fbpx

ಸಿ.ಬಿ.ಐ ಗೆ ವಹಿಸಲು ಕೊಪ್ಪಳ ಜಿಲ್ಲಾ ಬಿಜೆಪಿ ಯಿಂದ ಆಗ್ರಹ

ಕೊಪ್ಪಳ : ದಿ ೧೮ರಂದು ಕೊಪ್ಪಳ ನಗರದ ಅಶೋಕ ವೃತ್ತದಲ್ಲಿ ಕೊಪ್ಪಳ ಜಿಲ್ಲಾ ಬಿ ಜೆ ಪಿ ಘಟಕದಿಂದ ರಾಜ್ಯ ರೈತ್ರ ಮೋರ್ಚಾ ಉಪಾಧ್ಯಕ್ಷರು ಹಾಗೂ ವಿಭಾಗಿ ಪ್ರಭಾರಿಗಳಾದ ಹೆಚ್ ಗಿರಿಗೌಡರ ನೇತೃತ್ವದಲ್ಲಿ ಡಿ.ಕೆ ರವಿವರ  ಸಾವಿಗೆ ಕಾರಣ ಕುರಿತು  ರಾಜ್ಯ ಸರಕಾರದ ವಿರುದ್ದ ಇಂದು ಬೃಹತ್ತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.     
ದಕ್ಷ ಆಡಳಿತಗಾರರಾಗಿದ್ದ  ಐ.ಎ.ಎಸ್ ಅಧಿಕಾರಿ ಡಿ.ಕೆ ರವಿ ಅವರು ಈ ಹಿಂದೆ ಕೊಪ್ಪಳದಲ್ಲಿ ನಮ್ಮ ಸರಕಾರ ವಿದ್ದಾಗ ಕೊಪ್ಪಳ ಜಿಲ್ಲಾ ಪಂಚಾಯತಿಗೆ ಸಿ.ಇ.ಓ  ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಆಡಳಿತ ವೈಖರಿ ಬಗ್ಗೆ ಜಿಲ್ಲೆಯ ಜನರಿಗೆ ಅವರು ಅಲ್ಪ ಸಮಯದಲ್ಲಿ ಪ್ರೀತಿಗೆ ಪಾತ್ರರಾಗಿದ್ದರು ಮತ್ತು ಕಾಂಗ್ರೆಸ್  ಸರಕಾರ ಆಡಳಿತಕ್ಕೆ ಬಂದ ಕೂಡಲೆ ಭ್ರಷ್ಟಾಚಾರ ಮಾಡಲು ಅವರಿಗೆ ಅವಕಾಶವಿಲ್ಲದರಿಂದ ಜಿಲ್ಲೆಯ ನಿಷ್ಠಾವಂತ ಅಧಿಕಾರಿಯಾದ ಸಿ.ಇ.ಓ ಡಿ.ಕೆ ರವಿಯವರನ್ನು ಬೇರೆ ಕಡೆ ವರ್ಗಾವಣೆ ಮಾಡಿಸಿದರು. ಇದು ನಮ್ಮ ಕೊಪ್ಪಳ ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳ ಆಧ್ಯಕರ್ತವ್ಯ ಎಂದು ಭಾವಿಸಿದ್ದಾರೆ ಕೊಪ್ಪಳದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ ಇದನ್ನು ಯಡೆಯಲು ಬಂದರೆ ಅಧಿಕಾರಿಗಳನ್ನೆ ವರ್ಗಾವಣೆ ಮಾಡಿಸುವ ಚುನಾಯಿತ ಪ್ರತಿನಿಧಿಗಳು ಇಲ್ಲಿ ಅಧಿಕಾರ ವಹಿಸಿಕೊಂಡು ಮೆರೆಯುತ್ತಿದ್ದಾರೆ.   
