fbpx

ಭಾಗ್ಯನಗರ ಪುನರ್‌ವಸತಿ ಕಾಲೋನಿಯನ್ನು ಕೊಪ್ಪಳ ನಗರಸಭೆಗೆ ಸೇರ್ಪಡೆಗೆ ಒತ್ತಾಯ.

ಕೊಪ್ಪಳ ಕಂದಾಯ ಗ್ರಾಮ ವ್ಯಾಪ್ತಿಯ ಭಾಗ್ಯನಗರ ಪುನರ್‌ವಸತಿ ಕಾಲೋನಿಯನ್ನು ಕೊಪ್ಪಳ ನಗರಸಭೆಗೆ ಸೇರ್ಪಡೆಗೆ ಜನಪರ ಸಂಘಟನೆಗಳು ಒಕ್ಕೂಟದಿಂದ ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ಮನವಿಯಲ್ಲಿ ಕೊಪ್ಪಳ ನಗರದ ಕಂದಾಯ ಗ್ರಾಮ ವ್ಯಾಪ್ತಿಯೊಳಗಡೆ ಇರುವ, ತುಂಗಭದ್ರ ಯೋಜನೆಯ ಪುನರವಸತಿ ಕಾಲೋನಿಯಾದ ಭಾಗ್ಯನಗರ ಪ್ರತ್ಯೇಕವಾಗಿದ್ದು, ಗ್ರಾಮ ಪಂಚಾಯತ್ ಎಂದು ಮುಂದುವರೆದುಕೊಂಡು ಬಂದಿತ್ತು. ಇತ್ತೀಚಿಗೆ ಸರ್ಕಾರ ಆದೇಶ ಹೊರಡಿಸಿ ಪಟ್ಟಣ ಪಂಚಾಯತಿಯನ್ನಾಗಿ ಮೇಲ್ದರ್ಜೆಗೇರಿಸಲು ಉದ್ದೇಶಿಸಿತ್ತು. (ಕೆಲವು ನಾಗರಿಕರು ಇದಕ್ಕೆ ಆಕ್ಷೇಪಣೆ ಸಲ್ಲಿಸಿದ್ದಾರೆ) ಇಲ್ಲಿನ ಭೌಗೋಳಿಕ ಮತ್ತು ವಾಸ್ತವಿಕ ಪರಿಸ್ಥಿತಿ ಅವಲೋಕಿಸಿದಾಗ, ಎರಡೂ ಪಟ್ಟಣಗಳು ಒಂದಕ್ಕೊಂದು ಬೆಸೆದುಕೊಂಡಿದ್ದರಿಂದ ಭಾಗ್ಯನಗರವನ್ನು ಕೊಪ್ಪಳ ನಗರಸಭೆಗೆ ಸೇರ್ಪಡೆ ಮಾಡಬೇಕೆಂದು ನಿರ್ಣಯ ಪಾಸ್ ಮಾಡಿ ನಗರಸಭೆ ಜಿಲ್ಲಾ ಆಡಳಿತದ ಮೂಲಕ ಸರ್ಕಾರಕ್ಕೆ ಕಳುಹಿಸಿತ್ತು.
    ಇದನ್ನು ವಿರೋಧಿಸಿ ಭಾಗ್ಯನಗರದ ವಿವಿಧ ತೆರಿಗೆ ವಿನಾಯಿತಿ ಪಡೆಯುತ್ತಿದ್ದ ಬಹುದೊಡ್ಡ ಉದ್ದಿಮೆದಾರರು ನಗರಸಭೆಗೆ ಸೇರುವ ವಿಚಾರದಲ್ಲಿ ಆಕ್ಷೇಪಣೆ ಎತ್ತಿದ್ದಾರೆ. ಎಂದೋ ಕೊಪ್ಪಳ ನಗರಸಭೆಗೆ ಸೇರಬೇಕಾದ ಭಾಗ್ಯನಗರವನ್ನು ಪ್ರತ್ಯೇಕತಾವಾದಿಗಳಾದ ವಿವಿಧ ತೆರಿಗೆ ವಿನಾಯಿತಿ ಪಡೆಯುತ್ತಿದ್ದವರು, ರೀಯಲ್ ಎಸ್ಟೇಟ್ ಲಾಬಿದಾರರ ಹಿತಸಕ್ತಿಗೆ ಬಾಗಿದರೆ ಸರ್ಕಾರ ಯೋಜಿಸುವ ಅತ್ಯಂತ ಸುಸಜ್ಜಿತ ಸಿಟಿ ಮಾಸ್ಟರ್ ಪ್ಲ್ಯಾನ್, ಒಳಚರಂಡಿ, ಶುದ್ಧ ಕುಡಿಯುವ ನೀರು, ವಿಶಾಲ ರಸ್ತೆ, ವಿದ್ಯುತ್ ದೀಪಗಳ ವ್ಯವಸ್ಥೆ ಹಾಗೂ ಬೃಹತ್ ಆಶ್ರಯ ಯೋಜನೆಯಿಂದ ಬಹುಸಂಖ್ಯಾತ ಜನರಿಗೆ ವಂಚಿಸಿದಂತಾಗುತ್ತದೆ. ಈಗಾಗಲೇ ಕೊಪ್ಪಳ ನಗರದ ಮುಖ್ಯ ರಸ್ತೆ ಅಕ್ಕ-ಪಕ್ಕದ ಭಾಗವನ್ನು ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿಗಳ ಮೇಲೆ ಪ್ರಭಾವ ಹಾಕಿ ಅಕ್ರಮವಾಗಿ ಎನ್‌ಎ ಮಾಡಿಸಿ ಭಾಗ್ಯನಗರಕ್ಕೆ ಸೇರಿಸಿಕೊಳ್ಳಲಾಗಿದೆ.
    ಇದಲ್ಲದೆ ಒಂದುವರೆ ಲಕ್ಷ ಜನಸಂಖ್ಯೆ ಮೀರಿದ ನಗರಗಳನ್ನು ಕೇಂದ್ರದ ಅಮೃತ ನಗರ ಯೋಜನೆಯಡಿ ಬರುವ ಅವಕಾಶವನ್ನು ಹಾಗೂ ವಿವಿಧ ವಿಶೇಷ ಅನುದಾನಗಳ ಗಣನೀಯವಾಗಿ ಹೆಚ್ಚಳಗೊಳ್ಳುವ ಅವಕಾಶವನ್ನು ತಪ್ಪಿಸಲಾಗುತ್ತಿದೆ.
