ಕಳಂಕಿತ ಸಚಿವರನ್ನು ಕೈಬಿಡಲು ಬಿಜೆಪಿ ಒತ್ತಾಯ

ಭ್ರಷ್ಟಾಚಾರದ ಆರೋಪಗಳನ್ನು ಹೊತ್ತಿರುವ ಡಿ.ಕೆ.ಶಿವಕುಮಾರ ಹಾಗೂ ರೋಷನ್ ಬೇಗ್ ರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಿರುವುದು ಕಾಂಗ್ರೆಸ್ ನ ಅವಕಾಶವಾದಿ ರಾಜಕಾರಣ ತೋರಿಸುತ್ತದೆ. ಕಳಂಕಿತರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದಿದ್ದ  ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರನ್ನು ಸೇರ್ಪಡೆಗೊಳಿಸುವದರ ಮೂಲಕ ನೈತಿಕರಾಜಕಾರಣಕ್ಕೆ ಬದಲಾಗಿ ಅವಕಾಶವಾದಿಯಾಗಿ ಬದಲಾಗಿದ್ದಾರೆ. ಈ ಕೂಡಲೇ ಕಳಂಕಿತ ಸಚಿವರನ್ನು ಸರಕಾರದಿಂದ ಅವರನ್ನು ಕೈಬಿಡಬೇಕು   ಎಂದು ಕರಡಿ ಸಂಗಣ್ಣ  ಆಗ್ರಹಿಸಿದರು.

         ರಾಜ್ಯಪಾಲರಿಗೆ ಅರ್ಪಿಸಿದ ಮನವಿಯಲ್ಲಿ ಕಳಂಕಿತ ಸಚಿವರನ್ನು ಕೈಬಿಡಲು ಮುಖ್ಯಮಂತ್ರಿಗಳಿಗೆ ಸೂಚಿಸ ಬೇಕೆಂದು ಆಗ್ರಹಿಸಿದ್ದಾರೆ.  ಇದಕ್ಕೂ ಮೊದಲು ಅನ್ವರ ಮನಪ್ಪಾಡಿ ಮಾತನಾಡಿದರು. ಪ್ರತಿಭಟನೆಯಲ್ಲಿ ನಗರಸಭೆ ಸದಸ್ಯರಾದ ಪ್ರಾಣೇಶ ಮಾದಿನೂರ , ಸಲಿಂಸಾಬ,ಗವಿಸಿದ್ದಪ್ಪ ಚಿನ್ನೂರ ಹಾಗೂ  ಚಂದ್ರು ಕವಲೂರ,ಚಂದ್ರಶೇಖರ ಗೌಡ ,ಹಾಲೇಶ ಕಂದಾರಿ,ಸರೋಜಾ ಬಾಕಳೆ ಸೇರಿದಂತೆ ಇತರರು ಉಪಸ್ಥಿತರಿದ್ದರು.           
      ಕೊಪ್ಪಳ ಬಿಜೆಪಿ ಕಚೇರಿಯಿಂದ ಅಶೋಕ ವೃತ್ತದವರೆಗೆ ಮೆರವಣಿಗೆಯ ಮೂಲಕ ಬಂದ ಬಿಜೆಯ ಕಾರ್ಯಕರ್ತರು ಅಶೋಕ ವೃತ್ತದಲ್ಲಿ  ಸರಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ  ವಿರುದ್ದ ದಿಕ್ಕಾರ ಕೂಗಿದರು.

