ಗವಿಮಠಕ್ಕೆ ಬರುತ್ತಿರುವ ದವಸಧಾನ್ಯಗಳು

  ಶ್ರೀಗವಿಮಠದ ಮಹಾ ರಥೋತ್ಸವದಂಗವಾಗಿ ಜರುಗಲಿರುವ ಮಹಾದಾಸೋಹಕ್ಕೆ  ಭಕ್ತರಿಂದ ದವಸ ಧಾನ್ಯಗಳು  ಹರಿದು ಬರುತ್ತಲಿವೆ. ಇಂದು ಬುಕನಟ್ಟಿ ಗ್ರಾಮದ  ಭಕ್ತರಿಂದ ೯೦೦೦ ರೊಟ್ಟಿಗಳು , ದೇವಲಾಪುರ ಗ್ರಾಮದ ಭಕ್ತರಿಂದ ೧೦೦೦ ರೊಟ್ಟಿಗಳು  ಹಾಗೂ ದವಸ ಧಾನ್ಯಗಳು ದಾಸೋಹಕ್ಕೆ ಅರ್ಪಿತವಾಗಿವೆ. ದಾನಿಗಳಿಗೆಲ್ಲ ಶ್ರೀಗವಿಸಿದ್ಧೇಶ್ವರ ಸ್ವಾಮೀಜಿಗಳು ಆಶಿರ್ವದಿಸಿದ್ದಾರೆ. 
ಗವಿಮಠದಲ್ಲಿ ರೊಟ್ಟಿಗಳ ಸಪ್ಪಳ
ಕೊಪ್ಪಳ : ಶ್ರೀ ಗವಿಮಠದ ಮಹಾ ರಥೋತ್ಸವದ ಅಂಗವಾಗಿ ಜರುಗಲಿರುವ ಮಹಾದಾಸೋಹಕ್ಕೆ  ಭಕ್ತಿರಿಂದ ಎರಡೇ ದಿವಸಗಳಲ್ಲಿ  ೧ ಲಕ್ಷಕ್ಕಿಂತಲೂ ಹೆಚ್ಚು ರೊಟ್ಟಿಗಳು ಶ್ರೀಗವಿಮಠಕ್ಕೆ ಬಂದಿರುತ್ತವೆ.  ಜಾತ್ರೆಗೆ ಇನ್ನೂ ೫-೬ ದಿವಸಗಳು ಬಾಕಿ ಇದ್ದೂ  ರಥೋತ್ಸವದ ವೇಳೆಗೆ ಸುಮಾರು ೧೦ ಲಕ್ಷ ಕ್ಕಿಂತಲೂ ಅಧಿಕ ರೊಟ್ಟಿಗಳು ಜಾತ್ರಾ ದಾಸೋಹಕ್ಕೆ ಬರುವ ನೀರಿಕ್ಷೆ ಇದೆ. 

Leave a Reply