ಅಲ್ಪಸಂಖ್ಯಾತರಿಗೆ ವಿವಿಧ ತರಬೇತಿ ಅರ್ಜಿ ಆಹ್ವಾನ.

ಕೊಪ್ಪಳ, ಅ.೧೫ (ಕ ವಾ) ಕೊಪ್ಪಳ ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ಬಹುವಲಯವಾರು ಅಭಿವೃದ್ಧಿ ಯೋಜನೆಯಡಿ ಎಮ್‌ಎಸ್‌ಡಿಪಿ ಅಲ್ಪಸಂಖ್ಯಾತರಿಗೆ ವಿವಿಧ ತರಬೇತಿ ನೀಡಲಾಗುತ್ತಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
     ತರಬೇತಿ ಯೋಜನೆಯಡಿ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬುದ್ಧ ಮತ್ತು ಪಾರ್ಸಿ ಜನಾಂಗದ ಯುವಕ ಯುವತಿಯರಿಗೆ ಉದ್ಯೋಗಾವಕಾಶ ಅಥವಾ ಸ್ವಯಂ ಉದ್ಯೋಗಗಳನ್ನು ಕಲ್ಪಿಸುವಂತಹ ಹಾಗೂ ಸ್ಥಳೀಯ ಕಲೆ ಮತ್ತು ಕೌಶಲ್ಯತೆ ಹೊಂದುವ ತರಬೇತಿಗಳನ್ನು ಎಮ್/ಎಸ್ ಎಸಿಸಿಪಿಎಲ್ ಸಂಸ್ಥೆ ವತಿಯಿಂದ ನೀಡಲಾಗುವುದು. ಅರ್ಜಿ ಸಲ್ಲಿಸಲಿಚ್ಛಿಸುವವರು ಜಿಲ್ಲೆಯ ಕೊಪ್ಪಳ ಹಾಗೂ ಗಂಗಾವತಿ ತಾಲೂಕುಗಳಲ್ಲಿ ವಾಸಿಸುತ್ತಿರಬೇಕು. ೧೮ ರಿಂದ ೩೫ ವರ್ಷದೊಳಗಿನ ವಯೋಮಿತಿ ಹೊಂದಿರಬೇಕು. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಬಗ್ಗೆ ತಹಶೀಲ್ದಾರರಿಂದ ಪಡೆದ, ವಾರ್ಷಿಕ ರೂ.೨ ಲಕ್ಷ ಆದಾಯ ಮಿತಿಯೊಳಗಿರುವ ಜಾತಿ, ಆದಾಯ ಪ್ರಮಾಣ ಪತ್ರದ ಧೃಢೀಕೃತ ಪ್ರತಿ ಹೊಂದಿರಬೇಕು.
ಬಹುವಲಯವಾರು ಅಭಿವೃದ್ಧಿ ಯೋಜನೆಯಡಿ ನೀಡಲಾಗುವ ತರಬೇತಿಗಳ ವಿವರ.
ಕಂಪ್ಯೂಟರ್ ಫಂಡಮೆಂಟಲ್ ಎಮ್‌ಎಸ್ ಆಫೀಸ್ ಆಂಡ್ ಇಂಟರ್‌ನೆಟ್ ಆಂಡ್ ಟ್ಯಾಲಿ ವಿದ್ಯಾರ್ಹತೆ : ೧೦ನೇ ತರಗತಿ ಅಥವಾ ಐಟಿಐ ಉತ್ತೀರ್ಣ ಅಥವಾ ಅನುತ್ತೀರ್ಣ, ತರಬೇತಿ ಅವಧಿ ೩೦೦ ಗಂಟೆಗಳು. ಬ್ಯುಟಿಷಿಯನ್ ಟ್ರೇನಿಂಗ್, ವಿದ್ಯಾರ್ಹತೆ : ೮ನೇ ತರಗತಿ ಉತ್ತೀರ್ಣ, ಅವಧಿ :೧೫೦ ಗಂಟೆಗಳು. ಕಂಪ್ಯೂಟರ್ ಹಾರ್ಡ್‌ವೇರ್ ಆಂಡ್ ಕಂಪ್ಯೂಟರ್ ನೆಟ್‌ವರ್ಕಿಂಗ್, ವಿದ್ಯಾರ್ಹತೆ : ೧೦ನೇ ತರಗತಿ ಅಥವಾ ಐಟಿಐ ಉತ್ತೀರ್ಣ ಅಥವಾ ಅನುತ್ತೀರ್ಣ, ತರಬೇತಿ ಅವಧಿ ೩೦೦ ಗಂಟೆಗಳು. ರಿಟೇಲ್ ಆಪರೇಷನ್ ಆಂಡ್ ಟ್ಯಾಲಿ, ವಿದ್ಯಾರ್ಹತೆ : ೧೦ನೇ ತರಗತಿ ಅಥವಾ ಐಟಿಐ ಉತ್ತೀರ್ಣ ಅಥವಾ ಅನುತ್ತೀರ್ಣ, ತರಬೇತಿ ಅವಧಿ ೩೬೦ ಗಂಟೆಗಳು. ಹಾಸ್ಪಿಟಾಲಿಟಿ ಅಸಿಸ್ಟಂಟ್ ಆಂಡ್ ರಿಟೇಲ್ ಆಪರೇಷನ್. ವಿದ್ಯಾರ್ಹತೆ : ೧೦ನೇ ತರಗತಿ ಅಥವಾ ಐಟಿಐ ಉತ್ತೀರ್ಣ ಅಥವಾ ಅನುತ್ತೀರ್ಣ, ತರಬೇತಿ ಅವಧಿ ೩೬೦ ಗಂಟೆಗಳು. ಅಸಿಸ್ಟಂಟ್ ಫೈರ್ ಆಪರೇಟರ್. ವಿದ್ಯಾರ್ಹತೆ : ೧೦ನೇ ತರಗತಿ ಅಥವಾ ಐಟಿಐ ಉತ್ತೀರ್ಣ ಅಥವಾ ಅನುತ್ತೀರ್ಣ, ತರಬೇತಿ ಅವಧಿ ೩೦೦ ಗಂಟೆಗಳು. ಬೇಸಿಕ್ ಆಫ್ ಸೋಲಾರ್ ಇಲೆಕ್ಟ್ರಿಸಿಟಿ ಆಂಡ್ ಸೋಲಾರ್ ಹಾಟ್ ವಾಟರ್ ಟೆಕ್ನಿಷಿಯನ್, ವಿದ್ಯಾರ್ಹತೆ : ೧೦ನೇ ತರಗತಿ ಉತ್ತೀರ್ಣ ಅಥವಾ ಅನುತ್ತೀರ್ಣ, ತರಬೇತಿ ಅವಧಿ ೩೬೦ ಗಂಟೆಗಳು.
     ಆಸಕ್ತರು ಅರ್ಜಿ ನಮೂನೆಯನ್ನು ತರಬೇತಿ ನೀಡುವ ಸಂಸ್ಥೆಗಳಾದ ಅರಿಹಂತ ಕಂಪ್ಯೂಟರ್‍ಸ್, ಕೊಪ್ಪಳ, ಎಸ್.ಎಸ್. ಎಜ್ಯುಕೇಶನ್ ಸೊಸೈಟಿ, ಕೊಪ್ಪಳ, ಹುಮಾ ಹ್ಯೂಮನ್ ಮೈನಾರಿಟೀಸ್ ಆರ್.ಡಿ ಸೊಸೈಟಿ, ಗಂಗಾವತಿ, ಎನ್-ಟೆಕ್ ಕಂಪ್ಯೂಟರ್ ಎಜ್ಯುಕೇಶನ್ ಸೆಂಟರ್, ಗಂಗಾವತಿ, ಕ್ರಿಯೇಟಿವ್ ವಿನ್ಸ್ ಸಾಫ್ಟ್‌ವೇರ್ ಸಲ್ಯೂಷನ್, ಭಾಗ್ಯನಗರ, ಕೊಪ್ಪಳ ಇವರಿಂದ ಪಡೆದು, ಭರ್ತಿ ಮಾಡಿ, ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅ.೨೦ ರೊಳಗಾಗಿ ಸಲ್ಲಿಸಬಹುದಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕೊಪ್ಪಳ ಇವರನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಕಲ್ಲೇಶ ತಿಳಿಸಿದ್ದಾರೆ.
ಎಸ್.ಡಿ.ಎ ಸ್ಪರ್ಧಾತ್ಮಕ ಪರೀಕ್ಷೆ ನಿಷೇದಾಜ್ಞೆ ಜಾರಿ.
