ಬಸಾಪೂರ : ಕಟ್ಟಡ ಕಾರ್ಮಿಕರ ಸಂಘ ಆಸ್ತಿತ್ವಕ್ಕೆ

ಕೊಪ್ಪಳ, ಮಾ. ೧೫, ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ (ಎಐಟಿಯುಸಿ ಸಂಯೋಜಿತ)ದ  ತಾಲೂಕಿನ ಹಳೇಬಂಡಿಹರ್ಲಾಪೂರ ಹತ್ತಿರದ ಬಸಾಪೂರ ಗ್ರಾಮ ಘಟಕ ಆಸ್ತಿತ್ವಕ್ಕೆ ಬಂದಿದ್ದು, ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಸಿದ್ದಪ್ಪ ದುರ್ಗಪ್ಪ ವಡ್ಡರ್, ಉಪಾಧ್ಯಕ್ಷರಾಗಿ ಹುಲಗಪ್ಪ ಫಕೀರಪ್ಪ ಬುಡಬುಡ್ಕಿ, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಸ್ವಾಮಿ. ಬಿ. ರಾಮಚಂದ್ರಯ್ಯ, ಕಾರ್ಯದರ್ಶಿಯಾಗಿ ರಾಮಕೃಷ್ಣ ಮಲಕಲಪ್ಪ ಅತ್‌ಕೋರ್, ಸಂಘಟನಾ ಕಾರ್ಯದರ್ಶಿ ಖಾಜಾವಲಿ ಸಣ್ಣನರಸಿಮಲು, ಖಜಾಂಚಿಯಾಗಿ ಮಲ್ಲೇಶ ಹನುಮಂತಪ್ಪ ಮೇಸ್ತ್ರಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ದುರ್ಗಪ್ಪ ಫಕೀರಪ್ಪ ಬುಡಬುಡ್ಕಿ, ಬಿ. ಖಾಸೀಮ್ ಕರಿಮಸಾಬ ಭೀಮನೂರ, ಬಸವರಾಜ ಹೊನ್ನೂರಸ್ವಾಮಿ, ಹುಸೇನ್‌ಬಾಷಾ ಖಾಸೀಮ್‌ಸಾಬ ಪಾಲೆಂ, ಸೋಮಣ್ಣ ಮುಕ್ಕಪ್ಪ ಉಪ್ಪಾರಳ್ಳಿ, ನಾಗರಾಜ ದುಬ್ಬಣ ಹನುಮಂತಪ್ಪ, ನಾಗರಾಜ ಸೋಮಪ್ಪ ಉಪ್ಪರಳ್ಳಿ, ರಾಮಕೋಟಿ ದೇವೇಂದ್ರಪ್ಪ, ಚಂದ್ರಪ್ಪ ಪೀರಪ್ಪ ಲಮಾಣಿ, ಯಮನೂರ ಮಲಿಯಪ್ಪ, ಸಲೀಮ್ ಮಹೆಬೂಬಸಾಬ ಗೋಂಪಾಡ್ ಮುಂತಾದವರು ಅವಿರೋಧವಾಗಿ ಆಯ್ಕೆಯಾದರು..
ಸಭೆಯ ಅಧ್ಯಕ್ಷತೆ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ (ಎಐಟಿಯುಸಿ ಸಂಯೋಜಿತ)ದ ಜಿಲ್ಲಾಧ್ಯಕ್ಷ ರಮೇಶ ಪಿ. ಚಿಕೇನಕೊಪ್ಪ ವಹಿಸಿದ್ದರು. ಜಿಲ್ಲಾ ಸಂಚಾಲಕ ಎಸ್.ಎ. ಗಫಾರ್ ಸಂಘದ ಚಟುವಟಿಕೆ, ರಚನೆ ಕುರಿತು ತಿಳಿಸಿ,  ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿದರು.

Leave a Reply