    ಒಂದುವರೆ ಲಕ್ಷ ಜನ ಸಂಖ್ಯೆಯಾದರೆ ಈಗಿರುವ ನಗರಸಭೆ ಗ್ರೇಡ್-೧ ಆಗುತ್ತದೆ. ಗ್ರೇಡ್-೧ಯಾದರೆ ಸಿಬ್ಬಂದಿ ವರ್ಗವು ದ್ವಿಗುಣವಾಗುತ್ತದೆ. ಹೀಗಾಗಿ ನಗರಕ್ಕೆ ಬರುವ ಹಲವಾರು ಯೋಜನೆಗಳಿಂದ ಬಹುತೇಕ ಅಭಿವೃದ್ಧಿ ಹೊಂದುತ್ತದೆ. ಕೊಪ್ಪಳ ನಗರಸಭೆಗೆ ಭಾಗ್ಯನಗರ ಸೇರ್ಪಡೆಗೆ ಪೂರಕವಾಗಿ ನಗರಸಭೆಯಲ್ಲಿ ದಿ. ೨೭-೬-೨೦೧೫ರಂದು ನಡೆದ ಸಾಮಾನ್ಯಸಭೆಯಲ್ಲಿ ಬೆಂಕಿನಗರದ ನೀರಿನ ಟ್ಯಾಂಕ್‌ದಿಂದ ಭಾಗ್ಯನಗರಕ್ಕೆ ೨೪x೭ ಕುಡಿಯುವ ನೀರು ಪೂರೈಕೆ ಯೋಜನೆಗೆ ಅನುಮೋದನೆ ನೀಡಲಾಗಿದೆ. ಈಶ್ಯಾನ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಭಾಗ್ಯನಗರದಿಂದ ಜಿಲ್ಲಾ ಕೇಂದ್ರದ ವಿವಿಧ ಬಡಾವಣೆಗಳಿಗೆ ನಗರ ಸಾರಿಗೆ ಸೇವೆ ನೀಡುತ್ತಿದೆ, ಭಾಗ್ಯನಗರವನ್ನು ಅವೈಜ್ಞಾನಿಕವಾಗಿ ಗ್ರಾಮ ಪಂಚಾಯತ್ ಎಂದು ಕೊಪ್ಪಳದಿಂದ ಬೇರ್ಪಡಿಸಿದ್ದಕ್ಕೆ ಸರ್ವೇ ನಂ. ೧೪/೧, ೧೮/೧ರ ಭೂಮಿಯಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಗೃಹ ನಿರ್ಮಾಣ ಸಂಘ (ಎನ್‌ಜಿಓ ಕಾಲೋನಿ) ದಿ. ೧೦-೫-೧೯೯೫ರಂದು ಅಸ್ತಿತ್ವಕ್ಕೆ ಬಂದಿದ್ದು, ಅಂದಿನಿಂದ ಇಂದಿನ
    ಕೊಪ್ಪಳ ನಗರದ ಐದು ಕಿ.ಮೀ. ಸುತ್ತಲಿನ ದದೇಗಲ್, ಭಾಗ್ಯನಗರ, ಮಂಗಳಾಪೂರ (ಭಾಗಶಃ), ಕೋಳೂರು, ಹೊರತಟ್ನಾಳ, ಗುನ್ನಳ್ಳಿ (ಭಾಗಶಃ), ಕಿಡದಾಳ, ಓಜನಹಳ್ಳಿ (ಭಾಗಶಃ),  ಹೂವಿನಾಳ (ಭಾಗಶಃ), ಬಹದ್ದೂರಬಂಡಿ (ಭಾಗಶಃ) ಮತ್ತು ಚುಕನಕಲ್ ಗ್ರಾಮಗಳನ್ನು ಒಳಗೊಂಡಂತೆ ನಗರಾಭಿವೃದ್ದಿ ಯೋಜನೆಯ ೧೨ ಗ್ರಾಮಗಳನ್ನು ಒಳಗೊಂಡು ನಗರಸಭೆ ಗ್ರೇಡ್-೧ ಎಂದು ಸರ್ಕಾರ ಮೇಲ್ದರ್ಜೆಗೇರಿಸಲು ಚಿಂತಿಸಬೇಕಾಗಿದೆ. ಭವಿಷ್ಯತಿನಲ್ಲಿ ಹುಬ್ಬಳ್ಳಿ-ಧಾರವಾಡ, ಶಿವಮೊಗ್ಗ-ಭದ್ರವತಿ ಮಹಾನಗರ ಪಾಲಿಕೆ, ಗದಗ-ಬೆಟಗೇರಿ ಅವಳಿ ನಗರಗಳಂತೆ ಕೊಪ್ಪಳ-ಭಾಗ್ಯನಗರ ಒಳಗೊಂಡು ನಗರಸಭೆ ಗ್ರೇಡ್-೧  ರಚಿಸಲು ಸರ್ಕಾರ ಮುಂದಾಗಬೇಕೆಂದು ಈ ಮೂಲಕ ಕೊಪ್ಪಳ ಜನಪರ ಸಂಘಟನೆಗಳ ಒಕ್ಕೂಟದಿಂದ  ವಿನಂತಿಸಲಾಗಿದೆ.
ಜನಪರ ಸಂಘಟನೆಗಳ ಒಕ್ಕೂಟದ ವಿವಿಧ ಸಂಘಟನೆಗಳಾದ ಕೊಳಚೆ ನಿರ್ಮೋಲನಾ ವೇದಿಕೆಯ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್, ಟಿಯುಸಿಐಯ ರಾಜ್ಯ ಉಪಾಧ್ಯಕ್ಷ ಕೆ.ಬಿ. ಗೋನಾಳ, ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ರಮೇಶ ಚಿಕೇನಕೊಪ್ಪ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವಿಭಾಗೀಯ ಸಂಘಟನಾ ಕಾರ್ಯದರ್ಶಿ ರಾಮಣ್ಣ ಕಂದಾರಿ, ಹನುಮೇಶ ಕವಿತಾಳ, ಶ್ರೀನಿವಾಸ ಗಂಗಾಮತ, ಸಮಾಜಿಕ ಕಾರ್ಯಕರ್ತ ಸೈಯ್ಯದ್ ನೂರಲ್ಲಾ ಖಾದ್ರಿ ಮತ್ತಿತರರು ಮನವಿ ಅರ್ಪಿಸುವ ಸಂದರ್ಭದಲ್ಲಿ ಭಾಗವಹಿಸಿದ್ದರು.

