ಆಟೋ ರಾಜಾ ಚಿತ್ರ ವಿಮರ್ಶೆ

“ಆಟೋ” ಮ್ಯಾಟಿಕ್ ಮಿಕ್ಚರ್, ಈ ಪಿಕ್ಚರ್.
      ಆಟೋ ಹೆಸರು ಅಂಟಿಸಿಕೊಂಡು ಬಂದ ಅಷ್ಟು ಸಿನಿಮಾಗಳಲ್ಲಿ ಶಂಕರಣ್ಣ ಕಾಣಿಸ್ಲೇಬೇಕು. ಯಾಕಂದ್ರೆ, ಕನ್ನಡ ಚಿತ್ರರಂಗದಲ್ಲಿ ಆಟೋ ಅಂದಾಕ್ಷಣ ನೆನಪಾಗೋದು ಶಂಕರ್‌ನಾಗ್ ಮಾತ್ರ. ಹಾಗಾಗಿಯೇ ಈಚೆಗಿನ ಆಟೋ ಸಿನಿಮಾಗಳಲ್ಲಿ ಶಂಕರಣ್ಣ ಇದ್ದೇ ಇರ್‍ತಾರೆ. ಈಚೆಗೆ ಬಿಡುಗಡೆಯಾದ ದರ್ಶನ್ ಅಭಿನಯದ ಸಾರಥಿ, ಉಪೇಂದ್ರ ನಟಿಸಿರುವ ಆಟೋ ಶಂಕರ, ಸುದೀಪ ಅವರ ರಂಗ ಎಸ್.ಎಸ್.ಎಲ್.ಸಿ, ಹೀಗೆ…
       ಈ ವಾರ ತೆರೆ ಕಂಡಿರುವ ಆಟೋ ರಾಜಾ ಎಲ್ಲ ಆಟೋ ಚಿತ್ರಗಳಿಗಿಂತ ಭಿನ್ನವಾಗಿ ಏನಿಲ್ಲ. ಅದೇ ಲವ್ ಸ್ಟೋರಿ, ಈ ಸಿನಿಮಾ ಕನ್ನಡದ ಹಲವು ಆಟೋ ಸಿನಿಮಾಗಳ ನೆರಳಿನಡಿ ಎದ್ದು ಬಂದಂತೆ ತೋರುತ್ತದೆ. ದೀಪಾ ಕಾಮಯ್ಯನವರ ಎದುರು ರೋಪ್ ಹಾಕುವ ದೃಶ್ಯ ಆಟೋ ಶಂಕರ್ ಚಿತ್ರದಲ್ಲಿ ಉಪೇಂದ್ರ ಶಿಲ್ಪಾ ಶೆಟ್ಟಿ ಸೊಕ್ಕು ಮುರಿಯುವ ದೃಶ್ಯವನ್ನು ನೆನಪಿಸುತ್ತದೆ. ಎಫ್.ಎಂ.ಸ್ಟೇಶನ್‌ನಲ್ಲಿ ಆರ್.ಜೆ..ಯಾಗಿ ಹಲವರ ಕಷ್ಟಕಾರ್ಪಣ್ಯಗಳನ್ನು ಹೋಗಲಾಡಿಸಿ ಬದುಕಲ್ಲಿ ಭರವಸೆಯ ಬೆಳಕು ಮೂಡಿಸುವಾತ ಯಾರಿಗೂ ಗೊತ್ತಾಗದಂತೆ ಗೌಪ್ಯ ಕಾಪಾಡುವುದು ಸಾಹಸಸಿಂಹ ವಿಷ್ಣುವರ್ಧನ್ ಅವರ ಕೋಟಿಗೊಬ್ಬ ಕಥೆಯನ್ನು ನೆನಪಿಸುತ್ತದೆ.
      ಒಟ್ಟಾರೆ ಇಡೀ ಸಿನಿಮಾದ ಕಥೆ ರವಿಚಂದ್ರನ್ ಅವರ ಯಾರೇ ನೀನು ಚೆಲುವೆಯ ಪಡಿಯಚ್ಚಿನಲ್ಲಿ ಆದ್ದಿ ತೆಗೆದಂತಿದೆ. ಅಲ್ಲಿ ಫೋನ್ ಇನ್ ಲವ್, ಇಲ್ಲಿ ಎಫ್.ಎಂ. ಇನ್ ಲವ್. ಅಲ್ಲೂ ಮಹಿಳಾ ಬಾಸ್ ನಾಯಕನನ್ನು ಪ್ರೀತಿಸುತ್ತಿದ್ದಳು. ಇಲ್ಲೂ ಆದೇ. ಆದರೆ ಅಲ್ಲಲ್ಲಿ ಬದಲಾಯಿಸಿ ಆನುಮಾನ ಬರದ ಹಾಗೆ ಸಿನಿಮಾವನ್ನು ಇಂಟ್ರಡ್ಯೂಸ್ ಮಾಡಿರುವುದು ಫೆಂಟಾಸ್ಟಿಕ್ ಎನಿಸುತ್ತದೆ.
