fbpx

ಕೊಪ್ಪಳ ಜಿಲ್ಲೆಯ ಕಾವಲು ಸಮಿತಿ ರಚನೆ

ಕೊಪ್ಪಳ, ಏ. ೮ : ರಾಯಚೂರಿನಲ್ಲಿ ಮಾ. ೨೬ ರಂದು ಹೈ.ಕ. ಹೋರಾಟ ಸಮಿತಿ ಹಾಗೂ ಗಣ ಸಂಗ್ರಾಮ ಪರಿಷತ್ತಿನ ಸಂಯುಕ್ತ ಆಶ್ರಯದಲ್ಲಿ ವೈಜನಾಥ ಪಾಟೀಲರ ಅಧ್ಯಕ್ಷತೆಯಲ್ಲಿ  ನಡೆದ ಸಭೆಯಲ್ಲಿ ಕರ್ನಾಟಕ ಸರಕಾರದ ಹೈ.ಕಕ್ಕೆ ನೀಡಬೇಕಾದ ಸಂವಿಧಾನದ ೩೭೧ಜೆ ಕಲಮಿನ ಸೌಲಭ್ಯಗಳನ್ನು ನೀಡದೆ ವಂಚಿಸುತ್ತಿರುವುದನ್ನು ಕುರಿತು ಚರ್ಚಿಸಿತು. ಶಿಕ್ಷಣ, ಉದ್ಯೋಗ ಹಾಗೂ ಅಭಿವೃದ್ಧಿ ಕಾರ್ಯಗಳಲ್ಲಿ ನಿರ್ಲಕ್ಷ್ಯ ತೋರುತ್ತಿದೆ. ಇದರಿಂದಾಗಿ ಹೈ. ಕ. ಪ್ರತ್ಯೇಕ ರಾಜ್ಯ ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗುತ್ತಿದೆಯೆಂದು ಸರಕಾರವನ್ನು ಹೋರಾಟ ಸಮಿತಿ ಎಚ್ಚರಿಸಿದೆ. ಹೈ. ಕ. ದ ಎಲ್ಲ ತಾಲೂಕುಗಳಲ್ಲಿ ಕಾವಲು ಸಮಿತಿಯನ್ನು ನೇಮಿಸಲಾಗಿದೆ. 
ಕೊಪ್ಪಳ ಜಿಲ್ಲೆಯ ಕಾವಲು ಸಮಿತಿ ಸದಸ್ಯರ ಪಟ್ಟಿ ಇಂತಿದೆ. ಯಲಬುರ್ಗಾ- ಮುನಿಯಪ್ಪ ಹುಬ್ಬಳ್ಳಿ, ಕನಕಗಿರಿ- ಅಲ್ಲಾಗಿರಿರಾಜ, ಗಂಗಾವತಿ- ಸಿ. ಎಚ್. ನಾರಿನಾಳ, ಕುಷ್ಟಗಿ- ವೀರೇಶ ಬಂಗಾರಶೆಟ್ಟರ ಹಾಗೂ ಕೊಪ್ಪಳ- ಆರ್. ಬಿ. ಪಾನಘಂಟಿ ಇವರುಗಳನ್ನು ಆಯ್ಕೆ ಮಾಡಲಾಗಿದೆ.
ಈ ಸದಸ್ಯರು ತಮ್ಮ ತಾಲೂಕಿನಲ್ಲಿ ಆಗುವ ಅನ್ಯಾಯವನ್ನು ಕೇಂದ್ರ ಹೈ. ಕ. ಹೋರಾಟ ಸಮಿತಿ ಹಾಗೂ ಜನತೆಯ ಗಮನಕ್ಕೆ ತರುತ್ತಾರೆ ಎಂದು ಹೈ. ಕ. ಹೋರಾಟ ಸಮಿತಿ ಜಿಲ್ಲಾಧ್ಯಕ್ಷರಾದ ಎಚ್. ಎಸ್. ಪಾಟೀಲ ಹಾಗೂ ಕಾರ್ಯದರ್ಶಿಗಳಾದ ಅಲ್ಲಮಪ್ರಭು ಬೆಟ್ಟದೂರು ತಿಳಿಸಿದ್ದಾರೆ.
Please follow and like us:
error

Leave a Reply

error: Content is protected !!