ಸೆಪ್ಟೆಂಬರ್ ೧೦,೧೧ ರಂದು ರಕ್ತದಾನ ಶಿಬಿರ.

ಕೊಪ್ಪಳ-09-  ಜಿಲ್ಲೆಯ ಹಿರೇಮ್ಯಾಗೇರಿ ಮತ್ತು ಮುರಡಿ ಗ್ರಾಮದಲ್ಲಿ ಆಗಸ್ಟ್ ೧೦,೧೧ ರಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಶಾಖೆ, ಕೊಪ್ಪಳದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಹಿರೇಮ್ಯಾಗೇರಿ – ಯಲಬುರ್ಗ ತಾಲೂಕಿನ ಹಿರೇಮ್ಯಾಗೇರಿ ಗ್ರಾಮದಲ್ಲಿ ದಿ. ೧೦ ರಂದು ಗುರವಾರ ಸಂಕಲ್ಪ ವಿಧ್ಯಾ ಸಂಸ್ಥೆ, ಮೈಸೂರು ಮಹಾಂತಸ್ವಾಮಿ ಮಠದ ಭಕ್ತಾದಿಗಳ ವತಿಯಿಂದ ಮತ್ತು ಅಕ್ಕಮಹಾದೇವಿ ಪುರಾಣ ಮಂಗಲೋತ್ಸವದ ಅಂಗವಾಗಿ ರಕ್ತದಾನ ಶಿಬಿರ ಆಯೋಜಿಸಿದ್ದು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಅಂದು ಬೆಳಿಗ್ಗೆ ೧೦ ರಿಂದ ೦೪  ಗಂಟೆಯವರೆಗೆ ಜರುಗಲಿದೆ. ಮುರಡಿ – ಯಲಬುರ್ಗ ತಾಲೂಕಿನ ಮುರಡಿ ಗ್ರಾಮದಲ್ಲಿ ದಿ. ೧೧ ರಂದು ಶುಕ್ರವಾರ ಜನನಿ ಸುರಕ್ಷಾ ಅಭಿಯಾನ ಇವರ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಿದ್ದು ಮುರಡಿಯಲ್ಲಿ ಅಂದು ಬೆಳಿಗ್ಗೆ ೧೦ ರಿಂದ ೦೪ ಗಂಟೆಯವರೆಗೆ ಜರುಗಲಿದೆ. ಈ ಎರಡೂ ಶಿಬಿರಗಳಲ್ಲಿ ಆಸಕ್ತರು ರಕ್ತದಾನ ಮಾಡಿ ಸಹಕರಿಸುವಂತೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಶ್ರೀನಿವಾಸ ಹ್ಯಾಟಿ ಕೋರಿದ್ದಾರೆ.

Related posts

Leave a Comment