ನಾಳೆ ’ಮಿಸೆಸ್ ಅಂಬೇಡ್ಕರ್’ ರಂಗಕೃತಿ ಲೋಕಾರ್ಪಣೆ

ಬಳ್ಳಾರಿ, ಡಿ.೦೫:  ನಗರದ ಸಂಸ್ಕೃತಿ ಪ್ರಕಾಶನ ಪ್ರಕಟಿಸಿರುವ ಸಾಹಿತಿ ಡಾ. ಸಿದ್ರಾಮ ಕಾರಣಿಕ ಅವರು ರಚಿಸಿದ ’ಮಿಸೆಸ್ ಅಂಬೇಡ್ಕರ್’ ರಂಗಕೃತಿ ನಾಳೆ(ಡಿ. ೬) ಶನಿವಾರ ಧಾರವಾಡದಲ್ಲಿ ಸಂಜೆ ೫-೩೦ ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ.
ಧಾರವಾಡದ ಕ್ರಿಯಾರಂಗ ಹಾಗೂ ಗಣಕ ರಂಗ ಸಂಸ್ಥೆಗಳ ಸಹಯೋಗದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಶಾಸಕ ಪ್ರಸಾದ ಅಬ್ಬಯ್ಯ,  ಸಾಹಿತಿಗಳಾದ ಶ್ರೀಮತಿ ಸುಜಾತಾ ಕುಮಟಾ, ಮೋಹನ ನಾಗಮ್ಮನವರ್, ಫ್ರೊ. ಎಚ್ ಟಿ ಪೋತೆ, ಡಾ. ಶಿವರುದ್ರ ಕಲ್ಲೋಳಿಕರ್, ಡಾ. ಅರವಿಂದ ಮೂಲಿಮನಿ, ಡಾ. ಬಿ ಕೆ ಎಸ್ ವರ್ಧನ್, ಡಾ. ವೆಂಕಟಗಿರಿ ದಳವಾಯಿ, ಡಾ. ಎಸ್ ಎಸ್ ಕಟ್ಟಿಮನಿ, ಹೋರಾಟಗಾರ ಎಫ್. ಎಚ್. ಜಕ್ಕಪ್ಪನವರ್, ಲಕ್ಷ್ಮಣ ಬಕ್ಕಾಯಿ,  ಡಾ, ಮಹೇಶ ಗಾಜಪ್ಪನವರ, ತಾಯಪ್ಪ ಪವಾರ್, ಶಿವು ಭಜಂತ್ರಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪತ್ರಕರ್ತ, ಸಂಸ್ಕೃತಿ ಪ್ರಕಾಶನದ ಸಿ ಮಂಜುನಾಥ್ ತಿಳಿಸಿದ್ದಾರೆ.
ನಾಟಕ ಪ್ರದರ್ಶನ: ಸಮಾರಂಭದ ಬಳಿಕ ಯುವ ರಂಗಕರ್ಮಿ ಹಿಪ್ಪರಗಿ ಸಿದ್ಧರಾಮ ನಿರ್ದೇಶನದಲ್ಲಿ ಮಿಸೆಸ್ ಅಂಬೇಡ್ಕರ್ ನಾಟಕ ಪ್ರದರ್ಶನಗೊಳ್ಳಲಿದೆ.

Leave a Reply