ಸುರೇಶ ಎಸ್.ಭೂಮರೆಡ್ಡಿ ಇವರಿಗೆ ವಿಶ್ವೇಶ್ವರಯ್ಯ ಪ್ರಶಸ್ತಿ

ದಿನಾಂಕ ೧೧. ರಂದು ಬೆಂಗಳೂರಿನ ಡಾ. ರಾಜಕುಮಾರ ಕಲಾಕ್ಷೇತ್ರ, ಬೆಂಗಳೂರಿನಲ್ಲಿ ಶ್ರೀ ಕಲ್ಮೇಶ್ವರ ಮಹಾಸ್ವಾಮಿಗಳು, ಬಾಳೆ ಹೊನ್ನೂರು ರಂಭಾಪುರಿ ಶಾಖಾ ಹಿರೇಮಠ ಇವರ ದಿವ್ಯಸಾನಿಧ್ಯದಲ್ಲಿ ಸ್ವಾಮಿ ವಿವೇಕಾನಂದರ ೧೫೦ನೇ ಜನ್ಮ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದರ ಅಂಗವಾಗಿ ೨೧ನೇ ವಾರ್ಷಿಕ ವಿಶ್ವೇಶ್ವರಯ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕೊಪ್ಪಳದ   ಸುರೇಶ ಎಸ್. ಭೂಮರೆಡ್ಡಿ, ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷರು, ಇವರಿಗೆ ಖ್ಯಾತ ಚಲನಚಿತ್ರ ನಟರಾದ   ಸದಾಶಿವ ಬ್ರಹ್ಮಾವರ ಇವರು ವಿಶ್ವೇಶ್ವರಯ್ಯ ಪ್ರಶಸ್ತಿ ಪ್ರದಾನ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ದೊಡ್ಡರಂಗೇಗೌಡ ಇವರು ವಹಿಸಿಕೊಂಡಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು   ಎನ್. ನಾಗರಾಜ, ಮಾಜಿ ವಿರೋಧ ಪಕ್ಷದ ನಾಯಕರು, ಬಿ.ಬಿ.ಎಂ.ಪಿ ಇವರು ವಹಿಸಿದ್ದರು. ಶಶಿಕಾಂತ ಅಕ್ಕಪ್ಪ ನಾಯಕ,  ಬಾಬು ಕೃಷ್ಣಮೂರ್ತಿ, ಚಲನಚಿತ್ರ ಕಲಾವಿದರಾದ  ಬ್ಯಾಂಕ್ ಜನಾರ್ಧನ, ಸೌಜನ್ಯ ಡಿ.ವಿ. ಚಲನಚಿತ್ರ ಕಲಾವಿದೆ ಹಾಗೂ ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಟಾನ ಟ್ರಸ್ಟ್ ನ ಅಧ್ಯಕ್ಷರಾದ   ರಮೇಶ ಸುರ್ವೇ ಮುಂತಾದವರು ಭಾಗವಿಸಿದ್ದರು.

Leave a Reply