ಕೊಪ್ಪಳ, ಅ.೧೫ (ಕ ವಾ)ಎಸ್.ಡಿ.ಎ ಹುದ್ದೆಗಳ ನೇಮಕಾತಿಗಾಗಿ ಕೊಪ್ಪಳ ಜಿಲ್ಲೆಯ ೬೧ ಪರೀಕ್ಷಾ ಕೇಂದ್ರಗಳಲ್ಲಿ ಅ.೧೮ ರಂದು ನಡೆಯಲಿರುವ ಎಸ್.ಡಿ.ಎ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಗಮ ಹಾಗೂ ಶಾಂತಿಯುತವಾಗಿ ನಡೆಸುವ ಉದ್ದೇಶದಿಂದ ಪರೀಕ್ಷಾ ಕೇಂದ್ರಗಳ ಸುತ್ತಲೂ ನಿಷೇಧಾಜ್ಞೆ ಜಾರಿಗೊಳಿಸಿ, ಪ್ರಭಾರ ಜಿಲ್ಲಾಧಿಕಾರಿ ಡಾ: ಪ್ರವೀಣಕುಮಾರ್ ಜಿ.ಎಲ್ ಅವರು ಆದೇಶ ಹೊರಡಿಸಿದ್ದಾರೆ.   
     ಎಸ್.ಡಿ.ಎ ಸ್ಪರ್ಧಾತ್ಮಕ ಪರೀಕ್ಷೆಗಳು ಕೊಪ್ಪಳದ ಸರ್ದಾರ ವಲ್ಲಭಬಾಯಿ ಪಟೇಲ್ ಹಿಂದಿ ಬಿ.ಇಡಿ ಕಾಲೇಜು, ಮಿಲೇನಿಯಂ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜಮೆಂಟ್, ಕಾಳಿದಾಸ ಪ್ರೌಢ ಶಾಲೆ, ಶ್ರೀಮತಿ ಬಸಮ್ಮ ಕಾತರಕಿ ಪದವಿ ಪೂರ್ವ ಕಾಲೇಜು, ಗುಳಗಣ್ಣನವರ ಪಾಲಿಟೆಕ್ನಿಕ್ ಕಾಲೇಜು, ಎಸ್.ಎಫ್.ಎಸ್ ಪ್ರೌಢ ಶಾಲೆ, ಕುವೆಂಪು ಪ್ರಾಥಮಿಕ ಶಾಲೆ, ಕುವೆಂಪು ಕನ್ನಡ ಪ್ರೌಢ ಶಾಲೆ, ಶ್ರೀಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯ, ಶ್ರೀಶಿವಶಾಂತವೀರ ಪಬ್ಲಿಕ್ ಸ್ಕೂಲ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶ್ರೀಗವಿಸಿದ್ಧೇಶ್ವರ ಪದವಿ ಪೂರ್ವ ಕಾಲೇಜು, ಎಸ್.ಜಿ.ವಿ.ವಿ.ಟಿ ಶ್ರೀಗವಿಸಿದ್ಧೇಶ್ವರ ಪದವಿ ಕಾಲೇಜು, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಶ್ರೀಗವಿಸಿದ್ಧೇಶ್ವರ ಸಂಯುಕ್ತ ಪ್ರೌಢ ಶಾಲೆ, ನಿವೇದಿತಾ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಭಾಗ್ಯನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು, ನ್ಯಾಷನಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಹಾಗೂ ಗಂಗಾವತಿಯ ಬೇಥಲ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಲಿಟ್ಲ್ ಹಾರ್ಟ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಶ್ರೀಕೊಟ್ಟೂರೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು, ಲಯನ್ಸ್ ಪ್ರೌಢ ಶಾಲೆ, ಶ್ರೀಮತಿ ಎಂ.ಎನ್.ಎಂ ಬಾಲಕಿಯರ ಪದವಿ ಪೂರ್ವ ಕಾಲೇಜು, ಜನತಾ ಸೇವಾ ಕನ್ನಡ ಮಾಧ್ಯಮ ಶಾಲೆ, ಸರ್ಕಾರಿ ಪ್ರೌಢ ಶಾಲೆ, ಹಿರೇಜಂತಕಲ್, ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು, ಕಾರಟಗಿ, ಹೆಚ್.ಆರ್.ಸರೋಜಮ್ಮ ಸಂಯುಕ್ತ ಪದವಿ ಪೂರ್ವ ಕಾಲೇಜು, ವಿಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಕಾರಟಗಿ, ಸೇಂಟ್ ಪಾಲ್ಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಶ್ರೀಮತಿ ಮಾಂತಗೊಂಡ ನೀಲಮ್ಮ ಮೂಕಪ್ಪ ಪ್ರೌಢಶಾಲೆ, ಗೊಟ್ಟಿಪಾಟಿ ವೆಂಕಟರತ್ನಂ ಪ್ರೌಢ ಶಾಲೆ, ಕೆಂದೂಳಿ ರಾಮಣ್ಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ವಡ್ಡರಹಟ್ಟಿ, ಮಲ್ಲಿಕಾರ್ಜುನ ನಾಗಪ್ಪ ಸಂಯುಕ್ತ ಪದವಿ ಪೂರ್ವ ಕಾಲೇಜು, ಕಾರಟಗಿ, ವಿವೇಕಭಾರತಿ ಅನುದಾನಿತ ಪ್ರೌಢ ಶಾಲೆ, ಸರ್ಕಾರಿ ಪ್ರೌಢ ಶಾಲೆ, ಇಸ್ಲಾಂಪುರ ಕೇಂದ್ರಗಳಲ್ಲಿ ನಡೆಯಲಿವೆ.
