fbpx

ಪ್ರಾಮಾಣಿಕ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವಿನ ಸಮಗ್ರ ತನಿಖೆಗೆ ಸಿಬಿಐ ನೇಮಿಸಲು ಆಗ್ರಹ

ಕೊಪ್ಪಳ: ಕೊಪ್ಪಳದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಅಧ್ಯಕ್ಷ ಜಿಲ್ಲಾಧಿಖಾರಿಗಳ ಮುಖಾಂತರ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ೧೬ ರಂದು ದಕ್ಷ ಅಧಿಕಾರಿ ಡಿ. ಕೆ. ರವಿ ಅವರ ನಿಗೂಡ ಸಾವಿಗೀಡಾಗಿದ್ದು ಇದರ ಸಮಗ್ರ ತನಿಖೆಯಾಗಬೇಕು. ಮತ್ತು ವಿಶೇಷ ಸಿಬಿಐ ತಂಡವನ್ನು ರಚಿಸಿ ನಿಸ್ಷಕ್ಷಪಾತ ತನಿಖೆ ನಡೆಸಬೇಕೆಂದು ನಮ್ಮ ಪಕ್ಷ ಆಗ್ರಹಿಸಿ ಮನವಿ ಸಲ್ಲಿಸಿದೆ. 
ಪ್ರಮಾಣಿಕ ಅಧಿಕಾರಿಗಳಿಗೆ ಕರ್ನಾಟಕದಲ್ಲಿ ಉಳಿಗಾಲವಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಹಾಗೂ ಅಧಿಕಾರಿಗಳಿಗೆ ಬೆದರಿಕೆ ಕರೆ, ಇನ್ನಿತರೆ ಧಮಕಿ ಹಾಕಿದ್ದು, ಕಾಣದ ಕೈಗಳ ಮತ್ತು ಬಲಿಷ್ಠ ರಾಜಕಾರಣಿಗಳ ಷಡ್ಯಂತ್ರ ನಡೆದಿರಬಹುದು. ಕರ್ನಾಟಕ ಸರಕಾರ ದಕ್ಷ ಅಧಿಖಾರಿಗಳ ರಕ್ಷಣೆ ಮತ್ತು ಮುಂಜಾಗ್ರತೆ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲವಾಗಿದ್ದು ಸೋಚನಿಯ ವಿಷಯ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ಮತ್ತೊಮ್ಮೇ ವಿಫಲವಾಗಿದೆ. ಸರ್ಕಾರ ದಕ್ಷ ಅಧಿಕಾರಿಗಳ ರಕ್ಷಣೆ ಮತ್ತು ಇವರ ಹಿತವನ್ನು ಕಾಪಾಡಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ನಮ್ಮ ಪಕ್ಷದ ಬೇಡಿಕೆ ಹಾಗೂ ನಮ್ಮ ಪಕ್ಷ ಸದರಿ ಘಟನೆಯ ಸಮಗ್ರ ಸಿಬಿಐ ತನಿಖೆ ಮಾಡಬೇಕೆಂದು ಆಗ್ರಹಿಸುತ್ತದೆ. 
ಈ ಸಂದಭ್ದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾ ಅಧ್ಯಕ್ಷ  ಆದೀಲ್ ಪಟೇಲ್, ಕಾರ್ಯದರ್ಶಿ ಮಹಮ್ಮದ ಅಲಿಮುದ್ದೀನ್, ನಜೀರ ಹುಡಾ, ಏಜಾಜ್ ಅಹ್ಮದ, ಶಬ್ಬಿರ್ ಗುಳೆಕಾರ, ರಾಮಣ್ಣ ತಿಗರಿ, ನಜೀರ ಮುದಗಲ್, ಫಜೀಲ್, ಮದಾನಲಿ ರುಸ್ತುಮ್ ಮುಂತಾದವರು ಉಪಸ್ಥಿತರಿದ್ದರು. 
Please follow and like us:
error

Leave a Reply

error: Content is protected !!