ಸ್ವಾತಂತ್ರ್ಯ ಹೋರಾಟಗಾರರು ನಮಗೆ ಆದರ್ಶ-ಗುರುರಾಜ

 ಸ್ವಾತಂತ್ರ್ಯಕ್ಕಾಗಿ ಹಗಲಿರುಳು ಶ್ರಮಿಸಿ ಮಹಾನ್ ನಾಯಕರ ಸ್ಮರಣೆ ನಮ್ಮೆಲ್ಲರ ಕರ್ತವ್ಯ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಆದರ್ಶ ಪಾಲನೆ ಅತ್ಯಗತ್ಯವೇಂದು ನ್ಯಾಯ ವಾದಿ ಡಿ. ಗುರುರಾಜ ಹೇಳಿದರು.
ಅವರು ತಾಲೂಕಿನ ಗಿಣಿಗೇ ರಾದ ಬೇಂದ್ರೆ ಪಬ್ಲಿಕ್ ಸ್ಕೂಲ್‌ನಲ್ಲಿ ೬೮ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು.
ಭಾರತ ದೇಶ ವಿಶ್ವದಲ್ಲೇ ಅತಿ ಪ್ರಭಾವಿ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದೆ. ಬ್ರೀಟಿಷರಿಂದ ನಮಗೆ ಮುಕ್ತಿ ನೀಡಲು ಹೋರಾಟ ನಡೆಸಿದ ಮಹಾತ್ಮರು ನಮ್ಮಗೆಲ್ಲ ದಾರಿ ದೀಪ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಸ್ಥೆ ಅಧ್ಯಕ್ಷ ಸಂತೋಷ ದೇಶಪಾಂಡೆ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಮಾಡಿದ ಮಹಾತ್ಮರ ಪರಿಶ್ರಮದ ಫಲವಾಗಿ ನಾವು ಇಂದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಕಾತರಕವಾಗಿ ನೇಮದಿಯಿಂದ ಜೀವಿಸುತ್ತಿದ್ದೇವೆ ಎಂದರು.
ಅಂದು ನಮ್ಮ ದೇಶದಲ್ಲಿ ನಾವು ಇನ್ನೋಬ್ಬರ ಆದೇಶದಂತೆ ನಡೆಯುವ ಸ್ಥಿತಿ ಇಂದಿಲ್ಲ. ಬ್ರೀಟಿಷ ಕಪಿ ಮುಷ್ಟಿಯಿಂದ ಮಹಾತ್ಮ ಗಾಂಧಿ, ಸುಭಾಷ ಚಂದ್ರ ಬೋಸ್ ಸಾವಿರಾರು ಹೋರಾಟ ಗಾರರ ಪರಿಶ್ರಮದ ಫಲವೇ ನಮ್ಮ ಸ್ವಾತಂತ್ರ್ಯ ಎಂದರು.
ವೇದಿಕೆ ಮೇಲೆ ಗ್ರಾ.ಪಂ. ಮಾಜಿ ಸದಸ್ಯರಾದ ಮಲ್ಲಪ್ಪ ಕೋಮಲಾಪೂರ, ಗ್ರಾ.ಪಂ. ಸದಸ್ಯ ಮಲ್ಲೇಶಪ್ಪ ವಾರದ, ಶಾಲಾ ಪಾಲಕರಾದ ಶರಬಯ್ಯ ರ‍್ಯಾವಳಮಠ, ಸಂಸ್ಥೆ ಕಾರ್ಯ ದರ್ಶಿ ಮಂಜುನಾಥ ಅಂಗಡಿ, ಶಾಲಾ ಮುಖ್ಯೋ ಪಾಧ್ಯಾಯ ಬಸವರಾಜ ಶಿರಗುಂಪಿಶೆಟ್ಟರ ಮತ್ತಿತರರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ವಿದ್ಯಾರ್ಥಿಗಳಾದ ಮೇಘನಾ ಹಾಗೂ ಚೈತ್ರ ಪ್ರಾರ್ಥಿಸಿದರು. ಸಹ ಶಿಕ್ಷಕಿ ಶಿಲ್ಪಾ ಗಣಚಾರಿ ಸ್ವಾಗತಿಸಿದರು. ಸಹ ಶಿಕ್ಷಕರಾದ ಜಯಶ್ರೀ ಹಾಗೂ ಅಶೋಕ ಹಲಗೇರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಶಾರದಾ ಕೊರಗಲ ನಿರೂಪಿ ಸಿದರೆ, ಕೊನೆಯಲ್ಲಿ ಸರಸ್ವತಿ ಗೆಜ್ಜಿ ವಂದಿಸಿದರು. 
Please follow and like us:
error