ದೇಶಕ್ಕೆ ರಾಹುಲ್ ಗಾಂಧಿ ನಾಯಕತ್ವ ಅಗತ್ಯ – ಕೆ. ಬಸವರಾಜ ಹಿಟ್ನಾಳ

ಕೊಪ್ಪಳ ಜೂನ್ ೧೯, ನಗರದ ಸಾರ್ವಜನಿಕ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಯುವ ಕಾಂಗ್ರೆಸ ವತಿಯಿಂದ ಹಮ್ಮಿಕೊಂಡಿದ್ದ ರಾಹುಲ್ ಗಾಂಧಿಯವರ ಹುಟ್ಟುಹಬ್ಬದ ನಿಮಿತ್ಯ ಹಮ್ಮಿಕೊಂಡಿದ್ದ ‘ಶ್ರಮದಾನ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ, ಜಿಲ್ಲಾ ಕಾಂಗ್ರೇಸ ಅಧ್ಯಕ್ಷರಾದ ಕೆ. ಬಸವರಾಜ ಹಿಟ್ನಾಳರವರು ದೇಶದ ಆಡಳಿತ ವ್ಯವಸ್ಥೆಗೆ ಯುವಜನಾಂಗದ ಚಿಂತನೆ ಅವಶ್ಯವಿದ್ದು ಎ.ಐ.ಸಿ.ಸಿ ಉಪಾಧ್ಯಕ್ಷರಾದ ರಾಹುಲ್ ಗಾಂಧಿ ಯವರ ನಾ

ಯಕತ್ವದಲ್ಲಿ ದೇಶವು ಮುನ್ನಡೆಯುವದು ಅವಶ್ಯ ಎಂದು ಅಬಿಪ್ರಾಯಿಸಿದರು.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ ಕಾರ್ಯಕರ್ತರು ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿರುವ ಮುಳ್ಳಿನ ಗಿಡ ಗಂಟೆಗಳನ್ನು ಕಿತ್ತು ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು. ಕಾರ್ಯಕ್ರಮದಲ್ಲಿ ಎಸ್.ಬಿ.ನಾಗರಳ್ಳಿ, ಜುಲ್ಲುಖಾದರಿ, ದ್ಯಾಮಣ್ಣ ಚಿಲವಾಡಗಿ, ಹನಮರಡ್ಡಿ ಹಂಗನಕಟ್ಟಿ, ಶಿವಕುಮಾರ ಪಾವಲಿಶೆಟ್ರ, ವೆಂಕನಗೌಡ್ರ ಹಿರೇಗೌಡ್ರ, ಶಿವಾನಂದ ಹುದ್ಲೂರ, ಕಾಟನ್ ಪಾಷಾ, ಸುರೇಶ ದಾಸರಡ್ಡಿ, ಗಾಳೆಪ್ಪ ಪೂಜಾರ, ಶರಣಪ್ಪ ಸಜ್ಜನ, ಮಲ್ಲಪ್ಪ ಕವಲೂರ, ಮುತ್ತುರಾಜ ಕುಷ್ಟಗಿ, ಮೌಲಾಹುಸೇನ್ ಜಮಾದಾರ, ರಾಮಣ್ಣ ಹದ್ದೀನ, ಮಾನ್ವಿ ಪಾಷಾ, ಗವಿಶಿದ್ದಪ್ಪ ಮುದಗಲ್, ಯಮನೂರಪ್ಪ ನಾಯಕ್, ಅಪ್ಸರ ಸಾಬ, ಅಜ್ಜಪ್ಪ ಸ್ವಾಮಿ, ರಫೀ ಆರ್.ಎಂ, ಅಕ್ತರ ಪಾರುಕಿ, ಹಾರುನ್ ಖಾನ್, ನೂರಜಾ ಬೇಗಂ, ನಾಗರಾಜ ಬಳ್ಳಾರಿ, ಪರವಿನ್ ಬೇಗಂ, ಬಡಿಯಮ್ಮ, ಅರವಿಂದ, ದಿಡ್ಡಿ ಗಪಾರ್, ಕಬೀರ ಸಿಂದೋಗಿ, ಮುಂತಾದವರು ಉಪಸ್ಥಿತರಿದ್ದರೆಂದು ಪಕ್ಷದ ವಕ್ತಾರ ಅಕ್ಬರ್ ಪಾಷ ಪಲ್ಟನ್ ತಿಳಿಸಿದ್ದಾರೆ. 
Please follow and like us:
error