ಅಕ್ರಮ ಮರಮ್ ಸಾಗಾಣಿಕೆ ತಡೆಯುವ ಕುರಿತು ತಹಸೀಲ್ದಾರ್‌ಗೆ ಮನವಿ ಕೆ. ಗಣೇಶ.

ಗಂಗಾವತಿ ತಾಲೂಕಿನ ವೆಂಕಟಗಿರಿ ಗ್ರಾಮದ ಸರ್ವೆ ನಂ.೨೩ ಮತ್ತು ೪೩ ರಲ್ಲಿ ಅಕ್ರಮವಾಗಿ ಅವ್ಯಾಹತವಾಗಿ ಅಕ್ರಮವಾಗಿ ಮರಮ್ ಸಾಗಾಣಿಕೆ ಮಾಡಲಾಗುತ್ತಿದ್ದು, ತಹಸೀಲ್ದಾರ್ ಮತ್ತು ಗಣಿ ಮತ್ತು ಭೂ-ವಿಜ್ಞಾನ ಇಲಾಖೆಗಳಿಗೆ ಮನವಿ ಸಲ್ಲಿಸಿದಾಗ ಕಾಟಾಚಾರಕ್ಕೆ ದಾಳಿ ನಡೆಸಿರುತ್ತಾರೆ. ಆದರೆ ಅಂದಿನಿಂದಲೇ ಮತ್ತೆ ಅಕ್ರಮ ಮರಮ್ ಎಗ್ಗಿಲ್ಲದೇ ಸಾಗಾಣಿಕೆ ನಡೆಯತ್ತಿದ್ದು, ಈ ಬಗ್ಗೆ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ಅಕ್ರಮ ಮರಮ್ ಸಾಗಾಣಿಕೆ ನಿಲ್ಲಿಸದಿದ್ದಲ್ಲಿ ಮುಂದಿನ ದಿನಮಾನಗಳಲ್ಲಿ ತಮ್ಮ ಕಛೇರಿ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ತಾಲೂಕ ಅಧ್ಯಕ್ಷರಾದ ಶರಣಬಸಪ್ಪ, ನಗರಘಟಕ ಅಧ್ಯಕ್ಷರಾದ ವೀರೇಶ, ಹೋಬಳಿ ಘಟಕದ ಅಧ್ಯಕ್ಷ ಯಮನೂರಪ್ಪ ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ  ಸದಸ್ಯರಾದ ಪರಶುರಾಮ ನಾಯಕ, ವೀರಭದ್ರ, ಹನುಮೇಶ, ಶ್ರೀನಿವಾಸ, ಶಂಕರ, ಹಾಜರಿದಿದ್ದರು.

Please follow and like us:

Leave a Reply