You are here
Home > Koppal News > ನಾಳೆ ದಿ.೧೮ರಿಂದ ೨೦ರವರೆಗೆ ಪೌರತ್ವ ತರಬೇತಿ ಶಿಬಿರ

ನಾಳೆ ದಿ.೧೮ರಿಂದ ೨೦ರವರೆಗೆ ಪೌರತ್ವ ತರಬೇತಿ ಶಿಬಿರ

ಹೊಸಪೇಟೆ: ವಿಜಯನಗರ ಕಾಲೇಜಿನ ಷಾ ಭವರಲಾ ಬಾಬುಲಾಲ್ ನಹರ್ ಶಿಕ್ಷಣ ಮಹಾವಿದ್ಯಾಲಯವು ಇದೇ ದಿ.೧೮ರಿಂದ ೨೦ರವರೆಗೆ ಕಮಲಾಪುರದ ಹಳ್ಳಿಕೇರಿ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ನಿಲಯದಲ್ಲಿ ಪೌರತ್ವ ತರಬೇತಿ ಶಿಬಿರ ನಡೆಸಲಿದೆ.
ದಿ.೧೮ರಂದು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಜಾಲಿ ಪ್ರಕಾಶ್ ಈ ಶಿಬಿರ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಪ್ರೇಮನಾಥ ಗಟ್ಟಿನ, ಎನ್. ಮಲ್ಲಿಕಾರ್ಜುನ, ಹಳ್ಳಿಕೇರಿ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ನಿಲಯದ ಮೇಲ್ವೇಚಾರಕಿ ಶ್ರೇತಾ ಕುಮಾರಿ ಇದ್ದಲಗಿ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಿಬಿರದ ನಿರ್ದೇಶಕ ಪ್ರೊ. ವಿ.ಎಂ. ರಾಜಶೇಖರ ವಹಿಸಲಿದ್ದಾರೆಂದು ಶಿಬಿರದ ಸಂಯೋಜಕ ಡಾ.ಟಿ.ಎಂ. ಪ್ರಶಾಂತ ಕುಮಾರ್ ತಿಳಿಸಿದ್ದಾರೆ. 

Leave a Reply

Top