complete updte news
ಕಾಂಗ್ರೆಸ್ ಭ್ರಷ್ಟಾಚರ ಬಗ್ಗೆ ದಂದ್ವನೀತಿ ಬಯಲು – ಅನ್ಹರ್ ಮಾನಪಡೆ
 ಕೊಪ್ಪಳ : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊಸ ವರ್ಷದ ಮೊದಲನೆಯ ದಿನದಂದು ರಾಜ್ಯದ ಜನತೆಗೆ ತಮ್ಮ ಸಂಪುಟದಲ್ಲಿ ಭ್ರಷ್ಟಾಚಾರ ಆರೋಪವನ್ನು ಹೋತ್ತಿರುವ ಲೋಕಾಯುಕ್ತ ತನಿಖೆ ಎದುರಿಸುತ್ತಿರುವ ಡಿ.ಕೆ ಶಿವಕುಮಾರ ಮತ್ತು ರೋಷನ್‌ಬೆಗ್ ರವರನ್ನು ಸೆರ್ಪಡೆಮಾಡಿಕೊಂಡು ತಮ್ಮ ಅವಕಾಶವಾದಿ ರಾಜಕಾರಣವನ್ನು ಬಯಲು ಮಾಡಿದ್ದಾರೆ. ಕಳಂಕಿತರನ್ನು ಸಂಪುಟದಲ್ಲಿ ಸೆರ್ಪಡೆ ಮಾಡಿಕೊಳ್ಳುವುದಿಲ್ಲವೆಂದು ಮುಖ್ಯಮಂತ್ರಿಗಳು ಹೈಕಮಾಂಡ್ ನಿರ್ದೆಶನ ತಿರಸ್ಕರಿಸುವ ಎದೆಗಾರಿಕೆಯನ್ನು ತೋರದ ನೈತಿಕ ರಾಜಕಾರಣಕ್ಕೆ ಬದಲಾಗಿ ಅವಕಾಶವಾದಿ ರಾಜಕಾರಣವನ್ನು ಆಯ್ಕೇಮಾಡಿಕೊಂಡಿದ್ದಾರೆ. ಇದರಿಂದ ಇವರ ಮೇಲಿರುವ ಆರೋಪಗಳನ್ನು ಸಿದ್ದಪಡಿಸಲು, ಸಂಬಂದಪಟ್ಟ ಸಾಕ್ಷಾಧಾರಗಳನ್ನು ತಮ್ಮ ಅಧಿಕಾರ ದುರಪಯೋಗದೊಂದಿಗೆ ಎಲ್ಲಾ ಸಾಕ್ಷಾದಾರಗಳನ್ನು ನಿಸ್ಸಂದೇಹವಾಗಿ ನಾಶಪಡಿಸುತ್ತಾರೆ. ಅದಕ್ಕಾಗಿ ತಕ್ಷಣವೇ ಇವರನ್ನು  ಸಂಪುಟದಿಂದ ಕೈ ಬಿಡಬೇಕು ಸತ್ಯ ವಿಷಯ ಹೋರಬರಲು ಆಜ್ಞೆಯನ್ನು ಹೋರಡಿಸಬೇಕು ಎಂದು ಬಿ.ಜೆ.ಪಿ ಜಿಲ್ಲಾಧ್ಯಕ್ಷರಾದ ಸಂಗಣ್ಣ ಕರಡಿಯವರ ನೇತೃತ್ವದಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಯಲ್ಲಿ ರಾಜ್ಯದಿಂದ ಬಂದ ಕೊಪ್ಪಳ ಬಿ ಜೆ ಪಿ ಜಿಲ್ಲಾ ಪ್ರಭಾರಿಗಳಾದ ಅನ್ವರ್ ಮಾನಪಡೆಯವರು ಪ್ರತಿಭಟನೆಯನ್ನು ಉದ್ದೇಶಿಸಿ ಮತನಾಡಿದರು
  ಜಿಲ್ಲಾಧ್ಯಕ್ಷರಾದ ಸಂಗಣ್ಣ ಕರಡಿಯವರು ಮಾತನಾಡಿ ವಿರೋಧ ಪಕ್ಷದ ನಾಯಕರಾದ ಸಂದರ್ಭದಲ್ಲಿ ಆರೋಪ ಹೊತ್ತವರು ಅಧಿಕಾರದಲ್ಲಿ ಮುಂದೆವರಿಯಬಾರದು ಎಂದು ಅಬ್ಬರಿಸುತ್ತಾ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಇದಿಗ ತಮ್ಮ ನಾಯಕತ್ವದ ಸರಕಾರದಲ್ಲಿ ಕಳಂಕಿತ ಅರೋಪ ಹೊತ್ತವರನ್ನು ಸಂಪುಟಕ್ಕೆ ಸೆರ್ಪಡೆ ಮಾಡಿಕೊಳ್ಳಲ್ಲು ಯಾವುದೇ ಹಿಂಜರಿಕೆ ತೋರಲಿಲ್ಲ. ಕಾಂಗ್ರೆಸ್ ಪಕ್ಷವು ಹಲವಾರು ಪ್ರಮುಖ ನಾಯಕರು ಇವರಿಬ್ಬರ ಸಂಪುಟ ಸೇರ್ಪಡೆ ತಮ್ಮ ಪ್ರಭಲ ವಿರೋಧವನ್ನು ಹೋರಹಾಕಿದ್ದಾರೆ. ಕಾಂಗ್ರೆಸ್ ಪಕ್ಷದ ಮುಂದಿನ ಪ್ರಧಾನಿ ಅಭ್ಯರ್ಥಿಯೆಂದು ಬಿಂಬಿರಾಗಿರುವ ರಾಹುಲಗಾಂದಿ ಯವರು ಭ್ರಷ್ಟಾಚಾರದ ವಿರುದ್ದ ತಮ್ಮ ಹೋರಾಟವನ್ನು ಕೇವಲ ಪತ್ರಿಕಾ ಹೇಳಿಕೆಗೆ ಸಿಮೀತಗೊಳಿಸಿ  ಈ ಪ್ರಕರಣದಿಂದ ಸ್ಪಷ್ಠವಾಗುತ್ತದೆ.
