ಬಸಪ್ಪ ನಾಗೋಲಿರವರಿಗೆ ಎನ್.ಎಸ್.ಎಸ್.ಅಧಿಕಾರಿ ಪ್ರಶಸ್ತಿ

 ಕರ್ನಾಟಕ ಸರ್ಕಾರದಿಂದ ಅತ್ಯುತ್ತಮ ಎನ್.ಎಸ್.ಎಸ್.ಅಧಿಕಾರಿ ಪ್ರಶಸ್ತಿ 
ಗಂಗಾವತಿ:- ಗಂಗಾವತಿಯ ಶ್ರೀಮತಿ ಎಂ.ಎನ್.ಎಂ.ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ  ವಾಣಿಜ್ಯ ಉಪನ್ಯಾಸಕರಾದ   ಬಸಪ್ಪ ನಾಗೋಲಿಯವರಿಗೆ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವುದನ್ನು ಪರಿಗಣಿಸಿ ರಾಜ್ಯ ಸರ್ಕಾರ ೨೦೧೧-೧೨ನೇ ಸಾಲಿನ ಅತ್ಯುತ್ತಮ ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಯೆಂದು  ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿಯನ್ನು ಕರ್ನಾಟಕ ರಾಜ್ಯ ಸರ್ಕಾರದ ಘನತೆವೆತ್ತ ರಾಜ್ಯಪಾಲರಾದ   ಹಂಸರಾಜ್ ಭಾರದ್ವಾಜರವರು ಬೆಂಗಳೂರಿನ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನ ಮಾಡಿದರು. ಈ ಸಮಾರಂಭದಲ್ಲಿ ಕ್ರೀಡಾ ಮತ್ತು ಯುವಜನಸೇವಾ ಇಲಾಖೆಯ ಸಚಿವರಾದ   ಅಪ್ಪಚ್ಚು ರಂಜನ್, ಕ್ರೀಡಾ ಮತ್ತು ಯುವಜನಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಶಂಭುದಯಾಲಮೀನಾ, ರಾಜ್ಯ ಎನ್.ಎಸ್.ಎಸ್.ಕೋಶದ ಸಂಪರ್ಕ ಅಧಿಕಾರಿಗಳಾದ ಡಾ.ಧನಂಜಯ ಕೆ.ಬಿ. ಮತ್ತು ಇತರ ಗಣ್ಯರು ಹಾಜರಿದ್ದರು. ಪ್ರಶಸ್ತಿ ಪಡೆದ       ಬಸಪ್ಪ ನಾಗೋಲಿಯವರನ್ನು   ರಮೇಶ ಗಬ್ಬೂರ, ಕೆ.ಫಣಿರಾಜ, ಡಾ.ಜಾಜಿ ದೇವೇಂದ್ರಪ್ಪ, ಡಾ.ಡಿ.ಕೆ.ಮಾಳೆ, ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್ ಇವರಿಗೆ ಅಭಿನಂದಿಸಿದ್ದಾರೆ
Please follow and like us:
error