ಡಿ.ಕೆ ರವಿಯವರ ನಿಗೂಡ ಸಾವು ಹಲವಾರು ಸಂಶಗಳಿಗೆ ಎಡೆಮಾಡಿಕೊಟ್ಟಿದೆ. ಏಕೆಂದರೆ ಬೆಂಗಳೂರಿನಲ್ಲಿ ಪೊಲೀಸ ಕಮೀಷನರ್‌ರವರು ಪ್ರಾರಂಭದ ಹಂತದಲ್ಲಿಯೆ ಇದು ಒಂದು ಆತ್ಮಹತ್ಯೆ ಪ್ರಕರಣವೆಂದು ಹೇಳೀಕೆ ನೀಡಿದ್ದಾರೆ.  ಹಾಗೂ ಗೃಹ ಮಂತ್ರಿಗಳಾದ ಕೆ.ಜೆ ಜಾರ್ಜ ರವರು ಸಧನದಲ್ಲಿ ಇದು ಒಂದು ಆತ್ಮಹತ್ಯೆ ಪ್ರಕರಣವೆಂಬುದಾಗಿ ಪರಿಗಣಿಸಿ ಹೊರಟಿರುವುದು ಸರಕಾರದ ನಡೆ ಹಾಗೂ ಪೊಲೀಸ ನಡೆಯನ್ನು ಸಂಶಯ ಮೂಡಿಸುವಂತಾಗಿದೆ  ಮತ್ತು ಇನಷ್ಟು ನೇರವಾಗಿ ಸಂಶಯಕ್ಕೆ ಕಾರಣವಾಗಿದೆ. ಆದುದ್ದರಿಂದ ನಮ್ಮ ಕೊಪ್ಪಳ ಜಿಲ್ಲಾ ಬಿ ಜೆ ಪಿ ವತಿಯಿಂದ ಸಿ.ಬಿ.ಐ ತನಿಖೆಗೆ ವಹಿಸಲು ಆಗ್ರಪಡಿಸುತ್ತದೆ ಎಂದು ಗಿರಿಗೌಡ್ರ ರಾಜ್ಯ ಸರಕಾರಕ್ಕೆ ಆಗ್ರಹಿಸಿದರು.    
ಈ ಸಂದರ್ಭದಲ್ಲಿ ಕಾರ್ಯಕರ್ತರು ರಾಜ್ಯ ಸರಕಾರದ ವಿರುದ್ದ ಘೋಷಣೆಯನ್ನು ಕುಗುತ್ತಾ ಅಶೋಕ ವೃತ್ತದಲ್ಲಿ ಪ್ರತಿಭಟನೆಯನ್ನು ಮಾಡಿದರು.      
ಈ ಸಂದರ್ಭದಲ್ಲಿ ಬಿ.ಜೆ.ಪಿ ಮುಖಂಡರಾದ ಆರ್.ಬಿ ಪಾನಘಂಟಿ, ಅಪ್ಪಣ್ಣ ಪದಕಿ, ತೊಟ್ಟಪ್ಪ ಮೇಟಿ, ಬಿ.ಎಮ್ ಭೂಸನೂರಮಠ, ಸಂಗಪ್ಪ ವಕ್ಕಳದ, ಪೀರಾಹುಸೆನಿ ಹೊಸಹಳ್ಳಿ, ಗವಿಸಿದ್ದಪ್ಪ ಕಂದಾರಿ, ಮಾರೇಶ ಮೂಷ್ಠೂರು, ರಾಜು ಬಾಕಳೆ, ನರಸಿಂಗರಾವ ಕುಲಕರ್ಣಿ ಕೊಪ್ಪಳ ಮಂಡಲ ಅಧ್ಯಕ್ಷ ಕೊಟ್ರೇಶ ಶೆಡ್ಮಿ, ಯಲಬುರ್ಗಾ ಮಂಡಲ ಅಧ್ಯಕ್ಷರಾದ ಶಂಕ್ರಪ್ಪ ಬೊಳಟಗಿ, ಮಂಜುನಾಥ ಹಳ್ಳಿಕೆರಿ, ಮಲ್ಲಪ್ಪ ಬೆಲರಿ, ಸುರೇಶ ಮುಧೂಳ, ಅಮರೇಶ ಕರಡಿ, ಗವಿಸಿದ್ದಪ್ಪ ಚಿನ್ನೂರು, ದೇವಾರಜ, ಶರಣಪ್ಪ ಹ್ಯಾಟಿ, ವೀರಯ್ಯ ಬೊಮ್ಮನಾಳ, ಉಮೇಶ ಕರಡೆಕರ್, ಜಿಲ್ಲಾ ಮಹಿಳಾ ಮುಖಂಡರಾದ ಹೇಮಲತಾ ನಾಯಕ, ಶಾಮಲಾ ಕೊನಾಪುರ, ಮಧುರಾ ಕರಣಂ, ಹೇಮಕ್ಕ ಮಂಗಳೂರು, ವಾಣಿಶ್ರೀ, ಪೂರ್ಣಿಮಾ, ಸುವರ್ಣ, ಶೋಭಾ ನಗರಿ, ಬಿ ಜೆ ಪಿಕೊಪ್ಪಳ ಜಿಲ್ಲಾ  ವಕ್ತಾರರಾದ ಚಂದ್ರಶೇಖರಗೌಡ ಪಾಟೀಲ ಹಲಗೇರಿ  ಪ್ರತಿಭನಟೆಯಲ್ಲಿ ಪಾಲಗೊಂಡಿದ್ದರು.  
Please follow and like us:
error

Leave a Reply

error: Content is protected !!