ಕಿನ್ನಾಳ ಗ್ರಾಮದಲ್ಲಿ ಟಿಪ್ಪುಸುಲ್ತಾನ ಜಯಂತಿ ಉತ್ಸವ ಆಚರಣೆ

ಕೊಪ್ಪಳ : ಕಿನ್ನಾಳ ಗ್ರಾಮದಲ್ಲಿ ಟಿಪ್ಪುಸುಲ್ತಾನ ಜಯಂತಿ ಉತ್ಸವದ ಅಂಗವಾಗಿ ಮುದ್ಲಾಪುರಕ್ಕೆ ಹೊಗುವ ರಸ್ತೆಯಲ್ಲಿ ಗ್ರಾಮದ ಹಿರಿಯರು ಹಾಗೂ ಪಂಚಾಯತಿಯ ತಿರ್ಮಾನದೊಂದಿಗೆ ವೃತ್ತವನ್ನು ಉದ್ಘಾಟನೆಯನ್ನು ಮಾಡುವುದರ ಮೂಲಕ ಟಿಪ್ಪುಸುಲ್ತಾನ ಜಯಂತಿಯನ್ನು ಆಚರಿಸಲಾಯಿತು. ಗ್ರಾಮದ ಹಿರಿಯರು ಹಾಗೂ ಗ್ರಾ.ಪಂ ಸದಸ್ಯ   ಶೇಖರಪ್ಪ ಉದ್ದಾರ ಹಾಗೂ ಅಧ್ಯಕ್ಷ ವಿರಭದ್ರಪ್ಪ ಗಂಜಿ ವೃತ್ತವನ್ನು ಉದ್ಘಾಟಿಸಿದರು.
ಗ್ರಾ.ಪಂ ಸದಸ್ಯರಾದ ಮಾಬುಸಾಬ್ ಹಿರಾಳ, ಭಾಷಾ ಹಿರೇಮನಿ, ಕರಿಯಪ್ಪ ಮಾಲವಿ, ಹಂಪ್ಪಮ್ಮ ಎಲಿಗಾರ, ವಿರೇಶ ತಾವರಗೇರಾ, ಬಸವರಾಜ ಚಿಲವಾಡಗಿ, ಹಾಗೂ ಕಮೀಟಿಯ ಜಿಲ್ಲಾ ಘಟಕದ ಅಧ್ಯಕ್ಷರಾದ ಎಮ್.ಡಿ. ಜಿಲಾನ್ ಮೈಲೈಕ, ಫಿರಸಾಬ್ ಬೆಳಗಟ್ಟಿ ಪಾಲ್ಗೊಂಡಿದ್ದರು ಗ್ರಾಮದ ಕಮೀಟಿಯ ಅಧ್ಯಕ್ಷರಾದ ಸುಭಾನಸಾಬ್ ಹಿರಾಳ, ಮೈಬು ಬಾದಮಿ, ದಾದಾಪೀರ, ನಭಿ ಗುಡೇಕಲ್, ಮರ್ದಾನಸಾಬ್ ಕಂದಕೂರು ಇನ್ನಿತರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. 

Leave a Reply