ಮುಖ್ಯಮಂತ್ರಿಗಳಿಂದ ೯೪೪ ಆಸರೆ ಮನೆಗಳ ಹಸ್ತಾಂತರ

ಕೊಪ್ಪಳ ಅ.  ಕಳೆದ ೨೦೦೯ ರಲ್ಲಿ ಜಿಲ್ಲೆಯಲ್ಲಿ ಸುರಿದ ಭಾರೆ ಮಳೆಯಿಂದಾಗಿ ಸಂತ್ರಸ್ಥರಾಗಿದ್ದವರಿಗೆ ಆಸರೆ ಯೋಜನೆಯಲ್ಲಿ ಮನೆಗಳನ್ನು ಒದಗಿಸುವ ಕಾರ್ಯಕ್ರಮಡಿ. ಅ. ೨೯ ರಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಜಿಲ್ಲೆಯಲ್ಲಿ ಒಟ್ಟು ೯೪೪ ಆಸರೆ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಲಿದ್ದಾರೆ.
  ಕೊಪ್ಪಳ ತಾಲೂಕಿನ ಹಿರೇಸಿಂದೋಗಿ ಗ್ರಾಮದಲ್ಲಿ -೩೯೫ ಮನೆಗಳು, ಅದೇ ರೀತಿ ಗಂಗಾವತಿ ತಾಲೂಕು ಕುಂಟೋಜಿಯ ೪೭೨ ಹಾಗೂ ನಂದಿಹಳ್ಳಿ ಗ್ರಾಮದ ೭೭ ಆಸರೆ ಮನೆಗಳನ್ನು ಮುಖ್ಯಮಂತ್ರಿಗಳು ಅ. ೨೯ ರಂದು ಜಿಲ್ಲೆಯ ಹಿರೇಸಿಂದೋಗಿ ಹಾಗೂ ಡಂಬ್ರಳ್ಳಿ ಗ್ರಾಮಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಏರ್ಪಡಿಸಲಾಗುವ ಕಾರ್ಯಕ್ರಮದಲ್ಲಿ ಸಂತ್ರಸ್ಥರಿಗೆ ಹಸ್ತಾಂತರಿಸಲಿದ್ದಾರೆ.    ಮುಖ್ಯಮಂತ್ರಿಗಳು ಅ. ೨೯ ರಂದು ಡಂಬ್ರಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ೬. ೮೧ ಲಕ್ಷ ರೂ. ವೆಚ್ಚದಲ್ಲಿ ಎರಡು ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾರ್ಯಕ್ಕೆ ಭೂಮಿ ಪೂಜೆ ಕಾರ್ಯಕ್ರಮ ನೆರವೇರಲಿದೆ.
Please follow and like us:
error

Related posts

Leave a Comment