fbpx

ಕೊಪ್ಪಳದಲ್ಲಿ ಸಿನಿಮಾ ನಟರ ಆಯ್ಕೆಗಾಗಿ ಅಭಿನಯ ಶಿಬಿರ

ಕೊಪ್ಪಳ: ೭  : ನಾಗತಿಹಳ್ಳಿ ಕ್ರಿಯೇಷನ್ಸ್ ಲಾಂಛನದಲ್ಲಿ ತಯಾರಾಗುತ್ತಿರುವ ಕಾಡ ಹಾದಿಯ ಹೂಗಳು ಚಿತ್ರಕ್ಕಾಗಿ ಪ್ರತಿಭಾವಂತ ನಟರನ್ನು ಆಯ್ಕೆ ಮಾಡಲು ಹಾಲ್ಕುರಿಕೆ ಥಿಯೇಟರ್ ಕೊಪ್ಪಳದಲ್ಲಿ ಮೂರು ದಿನಗಳ ಸಿನಿಮಾ ಅಭಿನಯ ಶಿಬಿರವನ್ನು ಆಯೋಜಿಸಿದೆ. ೧೦ ರಿಂದ ೫೦ ವರ್ಷ ವಯಸ್ಸಿನ ಬಾಲಕರು-ಬಾಲಕಿಯರು, ಯುವಕರು ಮತ್ತು ಯುವತಿಯರು, ಪುರುಷ ಮತ್ತು ಮಹಿಳೆಯರು ಶಿಬಿರದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ದಿನಾಂಕ ೧೫-೪-೧೪ ರ ಒಳಗೆ ಆಸಕ್ತರು ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಶಿಬಿರವು ದಿನಾಂಕ ೨೩-೪-೨೦೧೪ ರಿಂದ ೨೫-೪-೨೦೧೪ ರವರೆಗೆ  ಶ್ರೀ ಭಾಗೀರತಮ್ಮ ತರಬೇತಿ ಕೇಂದ್ರ ಹೂವಿನಾಳ ಇಲ್ಲಿ ಸಿನಿಮಾ ಅಭಿನಯ ತರಬೇತಿಯನ್ನು ನೀಡಲಾಗುವುದು. ರಂಗ ವಿಜ್ಞಾನಿ ಹಾಲ್ಕುರಿಕೆ ಶಿವಶಂಕರ್ ಶಿಬಿರದ ನಿದೇರ್ಶಕರಾಗಿರುತ್ತಾರೆ.  ಆಯ್ಕೆಯಾದ ಪ್ರತಿಭಾವಂತ ಅಭ್ಯರ್ಥಿಗಳಿಗೆ ಕಾಡ ಹಾದಿಯ ಹೂಗಳು  ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ಕಲ್ಪಿಸಲಾಗುವುದು. 
ಹೆಚ್ಚಿನ ವಿವರಕ್ಕಾಗಿ ಸಂಪರ್ಕಿಸಿ: ೯೩೭೯೭೧೨೦೨೯, ೯೮೪೪೯೦೪೪೩೪
Please follow and like us:
error

Leave a Reply

error: Content is protected !!