ಇಂದು ಶ್ರೀ ಕಾಳಿಕಾದೇವಿ ದೇವಸ್ಥಾನದ ವಾರ್ಷಿಕ ಮಹೋತ್ಸವ.

ಕೊಪ್ಪಳ,ಏ.೨೪: ತಾಲೂಕಿನ ಹೊಸನಿಂಗಾಪುರ ಗ್ರಾಮದಲ್ಲಿ ಶ್ರೀ ಕಾಳಿಕಾದೇವಿ ದೇವಸ್ಥಾನದ ಪ್ರಥಮ ವಾರ್ಷಿಕ ಮಹೋತ್ಸವ ಕಾರ್ಯಕ್ರಮ ಏ.೨೫ ರಂದು ಜರುಗಲಿದೆ ಎಂದು ಶ್ರೀ ಕಾಳಿಕಾದೇವಿ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಪೂರ್ವಾಚಾರ ಅವರು ತಿಳಿಸಿದ್ದಾರೆ.ವಾರ್ಷಿಕ ಮಹೋತ್ಸವದ ಅಂಗವಾಗಿ ಅಂದು ಬೆ.೮ ರಿಂದ ಶ್ರೀ ಕಾಳಿಕಾದೇವಿಯ ಭಾವಚಿತ್ರದ ಮೆರವಣಿಗೆ, ದುರ್ಗಾ ಹೋಮ, ಅಭಿಷೇಕ, ಮ.೧೨.೩೦ ಕ್ಕೆ ಮಹಾಪೂಜೆ, ಮ.೨೦೦ ಪ್ರಸಾದ ವಿತರಣೆ ಜರುಗಲಿದೆ. ಕಾಳಿಕಾದೇವಿಯ ಮೂರ್ತಿ ತಯಾರಿಸಿದ ನಾಗರಾಜ ಈರಣ್ಣ ಶಿಲ್ಪಿ ಹಂಪಿ ಇವರಿಗೆ ಸನ್ಮಾನವನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕೊಪ್ಪಳದ ಸಿರಸಪ್ಪಯ್ಯ ಸ್ವಾಮಿಗಳು, ಗಿಣಗೇರಿಯ ದೇವೇಂದ್ರ ಸ್ವಾಮಿಗಳು, ಮುದ್ದಾಬಳ್ಳಿಯ ಗುರುನಾಥ ಸ್ವಾಮಿಗಳು, ಲೇಬಗೇರಿಯ ನಾಗಮೂರ್ತಿ ಸ್ವಾಮಿಗಳು, ಗಿಣಗೇರಿ ನರಸಿಂಹ ಸ್ವಾಮಿಗಳು, ಕಾತರಕಿ-ಗುಡ್ಲಾನೂರಿನ ವಿರುಪಾಕ್ಷಯ್ಯ ಸ್ವಾಮಿಗಳು, ಹರ್ಲಾಪುರದ ಮುತ್ತಪ್ಪಜ್ಜ ಸ್ವಾಮಿಗಳು ಹಾಗೂ ಗಿಣಗೇರಿಯ ಸುಬ್ಬಣ್ಣಾಚಾರ ಸೇರಿದಂತೆ ಅನೇಕರು ಸಾನಿಧ್ಯವನ್ನು ವಹಿಸುವರು ಎಂದು ಸೇವಾ ಸಮಿತಿಯ ಅಧ್ಯಕ್ಷ ಪೂರ್ವಾಚಾರ, ಉಪಾಧ್ಯಕ್ಷರಾದ ಚಂದ್ರ, ಕಾರ್ಯದರ್ಶಿ ಪ್ರಭು ತಿಳಿಸಿ ಸಮಾಜದ ಬಾಂಧವರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

Leave a Reply