      ಕುಷ್ಟಗಿಯ ಕ್ರೈಸ್ತ ದಿ ಕಿಂಗ್ ಸ್ಕೂಲ್, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ವಿಜಯಚಂದ್ರಶೇಖರ ಪ್ರೌಢ ಶಾಲೆ, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು, ಆದರ್ಶ ವಿದ್ಯಾಲಯ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಯಲಬುರ್ಗಾದ ಜ್ಞಾನ ವಾಹಿನಿ ಪ್ರೌಢ ಶಾಲೆ, ಶ್ರೀ ಸಿದ್ಧರಾಮೇಶ್ವರ ಪ್ರೌಢ ಶಾಲೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶ್ರೀಮಂಜುನಾಥ ಪದವಿ ಪೂರ್ವ ಕಾಲೇಜು, ಎಸ್.ಎ.ನಿಂಗೋಜಿ ಬಿಇಡಿ ಕಾಲೇಜು, ಗುಡ್ ಶೇಪರ್ಡ್ ಶಾಲೆ, ಎಸ್.ಎಫ್.ಎಸ್ ಶಾಲೆ ಕುಕನೂರ, ಸರ್ಕಾರಿ ಪ್ರೌಢ ಶಾಲೆ, ಕುಕನೂರು, ಶ್ರೀಗವಿಸಿದ್ಧೇಶ್ವರ ಪ್ರೌಢ ಶಾಲೆ, ಕುಕನೂರು, ವಿದ್ಯಾಶ್ರೀ ಇಂಗ್ಲೀಷ್ ಮಾಧ್ಯಮ ಶಾಲೆ, ಕುಕನೂರು ಸೇರಿದಂತೆ ಜಿಲ್ಲೆಯ ಒಟ್ಟು ೬೧ ಪರೀಕ್ಷಾ ಕೇಂದ್ರಗಳಲ್ಲಿ ಅ.೧೮ ರಂದು ಎಸ್.ಡಿ.ಎ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷೆಗಳು ಸುಗಮ ಹಾಗೂ ಶಾಂತಿಯುತವಾಗಿ ನಡೆಯಲು ಅನುವಾಗುವಂತೆ ಈ ಮೇಲೆ ತಿಳಿಸಿದ ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತಲೂ ಅಂದು ಬೆಳಿಗ್ಗೆ ೦೯ ಗಂಟೆಯಿಂದ ಸಂಜೆ ೦೫.೩೦ ಗಂಟೆಯವರೆಗೆ ೨೦೦ ಮೀಟರ್ ವ್ಯಾಪ್ತಿಯಲ್ಲಿ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆ ೧೯೮೩ ರ ಕಲಂ ೧೪೪ ರನ್ವಯ ನಿಷೇದಾಜ್ಞೆಯನ್ನು ಜಾರಿಗೊಳಿಸಲಾಗಿದೆ.
