ದ್ವಿತೀಯ ಪಿಯುಸಿ ಪರೀಕ್ಷೆ ಸಹಾಯವಾಣಿ ಪ್ರಾರಂಭ.

ಕೊಪ್ಪಳ, ಮಾ.೧೦ (ಕ
ವಾ) ಕೊಪ್ಪಳ ಪದವಿ ಪೂರ್ವ ಶಿಕ್ಷಣ ಇಲಾಖೆಯು ಜಿಲ್ಲೆಯ ದ್ವಿತೀಯ ಪಿ.ಯು.ಸಿ
ಪರೀಕ್ಷೆ ಬರೆಯಲಿರುವ ವಿಧ್ಯಾರ್ಥಿಗಳಿಗೆ ಸಹಾಯ ದೂರವಾಣಿ ಆರಂಭಿಸಿದ್ದು, ಪರೀಕ್ಷಾ ಭಯ
ನಿವಾರಣೆ, ಪರೀಕ್ಷೆಗೆ ಸಂಬಂಧಿಸಿದ ಯಾವುದೇ ಮಾಹಿತಿಗಳಿಗೆ ಸಂಬಂಧಿಸಿದಂತೆ
ವಿದ್ಯಾರ್ಥಿಗಳು ಸಹಾಯವಾಣಿಗೆ ಕರೆ ಮಾಡಿ, ತಮ್ಮ ಗೊಂದಲ ನಿವಾರಿಸಿಕೊಳ್ಳಬಹುದಾಗಿದೆ.
    
ಮಾರ್ಚ್-೨೦೧೬ ರ ದ್ವಿತೀಯ ಪಿ.ಯು.ಸಿ ಪರೀಕ್ಷೆಗೆ ಸಂಬಂಧಿಸಿದಂತೆ ವಿಧ್ಯಾರ್ಥಿಗಳ
ಸಮಸ್ಯೆಗಳನ್ನು ಪರಿಹರಿಸಲು ಕೊಪ್ಪಳ ಪದವಿ ಪೂರ್ವ ಶಿಕ್ಷಣ ಇಲಾಖೆಯು ಎರಡು ಪ್ರತ್ಯೇಕ
ದೂರವಾಣಿ ಸಂಖ್ಯೆಗಳನ್ನು ನೀಡಿದ್ದು  ವಿಧ್ಯಾರ್ಥಿಗಳು, ದೂರವಾಣಿ
ಸಂಖ್ಯೆ:೦೮೫೩೯-೨೨೫೪೬೫ ಮತ್ತು ೦೮೫೩೯-೨೨೫೪೭೦. ಸಂಖ್ಯೆಗೆ  ಕರೆ ಮಾಡಿ ಪರೀಕ್ಷೆಗೆ
ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.  ಎಂದು ಕೊಪ್ಪಳ ಪದವಿ ಪೂರ್ವ
ಶಿಕ್ಷಣ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

Please follow and like us:
error