You are here
Home > Koppal News > ಗವಿಸಿದ್ಧ್ ಎನ್.ಬಳ್ಳಾರಿ ಚಿಂತನಾಶೀಲ,ಪ್ರಬುದ್ಧ ಕವಿ- ಗೋರಂಟ್ಲಿ

ಗವಿಸಿದ್ಧ್ ಎನ್.ಬಳ್ಳಾರಿ ಚಿಂತನಾಶೀಲ,ಪ್ರಬುದ್ಧ ಕವಿ- ಗೋರಂಟ್ಲಿ

ಕೊಪ್ಪಳ : ಗವಿಸಿದ್ಧ್ ಎನ್. ಬಳ್ಳಾರಿ ಕವಿತೆಗಳು ವಿಮರ್ಶಾತೀತವಾಗಿವೆ. ಈಗ ಅವರಿಲ್ಲದ ಸಮಯದಲ್ಲಿ ನಾವು ಅವರ ಕಾವ್ಯ ಅವಲೋಕನ ಮಾಡಬಹುದಷ್ಟೆ, ಪ್ರಬುದ್ಧ, ಚಿಂತನಾಶೀಲ ಕವಿ.ಶಬ್ದಗಳನ್ನು ಸಶಕ್ತವಾಗಿ ದುಡಿಸಿಕೊಂಡವರು. ಸಿದ್ದಯ್ಯ ಪುರಾಣಿಕ್ ನಂತರ ಕೊಪ್ಪಳ ನಾಡು ಕಂಡ ಶ್ರೇಷ್ಠ ಕವಿ ಬಳ್ಳಾರಿ ಎಂದು ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ೮೦ನೇ ಕವಿಸಮಯದಲ್ಲಿ ಗವಿಸಿದ್ದ್ ಎನ್.ಬಳ್ಳಾರಿ ಕಾವ್ಯ ಕುರಿತು ಮಾತನಾಡುತ್ತಿದ್ದರು. ಕವಿತೆಗಳಲ್ಲಿ ಪಳಗಿದ ಹಸ್ತ,ಹೋರಾಟಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡವರು ಮತ್ತು ಮುಂಚೂಣಿಯಲ್ಲಿದ್ದವರು. ಶೋಷಿತ ವರ್ಗದ ಪರವಾಗಿ ಗಟ್ಟಿ ಕಾವ್ಯದ ಮೂಲಕ ಧ್ವನಿ ಎತ್ತಿದವರು, ಕವಿಯ ಸಾವನ್ನು ಮೀರಿ ಕಾವ್ಯ ನಿಲ್ಲುತ್ತದೆ ಎನ್ನುವುದಕ್ಕೆ ಬಳ್ಳಾರಿಯವರ ಕಾವ್ಯವೇ ಸಾಕ್ಷಿ ಎಂದು ಹೇಳಿದರು. 
 ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ಬಸವರಾಜ ಸಂಕನಗೌಡರ- ಕನ್ನಡ ಶಾಹಿರಿಗಳು, ರೇಣುಕಾ ಕರಿಗಾರ- ಪ್ರೈಜಲೆಸ್ ಪ್ರೆಂಡ್, ಸಿರಾಜ್ ಬಿಸರಳ್ಳಿ- ವಿಪರ್‍ಯಾಸ, ಎಂಡಿ.ಹುಸೇನ್-  ಆತ್ಮೀಯ ಗೆಳೆಯ ಬಳ್ಳಾರಿ, ಮಹಾಂತೇಶ ಮಲ್ಲನಗೌಡರ- ವಿಶ್ವಭಾತೃತ್ವ ಗೀತೆ,ಲಲಿತಾ ಭಾವಿಕಟ್ಟಿ- ಹಮ್ಮು ಭಾವಗೀತೆ, ಎನ್.ಜಡೆಯಪ್ಪ- ಆಸೆ,ಅನಸೂಯಾ ಜಾಗೀರದಾರ- ಕನಸು, ವಿಠ್ಠಪ್ಪ ಗೋರಂಟ್ಲಿ- ಕಿಂಡಿಯಲ್ಲಿ ಕಂಡ ಕನಕ, ಶಿವಪ್ರಸಾದ ಹಾದಿಮನಿ-ಸಿಪಿಕೆ, ಗುರುರಾಜ ದೇಸಾಯಿ- ರಾಜಕೀಯ, ಶಾಂತಾದೇವಿ ಹಿರೇಮಠ- ದ್ವಿಪದಿಗಳ ವಾಚನ ಮಾಡಿದರು. 
ಈ ಸಂದರ್ಭದಲ್ಲಿ ಬಸವರಾಜ್ ಶೀಲವಂತರ, ಹನುಮಂತಪ್ಪ ಅಂಡಗಿ, ಯಶವಂತಕುಮಾರ ಮೆತ್ರಿ,ರಾಕೇಶ್ ಕಾಂಬ್ಳೆಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಶಿವಪ್ರಸಾದ ಹಾದಿಮನಿ ಸ್ವಾಗತಕೋರಿದರೆ ಗುರುರಾಜ್ ದೇಸಾಯಿ ವಂದನಾರ್ಪಣೆ ಮಾಡಿದರು. ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು. 

Leave a Reply

Top