You are here
Home > Koppal News > ವಿಜೃಂಭಣೆಯ ಶ್ರೀ ಶೇಖಣ್ಣಾಚಾರ್ಯ ಪುಣ್ಯಸ್ಮರಣೆ ಕಾರ್ಯಕ್ರಮ

ವಿಜೃಂಭಣೆಯ ಶ್ರೀ ಶೇಖಣ್ಣಾಚಾರ್ಯ ಪುಣ್ಯಸ್ಮರಣೆ ಕಾರ್ಯಕ್ರಮ

ನಗರದ ಶ್ರೀ ಮಲಿಯಮ್ಮದೇವಿ ದೇವಸ್ಥಾನ, ಕೇತೇಶ್ವರ ಕಲ್ಯಾಣ ಮಂಟಪದ ಹತ್ತಿರವಿರುವ ಶ್ರೀ ಸಹಸ್ರಾಂಜನೇಯ ದೇವಸ್ಥಾನದಲ್ಲಿ ಗುರು ಶ್ರೀ ಶೇಖಣ್ಣಾಚಾರ್ಯರವರ ೭ನೇ ಪುಣ್ಯಸ್ಮರಣೆ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.

ದಶಕಗಳ ಕಾಲ ಆಂಜನೇಯ ಭಕ್ತರಾಗಿ ಸಮಾಜದ ನಾನಾ ಜನರಿಗೆ ತಮ್ಮ ದೈವೀ ಗುಣಗಳಿಂದ ಸಮಸ್ಯೆಗಳಿಗೆ ಪರಿಹಾರಗಳನ್ನು ತಿಳಿಸುತ್ತ ಭಕ್ತಿಯಿಂದ ಅಜ್ಜನ ಭಕ್ತರಾದ ಜನರು ಸೇರಿ ಆಚರಿಸುವ ಶ್ರೀ ಶೇಖಣ್ಣಾಚಾರ್ಯರ ಪುಣ್ಯಸ್ಮರಣೆ ಖ್ಯಾತ ಶಿಲ್ಪ ಕಲಾವಿದರು, ಆಂಜನೇಯ ಭಕ್ತರಾದ ಪ್ರಕಾಶ ಶಿಲ್ಪಿಯವರ ನೇತೃತ್ವದಲ್ಲಿ ಅಂದು ೨೫೩೫ ನೇ ನಿತ್ಯ ಮೂರ್ತಿ ಕೆತ್ತನೆ ಸೇವೆ ಮೂಲಕ ಆಚರಿಸಲಾಯಿತು.
ನೂರಾರು ಭಕ್ತರ ಸಮ್ಮುಖದಲ್ಲಿ ಮೂರ್ತಿ ಕೆತ್ತನೆಯನ್ನು ೩ಗಂಟೆಗಳ ಕಾಲ ನೆರವೇರಿಸಿದರು. ನಂತರ ಆಂಜನೇಯ ಮೂರ್ತಿಗೆ, ಮೂಲ ವಿಗ್ರಹ ಮೂರ್ತಿಗೆ, ಕರ್ತೃ ಗದ್ದುಗೆಗೆ ಪೂಜೆ, ಪಂಚಾಮೃತಾಭಿಷೇಕ ಹಾಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ನಂತರ ಸಂಜೆ ಕಾರ್ತಿಕೋತ್ಸವ ಇಳಿಸುವ ನಿಮಿತ್ಯ ದೀಪಾರಾಧನೆ ಹಾಗೂ ಮದ್ದು ಸುಡುವ ಕಾರ್ಯಕ್ರಮ ಜನಮನ ಮುದಗೊಳಿಸಿತು.  ಕಾರ್ಯಕ್ರಮದಲ್ಲಿ ಮಾಜಿ ಎಂ.ಎಲ್.ಸಿ ಕರಿಯಣ್ಣ ಸಂಗಟಿ, ಮಾಜಿ ಕುಡಾ ಅಧ್ಯಕ್ಷ ಕಳಕಪ್ಪ ಜಾಧವ, ಗವಿಸಿದ್ಧೇಶ್ವರ ಅರ್ಬನ್ ಬ್ಯಾಂಕ ವ್ಯವಸ್ಥಾಪಕ ಶಂಕರಗೌಡ ಹಿರೇಗೌಡ್ರ, ಬಾಸುರಾವ, ಪರಮೇಶ ಚಕ್ಕಿ, ಶ್ರೀ ಸಹಸ್ರಾಂಜನೇಯ ದೇವಸ್ಥಾನ ಟ್ರಸ್ಟ್‌ನ ಕಾರ್ಯದರ್ಶಿಗಳಾದ ಮಂಜುನಾಥ ಜಿ. ಗೊಂಡಬಾಳ, ಅಶೋಕ ಬಜಾರಮಠ ಅಣ್ಣಪ್ಪ ಚಿಲಖಮುಖಿ, ಪ್ರಹ್ಲಾದ ಮುಧೋಳ, ಪ್ರಕಾಶಶೆಟ್ಟಿ, ಪ್ರಕಾಶ ಎಮ್ಮಿಗನೂರ, ಶಿವಾಜಿ ಜಾಧವ, ವೀರೇಶ ಚೋಳಪ್ಪನವರ, ನಿಂಗಪ್ಪ, ಸುರೇಶ ಬಡಿಗೇರ ಅನೇಕರು ಇದ್ದರು.
ಮುಂದಿನ ಎರಡು ವರ್ಷದಲ್ಲಿ ಮೂರು ವಿಗ್ರಹಗಳ ಸ್ಥಾಪನೆಯ ಸಂಕಲ್ಪ ಮಾಡಲಾಯಿತು.

Leave a Reply

Top