ಮಕ್ಕಳೇ ರಾಷ್ಟ್ರದ ಸಂಪತ್ತು – ಮಂಗಳೇಶ.

ಕೊಪ್ಪಳ 15- ಕಿನ್ನಾಳ ಇಂದಿನ ವಿದ್ಯಾರ್ಥಿಗಳೇ ನಾಳಿನ ಪ್ರಜೆಗಳು. ಎಲ್ಲ ವಿದ್ಯಾರ್ಥಿಗಳು ರಾಷ್ಟ್ರ ನಾಯಕರ, ಸ್ವತಂತ್ರ ಹೋರಾಟಗಾರರ ಆದರ್ಶ ಜೀವನವನ್ನು ಅಳಡಿಸಿಕೊಳ್ಳಬೇಕು. ಮಕ್ಕಳೇ ರಾಷ್ಟ್ರದ ಸಂಪತ್ತು ಎಂದು ಗ್ರಾಮ ಪಂಚಾಯತ್ ಸದಸ್ಯರೂ ಹಾಗೂ ವಕೀಲರಾದ ಮಂಗಳೇಶ ಮಂಗಳೂರು ಹೇಳಿದರು. ಅವರಿಂದು ಕಿನ್ನಾಳ ಗ್ರಾಮದ ಸೇವಾ ವಿದ್ಯಾಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿ ಧ್ವಜಾರೋಹಣ ಮಾಡಿ ಮಾತನಾಡಿದರು. ವೇದಿಕೆಯ ಮೇಲೆ  ಗ್ರಾಮ ಪಂಚಾಯತ್ ಸದಸ್ಯರಾದ  ಸುಭಾನಸಾಬ ಹೀರಾಳ, ಸಂಸ್ಥೆಯ ಖಜಾಂಚಿ ಜಾಫರ ಫಹಿಮಾಶಿ ಹಾಗೂ ಮುಖ್ಯ ಶಿಕ್ಷಕರಾದ ದಾವಲಸಾಬ ಬೆಟಗೇರಿ ಉಪಸ್ಥಿತರಿದ್ದರು.  ಇದೇ ಸಂದರ್ಭದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು, ಪಾಲಕರು  ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ವಾಗತವನ್ನು  ದುರ್ಗಾ ಆರೇರ್ ಮಾಡಿದರು. ನಿರೂಪಣೆಯನ್ನು ರವಿಚಂದ್ರ

ಮಾಟಲದಿನ್ನಿ  ಹಾಗೂ ವಂದನಾರ್ಪಣೆಯನ್ನು ರಂಜಾನ್ ಬಿ ಕೊಲ್ಕಾರ ಮಾಡಿದರು.

Please follow and like us:
error