ಡಿ.ಇಡಿ ಮತ್ತು ಡಿಪಿಇಡಿ ಕೋರ್ಸ್ : ದಾಖಲಾತಿಗೆ ಜು. ೨೫ ಕೊನೆಯ ದಿನ

  ಪ್ರಸಕ್ತ ಸಾಲಿಗೆ ಡಿ.ಇಡಿ ಮತ್ತು ಡಿ.ಪಿಇಡಿ ಕೋರ್ಸ್‌ಗಳಿಗೆ ಡಯಟ್, ಕೊಪ್ಪಳ ನೋಡಲ್ ಕೇಂದ್ರಕ್ಕೆ (ಎನ್.೩೨) ಸಂಬಂಧಿಸಿದಂತೆ ಆಯ್ಕೆಯಾದ ಅಭ್ಯರ್ಥಿಗಳು ದಾಖಲಾತಿ ಮಾಡಿಕೊಳ್ಳಲು ಜು. ೨೫ ಕೊನೆಯ ದಿನವಾಗಿರುತ್ತದೆ.
  ಈಗಾಗಲೆ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿ ಹಾಗೂ ದಾಖಲಾತಿ ಪ್ರಕ್ರಿಯೆಯ ಮಾಹಿತಿಯನ್ನು ಸರಕಾರಿ ಶಿಕ್ಷಕರ ತರಬೇತಿ ಸಂಸ್ಥೆ ಕೊಪ್ಪಳ (ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು ಕೊಪ್ಪಳ ಆವರಣ) ಇಲ್ಲಿ ಪ್ರಕಟಿಸಲಾಗಿದೆ.  ದಾಖಲಾತಿಗೆ ಜು. ೨೭ ಕೊನೆಯ ದಿನ ಎಂದು ಮಾಧ್ಯಮಗಳಲ್ಲಿ ತಪ್ಪಾಗಿ ಪ್ರಕಟಗೊಂಡಿದ್ದು, ಆದರೆ ದಾಖಲಾತಿಗೆ ಜು. ೨೫ ಕೊನೆಯ ದಿನವಾಗಿರುತ್ತದೆ.  ಅಭ್ಯರ್ಥಿಗಳು ಈ ಕುರಿತು ಗಮನಿಸಬೇಕು. ಮತ್ತು ಹೆಚ್ಚಿನ ವಿವರಗಳನ್ನು  ಜಿಲ್ಲಾ ನೋಡಲ್ ಅಧಿಕಾರಿಗಳು ಪಿಎಸ್‌ಟಿಇ ವಿಭಾಗ, ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆ, ಕೊಪ್ಪಳ, ಮೊಬೈಲ್ ಸಂಖ್ಯೆ ೯೮೮೦೭೪೦೫೫೮ ಇವರನ್ನು ಸಂಪರ್ಕಿಸಬಹುದಾಗಿದೆ .
Please follow and like us:
error