ತಾಜಾ ಹಣ್ಣಿನ ಜ್ಯೂಸ್ ಬೇಕಾ

    ಬೇಸಿಗೆ ಬಂತೆಂದರೆ ಸಾಕು ಟೀವಿ ಜಾಹಿರಾತಿಗಳಲ್ಲಿ ಕೋಲ್ಡ್ರಿಂಕ್ ಜಾಹಿರಾತಿಘಳದ್ದೇ ಕಾರಿಬಾರು, ಒಂದಕ್ಕಿಂತ ಒಂದು ಕಂಪನಿ ಪೈಪೋಟಿಗೆ ಬಿದ್ದು ಜಾಹೀರಾತು ಬಿತ್ತರಿಸುತ್ತವೆ ಅದರಲ್ಲೂ ಕ್ರಿಕೆಟ್ ಇದ್ದಾಗಲಂತೂ ಬರೀ ಕೂಲ್ಡ್ರಿಂಕ್ ಜಾಹಿರಾತುಗಳೇ ಹೆಚ್ಚು. ಗ್ರಾಮೀಣ ಪ್ರದೇಶಗಳಲ್ಲೂ ಕೂಡ ಇದರ ಪ್ರಭಾವ ಹೆಚ್ಚಾಗಿದೆ. 
      ಇಷ್ಟೆಲ್ಲಾ ಬಾಟಲ್ ಕೂಲ್ಡ್ರಿಂಕ್ಸ್‌ಗಳ ನಡುವೆಯೇ ಕೊಪ್ಪಳದ ಪ್ರಮುಖ ಸ್ಥಳಗಳಲ್ಲಿ ಹಣ್ಣಿನ ಜ್ಯೂಸ್ ವ್ಯಾಪಾರ ಸಕತ್ತಾಗೇ ನಡಿತಿದೆ. ನಗರದಲ್ಲಿ ಪಾನಿಪುರಿಗೆ ಹೇಗೆ ಬೇಡಿಕೆಯೋ ಅದೇ ರೀತಿ ಆಪಲ್ ಜೂಸ್, ಪೈನಾಪಲ್ ಜ್ಯೂಸ್ ಹಾಗೂ ಇನ್ನಿತರೆ ಹಣ್ಣಿನ ರಸಕ್ಕೆ  ಅಷ್ಟೇ ಬೇಡಿಕೆ ಬಂದಿದೆ ಎನ್ನುತ್ತಾರೆ ಉತ್ತರ ಪ್ರದೇಶದಿಂದ ಬಂದ ಜ್ಯೂಸ್ ವ್ಯಾಪಾರಿ ರಾಜು , ಇದಕ್ಕೆಲ್ಲಾ ಕಾರಣ ವಿಪರೀತ ಬಿಸಿಲು. 
     ಒಂದು ಗ್ಲಾಸ್‌ಗೆ ೧೦-೧೫ರೂ: ಒಂದು ಗ್ಲಾಸ್ ಆಪಲ್, ಪೈನಾಪಲ್ ಜ್ಯೂಸ್ ೧೦ರೂ, ಅಲ್ಲೇ ತಾಜಾ ರೆಡಿಮಾಡಿಕೊಡಲಾಗುವುದು ಇದೇ ಜ್ಯೂಸ್ ಅಂಗಡಿಗಳಲ್ಲಾದರೆ ೨೦-೨೫ರೂ ತೆಗೆದುಕೊಳ್ಳುತ್ತಾರೆ.
   ದಿನಕ್ಕೆ ೨೦೦೦ ವ್ಯಾಪಾರ: ದಿನವೊಂದಕ್ಕೆ ೧೫೦೦-೨೦೦೦ ವರೆಗೆ ವ್ಯಾಪಾರ ಮಾಡಿವುದಾಗಿ ಹೊಸಪೇಟೆಯಿಂದ ಬಂದು ವ್ಯಾಪರ ಮಾಡತ್ತಿರುವ ಹನುಮಂತ ನಾಯಕ ಎಂಬ ವ್ಯಾಪಾರಿ ಹೇಳುತ್ತಾನೆ.
 ಎಲ್ಲೆಲ್ಲಿ ವ್ಯಾಪಾರ: ಸಾಮಾನ್ಯವಾಗಿ ಈ ಹಣ್ಣಿನ ವ್ಯಾಪಾರಿಳು ಪ್ರಮುಖ ಬೀದಿಗಳ ಪಕ್ಕದಲ್ಲಿರುವ ಗಿಡಗಳ ನೆರಳಲ್ಲಿ ಬಂಡಿ ವಚ್ಚಿರುತ್ತಾರೆ, ಬಸ್ ಸ್ಟಾಂಡ್ ಹತ್ತಿರ, ಕಾವ್ಯಾನಂದ ಉದ್ಯಾನದ ಹತ್ತಿರ ಇರುತ್ತಾರೆ, ಆದರೆ ಹೆಚ್ಚನ ಅಂಗಡಿಗಳು ಕಾಣಿಸುವುದು ಕೊರ್ಟ್ ಎದುರುಗಡೆಇರುವ ಗಿಡಗಳ ನೆರಳಲ್ಲಿ.
   ರುಚಿ ಮತ್ತು ಆರೋಗ್ಯ: ಹಣ್ಣಿನ ಜೂಸ್ ಕುಡಿಯುವುದರಿಂದ ಹೆಚ್ಚು ದಾಹ ಆಗುವುದಿಲ್ಲ ಮತ್ತೆ ಆರೋಗ್ಯಕ್ಕಂತೂ ನಮಗೆಲ್ಲ ತಿಳಿದಿರುವ ಹಾಗೆ ತುಂಬಾ ಒಳ್ಳೆಯದು. 
   ರೆಡಿಮೇಡ್ ಕೋಲ್ಡ್ರಿಂಕ್ ಕುಡಿದು ಆರೋಗ್ಯ ಕೆಡಿಸಿಕೊಳ್ಳುವುದಕ್ಕಿಂತ ಕಡಿಮೆ ಬೆಲೆಯಲ್ಲಿ ಸಿಗುವ ತಾಜಾ ಹಣ್ಣಿನ ಜ್ಯೂಸ್ ಒಳ್ಳೇದು ಅಲ್ವಾ. 
  
          
Please follow and like us:
error