೧೫೬ನೇ ಯಶಸ್ವಿ ಕವಿಸಮಯ

ಕೊಪ್ಪಳ : ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ನಗರದ ಈಶ್ವರ ಗುಡಿಯ ಪ್ರಾಂಗಣದಲ್ಲಿ ಹಮ್ಮಿಕೊಂಡಿದ್ದ ೧೫೬ನೇ ಕವಿಸಮಯ ಕಾರ್‍ಯಕ್ರಮ ಯಶಸ್ವಿಯಗಾಗಿ ಜರುಗಿತು. ಈ ವಾರ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ನಂತರ ವಾಚನ ಮಾಡಿದ ಕವನಗಳ ವಿಮರ್ಶೆ, ಚರ್ಚೆ ನಡೆಯಿತು.
 ಕವಿಗೋಷ್ಠಿಯಲ್ಲಿ ವಿಜಯಲಕ್ಷ್ಮೀ ಕೊಟಗಿ-ದಂತಕತೆ, ಪುಷ್ಪಲತಾ ಏಳುಬಾವಿ- ಗೋಡೆ,ವಿಮಲಾ ಇನಾಂದಾರ- ವಾಸ್ತವ, ಶಾಂತಾದೇವಿ ಹಿರೇಮಠ- ನನ್ನ ಅಣ್ಣ, ಮಹೇಶ ಬಳ್ಳಾರಿ- ಕರ್ತೃ ಹನಿಗವನ, ಬಸವರಾಜ ಸಂಕನಗೌಡರ- ಗಜಲ್, ಎಸ್.ಎಂ.ಕಂಬಾಳಿಮಠ- ಸರತಿ ಸಾಲು, ಸಿರಾಜ್ ಬಿಸರಳ್ಳಿ-ರಕ್ಷಣೆ ಕವನಗಳ ವಾಚನ ಮಾಡಿದರು. 
ಈ ಸಂದರ್ಭದಲ್ಲಿ ಶಿವಾನಂದ ಹೊದ್ಲೂರ,ಗಿರಿಜಮ್ಮ ಬುಳ್ಳಾ,ತಿಪ್ಪೇಸ್ವಾಮಿ ಬೋದಾ ಉಪಸ್ಥಿತರಿದ್ದರು.
ಸ್ವಾಗತವನ್ನು ವಿಜಯಲಕ್ಷ್ಮಿ ಕೊಟಗಿ, ವಂದನಾರ್ಪಣೆ-ಬಸವರಾಜ ಸಂಕನಗೌಡರ ಮಾಡಿದರೆ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು. 
Please follow and like us:
error