fbpx

ಗಾಂಧಿ ಜಯಂತಿ : ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ

 ಮಹಾತ್ಮಾಗಾಂಧೀಜಿಯವರ ಜಯಂತಿ ಆಚರಣೆ ಅಂಗವಾಗಿ ಕೊಪ್ಪಳ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ತಾಲೂಕಿನ ಅಳವಂಡಿಯ ಶ್ರೀ ಸಿದ್ದೇಶ್ವ

ರ ಸಂಯುಕ್ತ ಪ.ಪೂ. ಕಾಲೇಜಿನ ಸಹಯೋಗದೊಂದಿಗೆ  ವಿದ್ಯಾರ್ಥಿಗಳಿಗೆ ಚಿತ್ರಕಲೆ ಮತ್ತು ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಯಿತು.

  ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ಮಂಗಳವಾರ ಏರ್ಪಡಿಸಲಾಗಿದ್ದ ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಪಿಯುಸಿ ವಿಭಾಗದ ವಿದ್ಯಾರ್ಥಿಗಳಾದ ದೇವಪ್ಪ ಹರಿಜನ (ಪ್ರಥಮ),  ಮುತ್ತಪ್ಪ ಪುರ್ತಗೇರಿ (ದ್ವಿತೀಯ) ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿ ನಾಗರಾಜ ತೃತಿಯ ಸ್ಥಾನ ಪಡೆದಿದ್ದಾರೆ.  ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ೯ನೇ ತರಗತಿ ವಿದ್ಯಾರ್ಥಿಗಳಾದ ಅನಿಲ್ ಡಾವು (ಪ್ರಥಮ), ಕೆ.ರವಿಕುಮಾರ (ದ್ವಿತಿಯ), ಮಲ್ಲಯ್ಯ ಮೇಗಳಮಠ (ತೃತಿಯ) ಸ್ಥಾನ ಪಡೆದಿದ್ದಾರೆ.  ಕಾಲೇಜಿನ ಉಪನ್ಯಾಸಕರುಗಳಾದ ಎಂ.ಎಸ್. ಹೊಟ್ಟಿನ್, ಪ್ರಾಚಾರ್ಯ ವಿ.ಸಿ. ಬೆನ್ನಳ್ಳಿ, ಹೆಚ್. ಮಹಾನಂದಿ, ಜಿ. ಕುರಡಗಿ, ಕೊಟ್ರೇಶ್ ಅವರು ನಿರ್ಣಾಯಕರಾಗಿ ಪಾಲ್ಗೊಂಡಿದ್ದರು. ಅ.೦೨ ರಂದು ಗಾಂಧೀಜಿ ಜಯಂತಿ ಅಂಗವಾಗಿ ಅಳವಂಡಿಯಲ್ಲಿ ನಡೆಸಲಾಗುವ  ವಿಚಾರಸಂಕಿರಣ ಕಾರ್ಯಕ್ರಮದಲ್ಲಿ ಸ್ಪರ್ಧಾ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಗುವುದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಣೆ ತಿಳಿಸಿದೆ.
Please follow and like us:
error

Leave a Reply

error: Content is protected !!