ನಗರದ ಸಾಹಿತ್ಯ ಭವನದಲ್ಲಿ ಏಕಲವ್ಯ ರಂಗ ಪ್ರಯೋಗ

 ಕೊಪ್ಪಳ, ಡಿ. ೨೨ : ಹಾಲ್ಕುರಿಕೆ ಥಿಯೇಟರ್ ಸುಮಾರು ೫ ತಿಂಗಳಿನಿಂದ ಗಂಗಾವತಿ ತಾಲ್ಲೂಕಿನ ಯಡಹಳ್ಳಿಯಲ್ಲಿ ತೀವ್ರತರದ ರಂಗ ಚಟುವಟಿಕೆಗೆ ಒಡ್ಡಿಕೊಂಡಿದೆ.  ವಿಭಿನ್ನ ನೆಲೆಯಲ್ಲಿ ರಂಗ ಶೋಧನೆಯಲ್ಲಿ ತೊಡಗಿ ಕೊಪ್ಪಳದ ಜಿಲ್ಲೆಯಾದ್ಯಂತ ರಂಗ ಸಂವೇದನೆಗೊಳಿಸುತ್ತಿದೆ.  ಜೋಳಿಗೆ ರಂಗ ಪಯಣದ ಮೂಲಕ ಹಳ್ಳಿಗಳಲ್ಲಿ ನಾಟಕ ಪ್ರದರ್ಶನ ಮಾಡುತ್ತಿದೆ.  ಮಕ್ಕಳ ರಂಗಭೂಮಿ, ಸಾಹಿತ್ಯ, ಸಂಸ್ಕೃತಿ ಹೀಗೆ ಹಲವು ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಹಾಲ್ಕುರಿಕೆ ಥಿಯೇಟರ್ ಕಾಲೇಜು ರಂಗ ಪಯಣದ ಮೂಲಕ ಕರ್ನಾಟಕದಾದ್ಯಂತ ಏಕಲವ್ಯ ನಾಟಕವನ್ನು ಪ್ರದರ್ಶನಗೊಳಿಸುತ್ತಿದೆ.  ಮೊದಲಿಗೆ ಗಂಗಾವತಿ ತಾಲ್ಲೂಕಿನ ಪಿ. ಯು. ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಮತ್ತು ನಟರ ಅನುಸಂಧಾನಗೊಳಿಸಿ ರೋಮಾಂಚನ ಮೂಡಿಸಿದೆ.  ೮ ದಿನಗಳಿಂದ ಕೊಪ್ಪಳ ನಗರದಲ್ಲಿ ಪಿ.ಯು. ಕಾಲೇಜುಗಳಲ್ಲಿ ರಂಗ ಪ್ರದರ್ಶನ ನೀಡುತ್ತಿರುವ ಹಾಲ್ಕುರಿಕೆ ಥಿಯೇಟರ್ ಸಾರ್ವಜನಿಕರಿಗಾಗಿ ಇಂದು ಸಂಜೆ ೬-೩೦ಕ್ಕೆ ಕೊಪ್ಪಳದ ಸಾಹಿತ್ಯ ಭವನದಲ್ಲಿ ಏಕಲವ್ಯ ನಾಟಕವನ್ನು ಆಯೋಜಿಸಿದೆ.  ಡಾ. ಸಿದ್ಧಲಿಂಗಯ್ಯ ರಚಿಸಿರುವ ಈ ನಾಟಕವನ್ನು ರಂಗವಿಜ್ಞಾನಿ ಹಾಲ್ಕುರಿಕೆ ಶಿವಶಂಕರ್ ಸಂಗೀತ ಮತ್ತು ನಿರ್ದೇಶನ ಮಾಡಿದ್ದಾರೆ.  
ನಗರದ ರಂಗಕರ್ಮಿಗಳು, ಸಾಹಿತಿಗಳು, ರಂಗ ಆಸಕ್ತರು ಈ ನಾಟಕ ಪ್ರಯೋಗಕ್ಕೆ ಸಾಕ್ಷಿಯಾಗಿ ರಂಗ ಸಾಧ್ಯತೆಗೆ ಉತ್ತೇಜನ ನೀಡಬೇಕಾಗಿ ಹಾಲ್ಕುರಿಕೆ ಥಿಯೇಟರ್ ಸಂಚಾಲಕರಾದ ವೈ. ಬಿ. ಜೂಡಿಯವರು  ತಿಳಿಸಿದ್ದಾರೆ.

Leave a Reply