ದನಕನದೊಡ್ಡಿಯಲ್ಲಿ ಹುಸೇನಬಾಷಾ ಶರಣರ ಜಾತ್ರೆ

ತಾಲೂಕಿನ ದನಕನದೊಡ್ಡಿ ಗ್ರಾಮದಲ್ಲಿ ಶ್ರೀ ಹುಸೇನ್ ಭಾಷಾ ಶರಣರ ಉರುಸು ಎಪ್ರಿಲ್ ೦೩, ೦೪, ೦೫, ನೇ ದಿನಾಂಕದಂದು ನಡೆಯಲಿದೆ.
ಪ್ರತಿವರ್ಷದಂತೆ ಹಿಂದೂ ಮುಸ್ಲಿಂ ಭಾವೈಕ್ಯ ಮೆರೆಯುವ ಶರಣರ ಜೊತೆ ವಿಜೃಂಬಣೆಯಿಂದ ಜರುಗುವುದು. ದಿನಾಂಕ ೩-೪-೨೦೧೫ ರಂದು ಶುಕ್ರವಾರ ಗಂಧ ನೆರವೆರುವುದು. ೦೪-೦೪-೨೦೧೫ ರ ಶನಿವಾರ ಉರುಸು ಇದ್ದು ಅಂದು ಭಕ್ತಾಧಿಗಳಿಂದ ಧಿರ್ಘದಂಡ ನಮಸ್ಕಾರ ನೆರವೇರಲಿದೆ. ಮತ್ತು ಅಂದು ಕೋಲಾಟ ಜಾಂಜ್ ಮೇಳ ಡ್ರಮ್ ಮೇಳ ಇರುವುದು. ಅಂದು ರಾತ್ರಿ ಆಕಾಶವಾಣಿ ಕಲಾವಿದರಿಂದ ಗೀಗಿ ಪದಗಳ ಕಾರ್ಯಕ್ರಮ ಜರುಗುವುದು.
ದಿನಾಂಕ ೦೫-೦೪-೨೦೧೫ ರಂದು ಬೆಳಗ್ಗೆ ಅನ್ನಸಂತರ್ಪಣೆ ಕಾರ್ಯಕ್ರಮ. ನಂತರ ಗುಂಡು ಎತ್ತುವ ಸ್ಪರ್ದೆ. ಹಾಗೂ ಹಳ್ಳಿ ಹೈದರ ಮುಂಗೈ ಆಟಗಳು ನಡೆಯುವವು. ಅಂದು ರಾತ್ರಿ ’ಮುತೈದೆ ಕಣ್ಣಿರು’ ಅರ್ಥಾತ್ ಕುಡುಕ ಕೊಲೆಗಡುಕ ಎಂಬ ಸಾಮಾಜಿಕ ನಾಟಕವನ್ನು ಪ್ರದರ್ಶಿಸಲಿದ್ದಾರೆ .

Leave a Reply