ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ದಿ ಯಲಬುರ್ಗಾ ವತಿಯಿಂದ ಕರಮುಡಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ನೂರು ಸಸಿಗಳನ್ನು ನೆಡುವ ವನಮಹೋತ್ಸವ.

ಯಲಬುರ್ಗಾ: ತಾಲೂಕಿನ ಕರಮುಡಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ತಪಸ್ಸು ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ದಿ ಸೇವಾ ಸಂಸ್ಥೆ ಯಲಬುರ್ಗಾ ವತಿಯಿಂದ ದಿನಾಂಕ ೧೬/೦೯/೨೦೧೫ ರಂದು ಬುಧವಾರ ಬೆಳಿಗ್ಗೆ ೧೦.೩೦ ಕ್ಕೆ ನೂರು ಸಸಿಗಳನ್ನು ನೆಡುವ ಮೂಲಕ ವನಮಹೋತ್ಸವ ಆಚರಿಸಲಾಗುತ್ತಿದೆ. ಅಧ್ಯಕ್ಷತೆಯನ್ನು ಕರಮುಡಿ ಗ್ರಾ.ಪಂ ಅಧ್ಯಕ್ಷ ಬಸವರಾಜ ಹಿರೇಮಠ ವಹಿಸುವರು. ಜಿ.ಪಂ ಸದಸ್ಯೆ ಶ್ರೀಮತಿ ಹೇಮಲತಾ ಅಂದಾನಗೌಡ ಪಾಟೀಲ ವನಮಹೋತ್ಸವ ಉದ್ಘಾಟನೆ ನೆರವೇರಿಸುವರು. ತಾ.ಪಂ. ಸದಸ್ಯ ಸಂಗಪ್ಪ ಬಂಡಿ ,ಕರಮುಡಿ ಗ್ರಾ.ಪಂ ಉಪಾದ್ಯಕ್ಷೆ ಶ್ರೀಮತಿ ಬಸಮ್ಮ ರಾಂಪೂರ ,ಸ.ಪ್ರೌ.ಶಾಲೆ ಕರಮುಡಿ ಮುಖ್ಯೋಪಾದ್ಯಾಯ ವಿಜಯಕುಮಾರ ರಂಗ್ರೇಜಿ, ಕ.ಸಾ.ಪ.ಜಿಲ್ಲಾದ್ಯಕ್ಷ ವೀರಣ್ಣ ನಿಂಗೋಜಿ, ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಶರಣಗೌಡ ಪೋಲಿಸಪಾಟೀಲ, ಸಾಮಾಜಿಕ ವಲಯ ಅರಣ್ಯಾಧಿಕಾರಿ ವಿ.ತಿಮ್ಮರಾಜು, ಪಿ.ಡಿ.ಒ. ಬಸವರಾಜ ಬಡಿಗೇರ ಹಾಗೂ ಕರಮುಡಿ ಗ್ರಾ.ಪಂ ಸರ್ವ ಸದಸ್ಯರು ಭಾಗವಹಿಸುವರು. ಹಾಗೂ ಬಸವರಾಜ ಕೊಂಡಗುರಿ ಶಿಕ್ಷಕರು ಸ.ಪ್ರೌ.ಶಾಲೆ ಕರಮುಡಿ ಮತ್ತು ಮೌಲಾಹುಸೇನ ಬುಲ್ಡಿಯಾರ ಹೊಸಶೆಕೆ ಪಾಕ್ಷಿಕ ಪತ್ರಿಕೆ ಸಂಪಾದಕರು ವನಮಹೋತ್ಸವದ ಬಗ್ಗೆ ವಿಶೇಷ ಉಪನ್ಯಾಸ ನೀಡುವರು. ತಪಸ್ಸು ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ದಿ ಸೇವಾ ಸಂಸ್ಥೆ ಯಲಬುರ್ಗಾ ಪದಾದಿಕಾರಿಗಳಾದ ಇಮಾಮಸಾಬ ಸಂಕನೂರ ,ಖಾಜಾವಲಿ ಜರಕುಂಟಿ, ನೀಲಪ್ಪ ಖಾನಾವಳಿ ,ಶರಣಕುಮಾರ ಅಮರಗಟ್ಟಿ ,ಶ್ಯಾಮೀದಸಾಬ ತಾಳಕೇರಿ , ಶರಣಯ್ಯ ಕರಡಿ , ಚಂದ್ರಶೇಖರ ಮರದಡ್ಡಿ ,ಶ್ರೀಕಾಂತಗೌಡ ಮಾಲಿಪಾಟೀಲ ಉಪಸ್ಥಿತರಿರುವರು ಎಂದು ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಎಮ್  ಹಡಪದ ತಿಳಿಸಿದ್ದಾರೆ.

Please follow and like us:
error