ಸಿದ್ದರಾಮಯ್ಯನವರು ಕೂಡಲೆ ಸಂಪುಟಕ್ಕೆ ಸೇರ್ಪಡೆಯಾಗಿರುವ ಕಳಂಕಿತ ಸಚಿವರಿಂದ ರಾಜಿನಾಮೆಯನ್ನು ಪಡೆಯಬೇಕು ಇಲ್ಲದಿದ್ದರೆ ತಾವೇ ರಾಜಿನಾಮೆ ನೀಡಿ. ತಾವು ಕಳಂಕಿತರಲ್ಲವೆಂದು ಸಾಬಿತು ಪಡಿಸಬೇಕು. ಎಂದು ಪ್ರತಿಭಟನೆಯನ್ನು ಉದ್ದೇಶಿ ಮಾತನಾಡಿದರು.
ಈ ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನರಸಿಂಹರಾವ್ ಕುಲಕರ್ಣಿ, ರಾಜು ಬಾಕಳೆ, ಬಿ.ಜೆ.ಪಿ ಮುಖಂಡರಾದ ಅಪ್ಪಣ್ನ ಪದಕಿ, ಚನ್ನವೀರನಗೌಡ ಕೋರಿ, ರವೀಂದ್ರ ವಕೀಲ,  ಬಿ.ನಾರಾಯಣಪ್ಪ, ತಿಪ್ಪೆ ರುದ್ರೆಸ್ವಾಮಿ, ತೋಟಪ್ಪ ಮೇಟಿ, ಶಿವಪ್ಪ ಮುತ್ತಾಳ, ಸಂಗಮೇಶ ಡಂಬಳ, ಉಮೇಶ ಸಜ್ಜನ, ಗವಿಸಿದ್ದಪ್ಪ ಕಂದಾರಿ, ಲಂಕೇಶ, ಮಹಾಂತೇಶ ಮೈನಳ್ಳಿ, ಹಂಬಣ್ಣ ನಾಯಕ, ಮಾರೇಶ ಮುಷ್ಠೂರು, ಹಾಲೇಶ ಕಂದಾರಿ,  ಚಂದ್ರು ಕವಲೂರು, ದೇವಪ್ಪ ಗೂಡ್ಲಾನೂರು, ಸದಾಶಿವಯ್ಯ ಹಿರೇಮಠ, ನಗರಸಭಾ ಸದಸ್ಯರಾದ ಪ್ರಾಣೆಶ ಮಾದಿನೂರು, ಮಲ್ಲಿಕಾರ್ಜುನ ಪೊಲೀಸಪಾಟೀಲ, ಗವಿಸಿದ್ದಪ್ಪ ಚಿನ್ನೂರು, ಸಲಿಂಸಾಬ, ಸುವರ್ಣ ನೀರಲಗಿ, ಮುಖಂಡರಾದ, ಮಂಜುನಾಥ ಪಾಟೀಲ, ಫಕೀರೇಶ ಕುರ್ತಕೋಟಿ, ಬಸಯ್ಯ ಬಸಾಪೂರ,  ಶಿವಪ್ಪ ಗೂಡ್ಲಾನೂರು, ಈಶಪ್ಪ ಹುಬ್ಬಳ್ಳಿ, ದತ್ತುರಾವ್, ಮಾರುತಿ ನಿಕ್ಕಂ, ದಿನೇಶ ಆರೇರ, ಉಮೇಶ ಕುರಡೆಕರ್, ಮಹೆಬೂಬ ಪಾ, ರಸಿದಸಾಬ ಮಿಠಾಯಿ, ಪರಮಾನಂದ ಯಾಳಗಿ, ಚಂದ್ರುಶೇಖರ ಮಸಾಲಿ, ಕೋಟ್ರಪ್ಪ ಸಜ್ಜನ, ಶಂಕ್ರಪ್ಪ ಪಳೂಟಗಿ, ನಾಸೀರ್, ಕೋಟ್ರೇಶ ಶಡ್ಮೀ,   ಮಹೆಶ ಅಂಗಡಿ, ಸಯ್ಯದ್ನೂರು ಪಾಷಾ, ಮಹಿಳಾ ಮುಖಂಡರಾದ ಹೇಮಲತಾ ನಾಯಕ, ಶಾಮಲಾ ಕೋನಾಪೂರ, ವಸುಂದರ ಕರ್ಣಂ, ಸರೋಜಾ ಬಾಕಳೆ, ಹೇಮಕ್ಕ ಮಂಗಳೂರು, ಮತ್ತು ಜಿಲ್ಲಾ ಬಿ ಜೆ ಪಿ ವಕ್ತಾರರಾದ ಚಂದ್ರುಶೇಖರಗೌಡ ಪಾಟೀಲ ಹಲಗೇರಿ ಪಾಲ್ಗೊಂಡಿದ್ದರು,

Leave a Reply