ವರೆಗೆ ಸುಮಾರು ೨೦ ವರ್ಷಗಳಿಂದ ಭಾಗ್ಯನಗರ ಗ್ರಾಮ ಪಂಚಾಯತಿಯಿಂದ ಕುಡಿಯುವ ನೀರು, ರಸ್ತೆ ಮತ್ತು ಚರಂಡಿ ವ್ಯವಸ್ಥೆ, ತ್ರಿಪೇಸ್ ವಿದ್ಯುತ್, ನಗರ ಸಾರಿಗೆ ಸೇರಿದಂತೆ ಇತರೇ ಸೌಲಭ್ಯಗಳಿಂದ ವಂಚಿತವಾಗುತ್ತಾ ಬಂದಿದೆ. ಸದರಿ ಎನ್.ಜಿ.ಓ. ಕಾಲೋನಿ ಕೊಪ್ಪಳ ನಗರಸಭೆಗೆ ಸೇರ್ಪಡೆ ಮಾಡಲು ಬಹುತೇಕ ನಿವಾಸಿಗಳು ಕಳೆದ ವರ್ಷವೇ ಲಿಖಿತದ ಮೂಲಕ ಆಕ್ಷೇಪಣಾ ಮನವಿ ಸಲ್ಲಿಸಿದ್ದಾರೆ.

Please follow and like us:
error

Leave a Reply

error: Content is protected !!