ಕೊಪ್ಪಳ ಸಾರಿಗೆ ಸಂಸ್ಥೆ ನೌಕರರಿಂದ ೩. ೨೬ ಲಕ್ಷ ರೂ. ವಂತಿಗೆ

ಕೊಪ್ಪಳ: ಇದೇ ಡಿ. ೯ ರಿಂದ ೧೧ ರವರೆಗೆ ನಡೆಯಲಿರುವ ೭೮ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೊಪ್ಪಳ ವಿಭಾಗದ ಅಧಿಕಾರಿ, ನೌಕರರ ವಂತಿಗೆ ೩. ೨೬ ಲಕ್ಷ ರೂ.ಗಳ ಡಿ.ಡಿ. ಯನ್ನು ವಿಭಾಗೀಯ ನಿಯಂತ್ರಣಾಧಿಕಾರಿ ಪಿ.ವಿ. ಬಸವರಾವ್ ಅವರು ಸಮ್ಮೇಳನದ ಕೋಶಾಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರಿಗೆ ಹಸ್ತಾಂತರಿಸಿದರು.
  ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ವಿ. ಬಸವರಾವ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ಗಂಗಾವತಿಯಲ್ಲಿ ನಡೆಯಲಿರುವ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಲು ಸಾರಿಗೆ ಸಂಸ್ಥೆಯ ನೌಕರರು ತಮ್ಮ ವೇತನದಲ್ಲಿ ವಂತಿಗೆಯ ಮೊತ್ತವನ್ನು ಕಡಿತಗೊಳಿಸಿ, ಕನ್ನಡಾಂಬೆಯ ತೇರು ಎಳೆಯಲು ತಮ್ಮ ಸಹಕಾರವನ್ನು ಸೂಚಿಸಿದ್ದಾರೆ.  ಸಮ್ಮೇಳನ ಯಶಸ್ವಿಗೊಳಿಸುವ ಸದಾಶಯ ನಮ್ಮದಾಗಿದೆ ಎಂದರು.
  ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ವಂತಿಗೆಯನ್ನು ಸ್ವೀಕರಿಸಿ ಮಾತನಾಡಿ, ಸಮ್ಮೇಳನಕ್ಕಾಗಿ ಸಾರಿಗೆ ಸಂಸ್ಥೆಯ ಅಧಿಕಾರಿ, ನೌಕರರು ತಮ್ಮ ದೇಣಿಗೆ ಸಲ್ಲಿಸಿರುವುದು ಶ್ಲಾಘನೀಯವಾಗಿದೆ.  ಹಾಗೂ ಇತರರಿಗೂ ಇದು ಪ್ರೇರಣೆ ನೀಡಲಿದೆ ಎಂದು ಬಣ್ಣಿಸಿದರು.
  ಈಶಾನ್ಯ ಕರ್ನಾಟಕಲ ರಸ್ತೆ ಸಾರಿಗೆ ಸಂಸ್ಥೆಯ ಕೊಪ್ಪಳ ವಿಭಾಗೀಯ ಸಂಚಾರ ಅಧಿಕಾರಿ ವಿವೇಕಾನಂದ, ಸಹಾಯಕ ಲೆಕ್ಕಾಧಿಕಾರಿ ಎನ್.ವಿ. ಉಪಾಧ್ಯಾಯ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:
error