ಜಾಗತಿಕ ಮಟ್ಟದ ಆಯುರ್ವೇದ ಸಮ್ಮೇಳನದಲ್ಲಿ ಡಾ.ಕೆ.ಬಿ.ಹೀರೇಮಠರ ಸಾಧನೆ

ಕೊಪ್ಪಳ: ಇಲ್ಲಿನ ಶ್ರೀ ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯದ ಉಪಪ್ರಾಚಾರ್ಯರು ಹಾಗೂ ಡೀನ್  (ಮುಖ್ಯಸ್ಥರು) ಆದ ಡಾ.ಕೆ.ಬಿ.ಹೀರೆಮಠ ಅವರು  ಪುಣೆಯಲ್ಲಿ ನಡೆದ ಜಾಗತಿಕ ಮಟ್ಟದ ಆಯುರ್ವೇದ ಸಮ್ಮೇಳನದಲ್ಲಿ ಕರ್ನಾಟಕದ  ವಿಶೇಷ ಆಹ್ವಾನಿತ ಪ್ರತಿನಿಧಿಗಳಾಗಿ ಭಾಗವಹಿಸಿ ಕೊಪ್ಪಳಕ್ಕೆ ಕೀರ್ತಿ ತಂದಿರುತ್ತಾರೆ. ಇವರ ಅಮೋಘ ಸಾಧನೆಯನ್ನು ಗುರುತಿಸಿ  ವಿಶ್ವದ ೧೨೫೦ ಪ್ರತಿನಿಧಿಗಳಲ್ಲಿ  ಅದರಲ್ಲಿ ೧೫೦ ಪ್ರತಿನಿಧಿಗಳು ಹೊರದೇಶಗಳಾದ ಅಮೇರಿಕಾ, ಇಂಗ್ಲಂಡ್, ಅರ್‍ಜಂಟೈನಾ, ನ್ಯೂಜಿಲ್ಯಾಂಡ್,ಜರ್ಮನಿ, ಚೀಲಿ, ಆಸ್ಟ್ರೀಯಾ, ಸೌದಿ ಅರೇಬಿಯಾ ಇನ್ನು ಹಲವಾರು ವಿದೇಶಿ ಪ್ರತಿನಿಧಿಗಳ  ಜೊತೆಗೆ  ಆಯುರ್ವೇದಿಕ್ ವಿದ್ವತ್ ಅಧೀವೇಶನದ ಸೈಂಟಿಫಿಕ್ ಸಷೇನ್‌ದ  ಛೇರ್ ಪರ್‍ಸನ್ ಆಗಿ ಅವರ ಸಾಧನೆಯನ್ನು ಗುರುತಿಸಿ ಅಹ್ವಾನಿತಗೊಂಡು  ಕಾರ್ಯನಿರ್ವಹಿಸುವದರ ಮೂಲಕ  ಕೊಪ್ಪಳದ  ಕೀರ್ತಿಯನ್ನು ಅಂತಾರಾಷ್ಟ್ರೀಯದವರೆಗೆ  ಏರಿಸಿದ್ದಾರೆ. ಇವರಿಗೆ ಈ ಹಿಂದೆ ಶಾರೀರ ರಚನಾ ಶಾಸ್ತ್ರದ ಅತ್ಯುತ್ತಮ ಶಿಕ್ಷಕರೆಂದು ಅಲ್ ಇಂಡಿಯಾ ಶಾರೀರ ರಚನಾ ರಿಸರ್ಚ ಇನಸ್ಟ್ಯೂಟ್, ಹಾಸನ ಪ್ರಶಸ್ತಿ ನೀಡಿತ್ತು. ಇವರ ಈ ಸಾಧನೆಗೆ ಶ್ರೀ ಗವಿಸಿದ್ಧೇಶ್ವರ ಅಯುರ್ವೇದ ಮಹಾವಿದ್ಯಾಲಯದ ಅಡಳಿತ ಮಂಡಳಿಯ ಅಧ್ಯಕ್ಷರಾದ    ಎಸ್.ಅರ್.ನವಲಿಮಠ, ಎಸ್.ಜಿ. ಟ್ರಸ್ಟನ ಅಧ್ಯಕ್ಷರಾದ  .ಟಿ.ಜಿ ಹೀರೇಮಠ, ಕಾರ್ಯದರ್ಶಿಗಳಾದ ಎಸ್.ಮಲ್ಲಿಕಾರ್ಜುನ, ಸಂಜಯ ಕೊತಬಾಳ,   ಎಸ್.ಜಿ.ಆರ್‍ಯರ್ ಹಾಗೂ ಪ್ರಾಚಾರ್ಯರು ಸಮಸ್ತ ಸಿಬ್ಬಂದಿ ವರ್ಗದವರು ಡಾ.ಕೆ.ಬಿ.ಹೀರೇಮಠರನ್ನು ಅಭಿನಂಧಿಸಿದ್ಧಾರೆ. 
Please follow and like us:
error