     ನಿಷೇಧಾಜ್ಞೆಯನ್ವಯ ಪರೀಕ್ಷಾ ಕೇಂದ್ರಗಳ ಸುತ್ತಲೂ ೨೦೦ ಮೀ. ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಎಸ್.ಟಿ.ಡಿ., ಮೊಬೈಲ್, ಝರಾಕ್ಸ್, ಟೈಪಿಂಗ್ ಹಾಗೂ ಜನರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು ನಿಷೇಧಿಸಲಾಗಿದೆ. ಅಲ್ಲದೇ ನಕಲು ಮಾಡುವ ಸಾಮಗ್ರಿಗಳನ್ನು ಹಾಗೂ ಹೊರಗಿನಿಂದ ನಕಲು ಬರೆದು ಪರೀಕ್ಷಾ ಕೇಂದ್ರಗಳಿಗೆ ಪೂರೈಸುವುದನ್ನು ನಿರ್ಭಂಧಿಸಲಾಗಿದೆ. ಈ ಆದೇಶವು ಮದುವೆ, ಶವ ಸಂಸ್ಕಾರ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳಿಗೆ ಅನ್ವಯವಾಗುವುದಿಲ್ಲ ಎಂದು ಪ್ರಭಾರ ಜಿಲ್ಲಾಧಿಕಾರಿ ಪ್ರವೀಣಕುಮಾರ್ ಜಿ.ಎಲ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಕೊಪ್ಪಳ ಅ.೧೬ ರಂದು ಕ್ರೀಡಾಕೂಟದ ಉದ್ಘಾಟನಾ ಸಮಾರಂಭ.
ಕೊಪ್ಪಳ, ಅ.೧೫ (ಕ ವಾ)  ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಭಾರತೀಯ ಕ್ರೀಡಾ ಪ್ರಾಧಿಕಾರ ಹಾಗೂ ಕರ್ನಾಟಕ ಕ್ರೀಡಾ ಪ್ರಾಧಿಕಾರ ದೈಹಿಕ ಶಿಕ್ಷಕರ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಕೊಪ್ಪಳ ತಾಲೂಕು ಮಟ್ಟದ ರಾಜೀವ್‌ಗಾಂಧಿ ಖೇಲ್ ಅಭಿಯಾನ ಮತ್ತು ದಸರಾ ದಸರಾ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವನ್ನು ಅ.೧೬ ರಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ.
     ಶಾಸಕ ರಾಘವೇಂದ್ರ ಹಿಟ್ನಾಳ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಸದ ಸಂಗಣ್ಣ ಕರಡಿ ಕ್ರೀಡಾ ಧ್ವಜಾರೋಹಣ ನೆರವೇರಿಸಲಿದ್ದು, ತಾಲೂಕಾ ಪಂಚಾಯತ್ ಅಧ್ಯಕ್ಷೆ ಬಾನು ಚಂದುಸಾಬ ಅಧ್ಯಕ್ಷತೆ ವಹಿಸಲಿದ್ದಾರೆ. ತಾಲೂಕಾ ಪಂಚಾಯತ್ ಉಪಾಧ್ಯಕ್ಷ ಬಾಳಪ್ಪ ಬೂದಗುಂಪಿ, ನಗರಸಭಾ ಅಧ್ಯಕ್ಷೆ ಬಸಮ್ಮ ಹಳ್ಳಿಗುಡಿ, ಉಪಾಧ್ಯಕ್ಷ ಬಾಳಪ್ಪ ಬಾರಕೇರ, ಜಿಲ್ಲಾ ಪಂಚಾಯತ್ ಸದಸ್ಯ ಟಿ.ಜನಾರ್ಧನ ಹುಲಿಗಿ, ಡಾ||ಸೀತಾ ಗೂಳಪ್ಪ ಹಲಗೇರಿ, ನಾಗನಗೌಡ ಮಾಲಿಪಾಟೀಲ್, ಕಸ್ತೂರೆಮ್ಮ ಬಿ.ಪಾಟೀಲ್, ಭಾಗೀರಥಿ ಪಾಟೀಲ, ವನಿತಾ ಗಡಾದ, ಕೆ.ರಮೇಶ ಹಿಟ್ನಾಳ, ಕೆ.ಎಮ್.ಎಫ್ ಅಧ್ಯಕ್ಷ ವೆಂಕನಗೌಡ ಹಿರೇಗೌಡ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಪೂಜಾರ, ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ವೈ.ಸುದರ್ಶನರಾವ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮನ್ನವರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದೆ.

Please follow and like us:
error