಹಿಳೆ ಕಾಣೆ : ಪತ್ತೆಗೆ
ಸಹಕರಿಸಲು ಮನವಿಕೊಪ್ಪಳ ಫೆ. ೦೫ (ಕರ್ನಾಟಕ ವಾರ್ತೆ): ಕುಷ್ಟಗಿ ಪಟ್ಟಣ ಬಿ.ಬಿ. ನಗರದ
ಲಕ್ಷ್ಮೀಬಾಯಿ ಗೊಂದಳಿ (೩೫) ಮಹಿಳೆ ಕಳೆದ ಡಿ. ೧೪ ರಿಂದ ಕಾಣೆಯಾಗಿದ್ದು, ಮಹಿಳೆಯ
ಪತ್ತೆಗೆ ಸಾರ್ವಜನಿಕರು ಸಹಕರಿಸುವಂತೆ ಕುಷ್ಟಗಿ ಪೊಲೀಸ್ ಠಾಣೆ ಪೊಲೀಸ್ ಸಬ್
ಇನ್ಸ್‌ಪೆಕ್ಟರ್ ಅವರು ಮನವಿ ಮಾಡಿದ್ದಾರೆ.ಕುಷ್ಟಗಿ ಪಟ್ಟಣದ ಬಿಬಿ ನಗರದ ನಿವಾಸಿ
ವಿಷ್ಣು ತಂದೆ ಇಂದ್ರೇಶ ಗೊಂದಳಿ ಅವರು ತಮ್ಮ ತಾಯಿ ಲಕ್ಷ್ಮೀಬಾಯಿ ಗೊಂದಳಿ(೩೫) ಗುಂಪಿಗೆ
ಸಂಬಂಧಿತ ಪಿಗ್ಮಿ ಹಣ ಪಾವತಿಸುವುದಾಗಿ ಹೇಳಿ ಮನೆಯಿಂದ ಹೋದವರು ಮನೆಗೆ ಹಿಂದಿರುಗಿಲ್ಲ,
ಸಂಬಂಧಿಕರ ಮನೆಗಳಲ್ಲಿ ವಿಚಾರಿಸಿದರೂ ಯಾವುದೇ ಮಾಹಿತಿ ದೊರೆತಿಲ್ಲ ಎಂದು ಫೆ. ೦೨ ರಂದು
ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿರುತ್ತಾರೆ.  ಕಾಣೆಯಾಗಿರುವ ಮಹಿಳೆಯ ಚಹರೆ
ವಿವರ ಇಂತಿದೆ.  ಹೆಸರು : ಲಕ್ಷ್ಮೀಬಾಯಿ ಗಂಡ ಇಂದ್ರೇಶ ಗೊಂದಳಿ, ಉದ್ಯೋಗ- ಬಾಂಡೆ
ಸಾಮಾನು ವ್ಯಾಪಾರ, ವಯಸ್ಸು- ೩೫ ವರ್ಷ, ಎತ್ತರ- ೫ ಅಡಿ ೪ ಇಂಚು.  ಚಹರೆ- ಸಾಧಾರಣ
ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ದುಂಡು ಮುಖ, ಕೊರಳಲ್ಲಿ ಬಿಳಿ ಗುಂಡಿನ ಸರ,
ಕಿವಿಯಲ್ಲಿ ಬೆಂಡೋಲೆ, ಬಲಗೈಯಲ್ಲಿ ಇಂದ್ರೇಶ ಎಂಬ ಹಚ್ಚೆ ಇದೆ.  ಕನ್ನಡ ಮತ್ತು ಮರಾಠಿ
ಮಾತನಾಡುತ್ತಾರೆ.  ಈ ಚಹರೆಯುಳ್ಳ ಮಹಿಳೆ ಬಗ್ಗೆ ಮಾಹಿತಿ ದೊರೆತಲ್ಲ, ಕುಷ್ಟಗಿ ಪೊಲೀಸ್
ಠಾಣೆ- ೦೮೫೩೬-೨೬೭೦೩೩, ಕೊಪ್ಪಳ ಕಂಟ್ರೋಲ್ ರೂಂ- ೦೮೫೩೯-೨೩೦೨೨೨, ಅಥವಾ ಕೊಪ್ಪಳ
ಎಸ್‌ಪಿ- ೦೮೫೩೯-೨೩೦೧೧೧ ಕ್ಕೆ ಸಂಪರ್ಕಿಸಿ ನೀಡುವಂತೆ ಕುಷ್ಟಗಿ ಪೊಲೀಸ್ ಠಾಣೆ ಪೊಲೀಸ್
ಸಬ್ ಇನ್ಸ್‌ಪೆಕ್ಟರ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
Please follow and like us:
error