ಸದೃಡ ಸಮಾಜ ನಿರ್ಮಾಣಕ್ಕೆ ಶುದ್ದ ನೀರು ಅವಶ್ಯಕ – ಹೆಚ್. ಕೆ. ಪಾಟೀಲ,

ಕೊಪ್ಪಳ :  ಕೊಪ್ಪಳ ತಾಲೂಕಿನ ಗ್ರಾಮಗಳಾದ ಹಟ್ಟಿ ಕವಲೂರ, ಅಳವಂಡಿ, ಮೈನಳ್ಳಿ ಗ್ರಾಮಗಳಲ್ಲಿ ಹೆಚ.ಕೆ.ಪಾಟೀಲ ಪ್ರತಿಷನದ ವತಿಯಿಂದ ಶುದ್ದ ನೀರು ಘಟಕಗಳ ಚಾಲನೆ ಕುರಿತು ಮಾತನಾಡಿದ ಮಾಜಿ ಸಚಿವರಾದ ಹೆಚ್,ಕೆ ಪಾಟೀಲ, ದೇಶದಲ್ಲಿ ೩,೭೦, ಲಕ್ಷ ಜನ ಅಶುದ್ದನೀರು ಕುಡಿಯುವದರಿಂದ ರೋಗರುಜಿನಗಳಿಗೆ ತುತ್ತಾಗಿದ್ದಾರೆ. ೧೫ ಲಕ್ಷ ಮಕ್ಕಳು ಸಾವಿಗೀಡಾಗಿದ್ದಾರೆ, ಪ್ರತಿ ೨೦ ಸೆಕೆಂಡಿಗೊಂದು ಮಗು ಅಶುದ್ದ ನೀರಿನ ಬಳಕೆಯಿಂದ ಸಾವನ್ನಪ್ಪುತ್ತಿದೆ. ಇದು ನಮ್ಮದೇಶದ ದೊಡ್ಡ ದುರಂತ. ಶುದ್ದ ನೀರು ಕೇವಲ ಶ್ರೀಮಂತರ ಮತ್ತು ಅಧಿಕಾರ ಶಾಹಿಗಳ ಸ್ವತ್ತಾಗಿದೆ. ಆದ ಕಾರಣ ಹೆಚ್.ಕೆ.ಪಾಟೀಲ ಪ್ರತೀಷ್ಠಾನವನ್ನು ಶುದ್ದನೀರಿನ ಬಳಕೆಯಲ್ಲಿ ಉಂಟಾಗುತ್ತಿರುವ ಸಮಾಜಿಕ ಅಸಮಾನತೆ  ದೂರು ಮಾಡಲು ಶುದ್ದ ನೀರಿನ ಘಟಕಗಳನ್ನು ರಾಜ್ಯದ ಎಲ್ಲಾ ಗ್ರಾಮಗಳಲ್ಲಿ ಪ್ರಾರಂಭಿಸಲು ಸಾಂಘಿಕ ಪ್ರಯತ್ನ ಮಾಡುತ್ತಿದೆ. ಈ ನಿಟ್ಟಿನಲ್ಲಿ ಸಮಾಜದ ಎಲ್ಲಾ ವರ್ಗದ ಜನರು ಈ ಬೃಹತ್ ಕಾರ್ಯಕ್ಕೆ ಕೈ ಜೋಡಿಸಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಜಿಲ್ಲಾ ಕಾಂಗ್ರೆಸ ಅಧ್ಯಕ್ಷರಾದ ಕೆ. ಬಸವರಾಜ ಹಿಟ್ನಾಳ ಮಾತನಾಡಿದರು. 
ಎಸ್. ಬಿ. ನಾಗರಳ್ಳಿ , ಜುಲ್ಲುಖಾದರಿ, ಮರ್ದಾನಲಿ ಅಡ್ಡೆವಾಲಿ, ಹೆಚ್.ಎಲ್. ಹಿರೇಗೌಡರ, ನಾಗರಾಜ ಚಳ್ಳುಳ್ಳಿ, ಗುರುಮೂರ್ತಿಸ್ವಾಮಿ, ಈಶಪ್ಪ ಮಾದಿನುರ, ಅಹ್ಮಜದ ಪಟೇಲ, ಹನಮರಡ್ಡಿ ಅಂಗನಕಟ್ಟಿ, ಬಸವರಡ್ಡಿ ಹಳ್ಳಿಕೇರಿ,  ಗವಿಶಿದ್ದಪ್ಪ ಕಂದಾರಿ, ಗವಿಶಿದ್ದಪ್ಪ ಮುದಗಲ್, ಯಂಕನಗೌಡರ, ಭೂಮಕ್ಕನವರ, ಮುದೇಗೌಡ ನಾಗನಗೌಡರ, ಅಪ್ಸರಸಾಬ್ ಇನ್ನು ಅನೇಕರು ಉಪಸ್ಥಿತರಿದ್ದರು. 
Please follow and like us:
error