ಪೌರ ಕಾರ್ಮಿಕರ ಧರಣಿ ೫ನೇ ದಿನಕ್ಕೆ

ದಿ  ೦೪-೦೨-೨೦೧೫ ರಂದು ಗಂಗಾವತಿ ನಗರಸಭೆಯವರು ಮುನ್ಸೂಚನೆ ನೀಡದೇ ೪೨ ಜನ ಮಹಿಳಾ ಪೌರ ಕಾರ್ಮಿಕರನ್ನು ಕೆಲಸದಿಂದ ವಜಾಗೊಳಿಸಿರುತ್ತಾರೆ. ನಗರಸಭೆಯಲ್ಲಿ ದುಡಿಯುತ್ತಿರುವ ೧೪೦ ಜನ ಗುತ್ತಿಗೆ ಪೌರ ಕಾರ್ಮಿಕರಿಗೆ ೬ ತಿಂಗಳಿನಿಂದ ವೇತನ ಕೊಡದೇ ಇರುವುದರಿಂದ ಇಂದು ೧೬ ಜನ ವಾಹನ ಚಾಲಕರು ಧರಣಿಯಲ್ಲಿ ಭಾಗಿಯಾಗಿದ್ದಾರೆ. ದಿನಾಂಕ ೧೦-೦೨-೨೦೧೫ ರಿಂದ ೩೩ ಜನ ಶೌಚಾಲಯ ಸ್ವಚ್ಛತಾ ಕಾರ್ಮಿಕರು ಮತ್ತು ಮನೆ ಮನೆ ಕಸ ಸಂಗ್ರಹಿಸುವ ಕಾರ್ಮಿಕರು ಈ ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆಂದು ಕರ್ನಾಟಕ ಸಾಮಾನ್ಯ ಕಾರ್ಮಿಕ ಸಂಘದ ತಾಲೂಕಾಧ್ಯಕ್ಷ ಖಾದರಭಾಷಾ   ತಿಳಿಸಿದ್ದಾರೆ.
      ಕೂಡಲೇ ನಗರಸಭೆ ಅಧಿಕಾರಿಗಳು ಗುತ್ತಿಗೆ ದಿನಗೂಲಿ ಪೌರ ಕಾರ್ಮಿಕರಿಗೆ ಕೊಡಬೇಕಾದ ಬಾಕಿ ವೇತನವನ್ನು ಕೊಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಸತ್ಯಾಗ್ರಹ ಉಗ್ರರೂಪ ತಾಳಿ ಪೂರ್ತಿ ಪ್ರಮಾಣದಲ್ಲಿ ದಿನಗೂಲಿ ಪೌರ ಕಾರ್ಮಿಕರು ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲಿದ್ದಾರೆ. ದಿನಾಂಕ ೧೧ ರ ಒಳಗಾಗಿ ನಗರಸಭೆ ಕಾರ್ಮಿಕರ ಬೇಡಿಕೆಗಳನ್ನು ಈಡೇರಸದಿದ್ದಲ್ಲಿ ದಿನಾಂಕ ೧೨-೦೨-೨೦೧೫ ರಿಂದ ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿಗಳಾದ ಭಾರಧ್ವಾಜ್‌ರವರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಿದ್ದಾರೆ ಎಂದು ಕೆಜಿಎಲ್‌ಯುನ ತಾಲೂಕಾಧ್ಯಕ್ಷರು ತಿಳಿಸಿದ್ದಾರೆ.
Please follow and like us:
error