ಓಜನಹಳ್ಳಿಯಲ್ಲಿ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆ

Koppal :     ಶ್ರೀ ಸಿದ್ದೇಶ್ವರ ಕಲ್ಯಣ ಮಂಟಪದಲ್ಲಿ ೨೦೧೧-೨೦೧೨ ಸಾಲೀನ  ಮಕ್ಕಳ ಹಕ್ಕುಗಳ ವಿಶೇಷ ಗ್ರಾಮ ಸಭೆ ಆಯೋಜಿಸಲಾಗಿತ್ತು.
ಗ್ರಾಮ.ಪಂ.ವ್ಯಾಪ್ತಿಯ ತಾಲೂಕ ಪಂಚಾಯತ ಸದಸ್ಯರಾದ   ರಮೇಶ ಚೌಡಕಿ, ಹಾಗೂ ಶ್ರೀನಿವಾಸ ಹ್ಯಾಟಿ , ಮತ್ತು  ಗ್ರಾಮ.ಪಂಚಾಯತ ಅಧ್ಯಕ್ಷರಾದ   ಮುಕ್ಕಣ್ಣ ಹೊಸಗೇರಿ, ಹಾಗೂ ಸರ್ವಸದಸ್ಯರು  ಮತ್ತು ಗ್ರಾಮ ಪಂಚಾತಿಯ ವ್ಯಾಪ್ತಿ ಶಾಲೆಯ ಎಸ್.ಡಿ.ಎಂ.ಸಿ.ಯ ಅಧ್ಯಕ್ಷರು, ಸಮೂಹ ಸಂಪನ್ನೂಲ  ಸಮನ್ವಯ ಅಧಿಕಾರಿಗಳಾ  ಪ್ರಕಾಶ ಸ್ವಾಮಿ,ಅಂಗನವಾಡಿಯ ಶಿಕ್ಷಕಿಯರು  ಸ್ವಸಹಾಯ ಸಂಘದ ಪ್ರತಿನಿದಿಗಳು ಯುವಕಮಂಡಳಿಗಳ ಅಧ್ಯಕ್ಷರು ಸದಸ್ಯರು  ವಿಸ್ತಾರ ಸ್ವಯಂ ಸೇವಾ ಸಂಸ್ಥೆ ಸರ್ವೋದಯ ಸ್ವಯಂಸೇವಾ  ಸಂಸ್ಥೆಯ ಪ್ರತಿನಿಧಿಗಳು, ವಾಜಪೇಯ ಆರೋಗ್ಯ ಶ್ರೀ ಯೋಜನೆಯ ಅಧಿಕಾರಿಗಳು ಎಲ್ಲಾ ಶಾಲೆಗಳ  ಶಿಕ್ಷಕರು ಹಾಗೂ ವಿಧ್ಯಾರ್ಥಿಗಳು ಹಾಗೂ ಇನ್ನು ಅನೇಕ ಊರಿನ ಗುರು-ಹಿರಿಯರು  ಸಭೆಯಲ್ಲಿ ಭಾಗವಹಿಸಿದ್ದರು  ಕಾರ್ಯಕ್ರಮದಲ್ಲಿ ವಿಶೇಷವಾಗಿ ವಿವಿದ ಶಾಲೆಯ ಮಕ್ಕಳು  ತಮ್ಮ ಅಗತ್ಯ ಬೇಡಿಕೆಗಳಾದ ಶೌಚಾಲಯ, ಕುಡಿಯುವ ನೀರು,  ಆಟದ ಮೈದಾನ ಮತ್ತು ಸಲಕರಣೆ, ಶಾಲಾ ಕೊಠಡಿ, ದೈಹಿಕ ಶಿಕ್ಷಕರನ್ನು ಒದಗಿಸುವಂತೆ   ಸಭೆಯಲ್ಲಿ ಎಲ್ಲಾ ಮಕ್ಕಳು  ತಮ್ಮ ಬೇಡಿಕೆಗಳನ್ನು ವ್ಯಕ್ತಪಡಿಸಿದರು ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳುಮತ್ತು ಜನಪ್ರತಿನಿಧಿಗಳು ಸ್ಪಂಧಿಸಿದರು. ಸರ್ವರನ್ನು ಪಂಚಾಯತಿಯ ಪಿ.ಡಿ.ಓ ಅಧಿಕಾರಿಯಾದ ಶ್ರೀಮತಿ ಮಂಜುಳ.ಎಸ್.ಪಾಟೀಲ ಸ್ವಾಗತಿಸಿದರು  ಯೂನೆಸೆಫ ಜಿಲ್ಲಾ ಮಕ್ಕಳ ಯೋಜನೆ ಸಮುದಾಯ ಸಂಘಟಕರಾದ  ಆನಂದ ಹಳ್ಳಿಗುಡಿ, ಮಕ್ಕಳ ಹಕ್ಕುಗಳು ಅವುಗಳ ರಕ್ಷಣೆ ಕುರಿತು ಸಮಗ್ರವಾಗಿ ಮಾಹಿತಿ ನೀಡಿ ಕಾರ್ಯಕ್ರಮವನ್ನು ನಿರೂಪಿಸಿದರು.ಗ್ರಾಮ ಪಂಚಾಯತಿಯ ಕರ ವಸೂಲಿಗಾರರಾದ ದೇವಪ್ಪ ಹಂಚಿನಾಳ  ವಂದಿಸಿದರು

Leave a Reply