fbpx

ಅಳವಂಡಿ ಗ್ರಾಮದಲ್ಲಿ ಮಹಿಳೆಯರಿಗೆ ವಿವಿಧ ಸ್ಪರ್ಧೆ.

ಕೊಪ್ಪಳ, ಆ.೧೯ (ಕ ವಾ) ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಿಷನ್ ಇಂದ್ರಧನುಷ್ ಹಾಗೂ ತಾಯಿ-ಮಗು ಆರೋಗ್ಯ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮದ ಪೂರ್ವಾಭಾವಿಯಾಗಿ ಬುಧವಾರ ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದಲ್ಲಿ ತಾಯಂದಿರಿಗೆ ಮತ್ತು ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು.
        ಗ್ರಾಮದ ಶ್ರೀ ಸಿದ್ಧೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಆವರಣದಲ್ಲಿ ಏರ್ಪಡಿಸಲಾಗಿದ್ದ ಚಿತ್ರಕಲೆ, ಭಾವಗೀತೆ, ರಸಪ್ರಶ್ನೆ, ರಂಗೋಲಿ ಬಿಡಿಸುವಿಕೆ, ಆಶುಭಾಷಣ, ಚಿತ್ರಗೀತೆಗಳ ಗಾಯನ ಮುಂತಾದ ಸ್ಪರ್ಧೆಗಳಲ್ಲಿ ಗ್ರಾಮದ ತಾಯಂದಿರು ಮತ್ತು ಮಕ್ಕಳು ಆಸಕ್ತಿಯಿಂದ ಭಾಗವಹಿಸಿದ್ದರು. ಈ ಸಂದರ್
        ಈ ಸಂದರ್ಭದಲ್ಲಿ ಅಳವಂಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಿಂಗನಗೌಡ ವ್ಹಿ.ತೊಂಡಿಹಾಳ, ವೈದ್ಯ ಡಾ|| ಸಿ.ಸಿ.ವಾಚದಮಠ, ಪತ್ರಕರ್ತ ರಾಜಾಸಾಬ್ ಮುಲ್ಲಾ ಹಾಗೂ ಇತರರು ಇದ್ದರು.

ಭದಲ್ಲಿ ಮಾತನಾಡಿದ ಧಾರವಾಡ-ಮೈಸೂರು ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಸಹಾಯಕ ನಿರ್ದೇಶಕಿ ಹಾಗೂ ನೋಡಲ್ ಅಧಿಕಾರಿ ಡಾ|| ಟಿ.ಸಿ.ಪೂರ್ಣಿಮಾ, ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಮಿಷನ್ ಇಂದ್ರಧನುಷ್ ಕಾರ್ಯಕ್ರಮದ ಬಗ್ಗೆ ಹಾಗೂ ತಾಯಿ-ಮಗು ಆರೋಗ್ಯದ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸಬೇಕಾದ ಅಗತ್ಯತೆ ಇದೆ. ಗ್ರಾಮ ಮಟ್ಟದಲ್ಲಿ ಇಂತಹ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಕೊಪ್ಪಳ ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ ವಿವಿಧ ಸರ್ಕಾರಿ ಇಲಾಖೆಗಳ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಇಂತಹ ವಿಶೇಷ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆ.೨೦ ರಂದು ಅಳವಂಡಿ ಗ್ರಾಮದಲ್ಲಿ ವಿಶೇಷ ಜಾಗೃತಿ ಅಭಿಯಾನ ಏರ್ಪಡಿಸಲಾಗುತ್ತಿದ್ದು, ಸೆಪ್ಟಂಬರ್.೦೮ ರಂದು ಯಲಬುರ್ಗಾ ತಾಲೂಕಿನ ರಾಜೂರು, ಅಕ್ಟೋಬರ್.೧೫ ರಂದು ಗಂಗಾವತಿ ತಾಲೂಕಿನ ಆನೆಗುಂದಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಆಯ್ದ ಗ್ರಾಮಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.

Please follow and like us:
error

Leave a Reply

error: Content is protected !!