       ಬ್ಲೂ ಫಿಲಂ ಜಾಲ, ವಿಕೃತ್ಯ ಕೃತ್ಯಗಳ ಮೂಲಕ ಕೊಲೆ ಮಾಡುವ ಹಂತಕರ ಶೇಡ್ ಚಿತ್ರದಲ್ಲಿ ಆಷ್ಟಿಲ್ಲದಿರುವುದು ಸಮಾಧಾನದ ಸಂಗತಿಯಾದರೂ ಕಥೆಯ ಓಟಕ್ಕೆ ಧಕ್ಕೆ ತಂದಿರುವುದು ಅದೇ. ಇಡೀ ಸಿನಿಮಾದಲ್ಲಿ ಒಂದೇ ಫೈಟ್ ಇರುವುದು ಗಣಿ ಆಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ೫ ಹಾಡುಗಳು ಕೇಳುವಂತಿದ್ದು ಆರ್ಜುರ್ನ ಜನ್ಯಗೆ ಫುಲ್ ಮಾರ್ಕ್ಸ್ ಕೊಡಬಹುದು. 
       ಒಮ್ಮೆ ಹಿಸ್ಟರಿ ತೆಗೆದು ನೋಡಿ ಮಾತಲ್ಲೇ ಮಳೆ ಬರಿಸಿದ್ದು ಯಾರೂ ಅಂತ ಗೊತ್ತಾಗುತ್ತೆ, ಹುಡುಗ ಕೆಟ್ರೆ ಆವನಷ್ಟೆ ಹಾಳಾಗ್ತಾನೆ, ಹುಡಗಿ ಕೆಟ್ರೆ ಇಡಿಈ ದೇಶಾನೆ ಹಾಳಾಗುತ್ತೆ ಎನ್ನುವಂಥ ಡೈಲಾಗ್‌ಗಳು ಖುಷಿ ಕೊಡುತ್ತವೆ. ಹಳ್ಳಿ ಹುಡುಗಿಯಾಗಿ ನಂತರ ಸಿನಿಮಾದ ನಾಯಕಿಯಾಗಿ ಭಾಮಾ ಇಷ್ಟವಾಗ್ತಾರೆ. ಸಾಧುಕೋಕಿಲಾ, ಕುರಿಪ್ರತಾಪ ಕಾಮಿಡಿ ಬೇಕಿತ್ತಾ ಎನಿಸುತ್ತದೆ. ಮಂಜುನಾಥ ನಾಯಕ್ ಛಾಯಾಗ್ರಹಣ ಚೆನ್ನಾಗಿದೆ. ಆರುಣ್ ಸಾಗರ್, ಬಿರಾದಾರ್, ಪಲ್ಲಕ್ಕಿ ರಾಧಾಕೃಷ್ಣ ಪುಟ್ಟ ಪಾತ್ರಗಳಲ್ಲೇ ಗಮನ ಸೆಳೆಯುತ್ತಾರೆ.
       ಮುಂಗಾರು ಮಳೆ, ಚೆಲುವಿನ ಚಿತ್ತಾರ ಕ್ಲ್ಯೆಮ್ಯಾಕ್ಸ್ ನೋಡಿ ಹೊರಬಂದಾಗ ಯಾವ ಫೀಲ್ ಇತ್ತೋ ಅದೇ ಫೀಲ್ ಇರಲಿ ಎನ್ನುವ ಕಾರಣಕ್ಕೆ ಆಟೋ ರಾಜಾ ಸಿನಿಮಾದ “ಅಂತ್ಯ” ಆದೇ ಥರ ಅದರೆ ಕೊಂಚ ಭಿನ್ನವಾಗಿದೆ. ಇಷ್ಟವಾಗುವವರು ನೋಡಬಹುದು. 
-ಚಿತ್ರಪ್ರಿಯ ಸಂಭ್ರಮ್.
————
ಫಲಿತಾಂಶ : ೧೦೦/೫೦
Please follow and like us:
error