ಬಾಲ್ ಬ್ಯಾಡ್ಮಿಂಟನ್ ಹೊಸಬಂಡಿ ಹರ್ಲಾಪುರ ಚಾಂಪಿಯನ್.

ಸರಕಾರಿ ಪ್ರಥಮ ದರ್ಜೆ ಕಾಲೇಜು ಹೊಸಬಂಡಿ ಹರ್ಲಾಪುರ ಕೊಪ್ಪಳ ತಾಲೂಕು ಇಲ್ಲಿ ನಡೆದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವ ವಿದ್ಯಾಲಯ ಬಳ್ಳಾರಿಯ ಏಕವಲಯ ಅಂತರ್ ಮಹಾವಿದ್ಯಾಲಯಗಳ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟದಲ್ಲಿ ಮಹಾವಿದ್ಯಾಲಯದ ತಂಡದ ಕ್ರೀಡಾಪಟುಗಳು ಉತ್ತಮ ಸಾದನೆಯನ್ನು ಮಾಡಿದ್ದಾರೆ.
ಪುರುಷರ ವಿಭಾಗದಲ್ಲಿ ನಮ್ಮ ಮಹಾವಿದ್ಯಾಲಯದ ತಂಡವು ಅಂತಿಮ ಪಂದ್ಯದಲ್ಲಿ ಶ್ರೀ ಕೊಟ್ಟೂರೇಶ್ವರ ಮಹಾವಿದ್ಯಾಲಯ ಕೊಟ್ಟೂರು ತಂಡವನ್ನು ಎರಡು ನೇರ ಸೆಟ್ಟುಗಳಲ್ಲಿ ಸೋಲಿಸಿ  ೨೦೧೫-೧೬ನೇ ಸಾಲಿನ ವಿಜಯ ನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪುರುಷರ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ಅದೇರೀತಿ ಮಹಿಳೆಯರ ವಿಭಾಗದಲ್ಲಿ ನಮ್ಮ ಮಹಾವಿದ್ಯಾಲಯದ ತಂಡವು ಅಂತಿಮ ಪಂದ್ಯದಲ್ಲಿ ಎಸ್.ಆರ್.ಎಂ.ಪಿ.ಪಿ. ಸರಕಾರಿ ಪ್ರಥಮ ದರ್ಜೆ ಕಾಲೇಜು ಹೂವಿನಹಡಗಲಿ ಕಾಲೇಜಿನ  ತಂಡವನ್ನು ನೇರ ಸೆಟ್ಟುಗಳಲ್ಲಿ ಸೋಲಿಸಿ ೨೦೧೫-೧೬ನೇ ಸಾಲಿನ ವಿಜಯ ನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಮಹಿಳೆಯರ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ ಮಹಿಳಾ ತಂಡದ ಆಟಗಾರರಾದ ಸುಮಾ ಪಿನ್ನಿ, ನಿರ್ಮಲ, ಪ್ರಿಯಾಂಕ, ಐಶ್ವರ್ಯ, ಚೈತ್ರಾ, ಲಲಿತಾ, ರಾಜೇಶ್ವರಿ ಉತ್ತಮ ಆಟವನ್ನು ಪ್ರದರ್ಶಿಸಿರುತ್ತಾರೆ. ಸುಮಾ ಪಿನ್ನಿ ಕ್ರೀಟಾಕೂಟದ ಉತ್ತಮ ಆಟಗಾರ್ತಿ ಪ್ರಶಸ್ತಿ.

Please follow and like us:
error